ಹೊಸಕೋಟೆ: ನಗರದ ಕನಕ ನಗರದಲ್ಲಿರುವ ಕನಕ ಸಮೃದ್ಧಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಶ್ರೀನಿವಾಸಯ್ಯ, ಉಪಾಧ್ಯಕ್ಷರಾಗಿ ಎಚ್.ಜಿ.ಮೋಹನ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಹೊಸಕೋಟೆ: ನಗರದ ಕನಕ ನಗರದಲ್ಲಿರುವ ಕನಕ ಸಮೃದ್ಧಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಶ್ರೀನಿವಾಸಯ್ಯ, ಉಪಾಧ್ಯಕ್ಷರಾಗಿ ಎಚ್.ಜಿ.ಮೋಹನ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸಯ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಎಚ್.ಜಿ.ಮೋಹನ್ ಕುಮಾರ್ ಅವರನ್ನು ಹೊರತುಪಡಿಸಿ ಬೇರೆ ಯಾವೊಬ್ಬ ಸದಸ್ಯರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಮಾಧವರೆಡ್ಡಿ ಅವಿರೋಧ ಆಯ್ಕೆ ಘೋಷಿಸಿದರು.ನೂತನ ಅಧ್ಯಕ್ಷ ಶ್ರೀನಿವಾಸಯ್ಯ ಮಾತನಾಡಿ, ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆ ಮಾಡಿ ಅಧ್ಯಕ್ಷನಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ಧಾರೆ. ಮುಂದಿನ ದಿನಗಳಲ್ಲಿ ಸೊಸೈಟಿ ವಹಿವಾಟನ್ನು ಹೆಚ್ಚಳ ಮಾಡುವ ಮೂಲಕ ಲಾಭಾಂಶದತ್ತ ಕೊಂಡೊಯ್ಯಲು ಎಲ್ಲಾ ನಿರ್ದೇಶಕರ ಸಹಕಾರ ಕೋರಿದರು.
ಉಪಾಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಇತರೆ ಬ್ಯಾಂಕುಗಳಂತೆ ನಮ್ಮ ಸೊಸೈಟಿಯಲ್ಲೂ ಸಹ ಚಿನ್ನಾಭರಣ ಸಾಲ, ಗೃಹ ನಿರ್ಮಾಣ ಮತ್ತು ಖರೀದಿಗಾಗಿ ಸಾಲ, ಸ್ಥಿರಾಸ್ತಿ ಅಡಮಾನ ಸಾಲ, ಸ್ವಸಹಾಯ ಗುಂಪುಗಳ ಸಾಲ ಹಾಗೂ ಠೇವಣಿಗೆ ಬಡ್ಡಿ ಸಹ ನೀಡಲಿದ್ದೇವೆ. ಷೇರುದಾರರು ಧೈರ್ಯವಾಗಿ ವಹಿವಾಟು ಮಾಡಬಹುದು ಎಂದರು.ನೂತನ ನಿರ್ದೇಶಕರಾದ ಮುನಿಶಾಮಣ್ಣ, ಎಂ.ಎ.ಕೃಷ್ಣಾರೆಡ್ಡಿ, ಕೆಎಂ.ಮುನಿರಾಜು, ಸಿ.ಮುನಿಯಪ್ಪ, ಜೆ.ಕೃಷ್ಣಮೂರ್ತಿ, ಸಂಪತ್ ಕುಮಾರ್, ಎ.ನಾರಾಯಣಸ್ವಾಮಿ, ಅಶ್ವಥ್, ಎನ್.ಮಂಜುನಾಥ್, ಹೇಮಲತಾ, ಶೋಭಾ ನಾಗರಾಜ್, ಮುಖ್ಯ ಕಾರ್ಯನಿರ್ವಾಹಕಿ ಎಸ್.ಎಂ.ವಿದ್ಯಾಶ್ರೀ, ಅಕೌಂಟೆಂಟ್ ಬಿ.ಎಸ್.ಪೂಜಾ ಸಿಬ್ಬಂದಿ ವರ್ಗ ಹಾಜರಿದ್ದರು.
ಫೋಟೋ: 6 ಹೆಚ್‌ಎಸ್‌ಕೆ 1ಹೊಸಕೋಟೆಉ ಕನಕ ಸಮೃದ್ಧಿ ಕೋ ಆಪರೇಟಿವ್ ಸೊಸೈಟಿ ಅವಿರೋಧ ಆಯ್ಕೆಯಾಗಿರುವ ಅಧ್ಯಕ್ಷ ಶ್ರೀನಿವಾಸಯ್ಯ, ಉಪಾಧ್ಯಕ್ಷ ಎಚ್.ಜಿ.ಮೋಹನ್ ಕುಮಾರ್ ಅವರನ್ನು ನಿರ್ದೇಶಕರು ಅಭಿನಂದಿಸಿದರು.