ಗ್ರಾಮೀಣ ಜನತೆಯಿಂದ ಕನ್ನಡ ಭಾಷೆಗೆ ಶ್ರೀರಕ್ಷೆ: ವಿ.ಪಿ.ಪೂರ್ಣಾನಂದ ಅಭಿಮತ

| Published : Nov 02 2024, 01:29 AM IST

ಗ್ರಾಮೀಣ ಜನತೆಯಿಂದ ಕನ್ನಡ ಭಾಷೆಗೆ ಶ್ರೀರಕ್ಷೆ: ವಿ.ಪಿ.ಪೂರ್ಣಾನಂದ ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಪ್ರದೇಶಗಳ ಜನರಿಂದಾಗಿ ಇಂದು ಕನ್ನಡ ಭಾಷೆ ಉಳಿದಿದೆ. ಹೃದಯದಲ್ಲಿ ಅಡಗಿರುವ ಕನ್ನಡ ಪ್ರೇಮವನ್ನು ಮಾತಿನ ಮೂಲಕ ವ್ಯಕ್ತಪಡಿಸಿದಾಗ ಭಾಷೆಯ ವೈಶಾಲ್ಯತೆ ಹೆಚ್ಚುತ್ತದೆ ಎಂದು ಕೆಪಿಎಸ್‌ ಕಾಲೇಜಿನ ಪ್ರಾಂಶುಪಾಲ ವಿ.ಪಿ. ಪೂರ್ಣಾನಂದ ನ್ಯಾಮತಿಯಲ್ಲಿ ಹೇಳಿದ್ದಾರೆ.

- ನ್ಯಾಮತಿ ಅರಳೀಕಟ್ಟೆ ವೃತ್ತದಲ್ಲಿ 69ನೇ ಕನ್ನಡ ರಾಜ್ಯೋತ್ಸವ - - - ನ್ಯಾಮತಿ: ಗ್ರಾಮೀಣ ಪ್ರದೇಶಗಳ ಜನರಿಂದಾಗಿ ಇಂದು ಕನ್ನಡ ಭಾಷೆ ಉಳಿದಿದೆ. ಹೃದಯದಲ್ಲಿ ಅಡಗಿರುವ ಕನ್ನಡ ಪ್ರೇಮವನ್ನು ಮಾತಿನ ಮೂಲಕ ವ್ಯಕ್ತಪಡಿಸಿದಾಗ ಭಾಷೆಯ ವೈಶಾಲ್ಯತೆ ಹೆಚ್ಚುತ್ತದೆ ಎಂದು ಕೆಪಿಎಸ್‌ ಕಾಲೇಜಿನ ಪ್ರಾಂಶುಪಾಲ ವಿ.ಪಿ. ಪೂರ್ಣಾನಂದ ಹೇಳಿದರು.

ಪಟ್ಟಣದ ಅರಳೀಕಟ್ಟೆ ವೃತ್ತದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ವಿನಾಯಕ ಕನ್ನಡ ಯುವಕ ಸಂಘ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೆಂಗಳೂರು ಮಹಾನಗರದ ಪ್ರದೇಶಗಳಲ್ಲಿ ಅನ್ಯಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆ ಸೊರಗುತ್ತಿದೆ. ಹಳ್ಳಿಗಳಲ್ಲಿ ಕನ್ನಡ ಬಳಕೆಯು ಪ್ರತಿನಿತ್ಯವೂ ರಾಜ್ಯೋತ್ಸವದಂತೆ ನಡೆಯುತ್ತದೆ. ಎಲ್ಲ ವಿಚಾರಗಳಲ್ಲಿ ಕನ್ನಡ ಭಾಷೆ ಬಳಸುವ ಮೂಲಕ ಗ್ರಾಮೀಣ ಜನತೆ ಕನ್ನಡವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಗ್ರಾಮೀಣರೇ ಕನ್ನಡ ಭಾಷೆಗೆ ಶ್ರೀರಕ್ಷೆ ಎಂದರು.

ತಹಸೀಲ್ದಾರ್‌ ಎಚ್‌.ಬಿ.ಗೋವಿಂದಪ್ಪ ಕನ್ನಡ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯಪೂರ್ವದಲ್ಲಿ ಹಲವು ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರ ಹಲವು ಪ್ರದೇಶಗಳನ್ನು ಒಂದುಗೂಡಿಸಿ, 1956ರ ನ.1ರಂದು ಕರ್ನಾಟಕ ಏಕೀಕರಣ ಮಾಡಲಾಯಿತು. ಅಂದಿನಿಂದ ಪ್ರತಿವರ್ಷ ನ.1ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು.

ಕಸಾಪ ನ್ಯಾಮತಿ ತಾಲೂಕು ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ಪ.ಪಂ. ಮುಖ್ಯಾಧಿಕಾರಿ ಬಿ.ಗಣೇಶ್‌ ರಾವ್‌, ಪ.ಪಂ. ಯೋಜನಾಧಿಕಾರಿ ಎಸ್‌.ಆರ್‌. ವೀರಭದ್ರಯ್ಯ, ಶಿಕ್ಷಣ ಇಲಾಖೆಯ ಮುದ್ದನಗೌಡ, ಕೆಪಿಎಸ್‌ ಕಾಲೇಜಿನ ಉಪನ್ಯಾಸಕ ನವುಲೆ ಗಂಗಾಧರ್‌, ವಿನಾಯಕ ಕನ್ನಡ ಯುವಕ ಸಂಘದ ಅಧ್ಯಕ್ಷ ವೀರಣ್ಣಗೌಡ, ನೌಕರರ ಸಂಘದ ಅಧ್ಯಕ್ಷ ಸಂತೋಷ್‌, ಕನ್ನಡಪರ ಸಂಘಟನೆಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಮುಖಂಡರು ಮತ್ತಿತರರು ಪಾಲ್ಗೊಂಡು, ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

- - - -ಫೋಟೋ: 12024_647.jpg