ಸಾರಾಂಶ
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗಾಯತ್ರಿ ಸಿದ್ದೇಶ್ವರ, ಬಳ್ಳಾರಿ ಕ್ಷೇತ್ರದಲ್ಲಿ ಬಿ.ಶ್ರೀರಾಮುಲು ಗೆದ್ದಾಗಿದ್ದು, ಘೋಷಣೆ ಮಾತ್ರ ಬಾಕಿ ಇದೆ. ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲುತ್ತೇವೆಂದು ನಾವೇನೂ ಸಮ್ಮನೇ ಹೇಳಿಲ್ಲ ಎಂದು ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ದಾವಣಗೆರೆಯಲ್ಲಿ ಹೇಳಿದ್ದಾರೆ.
- ರಾಜ್ಯದ 28 ಕ್ಷೇತ್ರಗಳನ್ನೂ ಗೆಲ್ತೀವಂತಾ ನಾವು ಸುಮ್ಮನೇ ಹೇಳಿಲ್ಲ
- - -ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗಾಯತ್ರಿ ಸಿದ್ದೇಶ್ವರ, ಬಳ್ಳಾರಿ ಕ್ಷೇತ್ರದಲ್ಲಿ ಬಿ.ಶ್ರೀರಾಮುಲು ಗೆದ್ದಾಗಿದ್ದು, ಘೋಷಣೆ ಮಾತ್ರ ಬಾಕಿ ಇದೆ. ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲುತ್ತೇವೆಂದು ನಾವೇನೂ ಸಮ್ಮನೇ ಹೇಳಿಲ್ಲ ಎಂದು ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಹೇಳಿದರು.
ನಗರದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಬೃಹತ್ ರೋಡ್ ಶೋಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ 28 ಕ್ಷೇತ್ರದಲ್ಲೂ ಬಿಜೆಪಿಗೆ ಒಳ್ಳೆಯ ವಾತಾವರಣ ಇದೆ. 2019ರ ಲೋಕಸಭೆ ಚುನಾವಣೆಯಲ್ಲಿ 25 ಕ್ಷೇತ್ರ ಗೆದ್ದಿದ್ದೆವು. ಈಗ 28ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದು ಪುನರುಚ್ಚರಿಸಿದರು.ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಬೇಕು. ದೇಶದ ಸಮಗ್ರ ಅಭಿವೃದ್ಧಿ, ಸುರಕ್ಷತೆ, ಭದ್ರತೆ, ರಕ್ಷಣೆ ಆಗಬೇಕು. ಭಾರತ ಮತ್ತೊಮ್ಮೆ ವಿಶ್ವಗುರು ಆಗಬೇಕು. ಈ ಕಾರಣಕ್ಕಾಗಿ ದೇಶ ಮತ್ತು ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಜನರು ಹೃದಯ ಪೂರ್ವಕವಾಗಿ ನಮ್ಮೆಲ್ಲರನ್ನೂ ಸ್ವಾಗತಿಸುತ್ತಿದ್ದಾರೆ. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗುವುದೂ ಅಷ್ಟೇ ಸತ್ಯ ಎಂದು ಅವರು ತಿಳಿಸಿದರು.
ಸಂಸದ ಸಿದ್ದೇಶಣ್ಣ ನನಗೆ ಹಿರಿಯಣ್ಣ ಇದ್ದಂತೆ. ನಮ್ಮ ಪ್ರತಿ ಕಷ್ಟ, ಸುಖಗಳಲ್ಲೂ ನಮ್ಮೊಂದಿಗಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಾಲದಿಂದಲೂ ನಮ್ಮ ಪಕ್ಷಕ್ಕೆ ಸಿದ್ದೇಶಣ್ಣ ಮತ್ತು ಕುಟುಂಬದವರು ಪ್ರಾಮಾಣಿಕವಾಗಿದ್ದಾರೆ. ಸಿದ್ದೇಶಣ್ಣ ನಮ್ಮ ಅಣ್ಣನಾದರೆ, ಗಾಯತ್ರಿ ಅಮ್ಮನವರು ನಮ್ಮ ಅತ್ತಿಗೆ. ಗಾಯತ್ರಮ್ಮನವರು ಈ ಕ್ಷೇತ್ರದಲ್ಲಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.- - - ಬಾಕ್ಸ್ ಟಿಕೆಟ್ ದಕ್ಕದ ಅಸಮಾಧಾನ ಇಲ್ಲ: ದೇವೇಂದ್ರಪ್ಪ
ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಮಾತನಾಡಿ, ಬಿ.ಶ್ರೀರಾಮುಲು ರಾಜ್ಯದ ನಾಯಕರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲೆಂದು ಬಳ್ಳಾರಿಯಲ್ಲಿ ಅಕಾಶ ನೀಡಲಾಗಿದೆ. ನನಗೆ ಟಿಕೆಟ್ ನೀಡಿಲ್ಲವೆಂಬ ಅಸಮಾಧಾನ ನನಗಿಲ್ಲ. ಬಳ್ಳಾರಿಯಲ್ಲಿ ಶ್ರೀರಾಮುಲು ಗೆಲ್ಲುವುದರಲ್ಲಿ ಎರಡನೇ ಮಾತೇ ಇಲ್ಲ ಎಂದ ಅವರು, ಹರಿಯುವ ನದಿ ನೀರನ್ನು ತಡೆಯಬಹುದು. ಆದರೆ, ಮನುಷ್ಯನ ಮನಸ್ಸು ಹರಿಯುವುದನ್ನು ತಡೆಯಬಹುದೇ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಬಿಜೆಪಿ ತೊರೆದು, ಕಾಂಗ್ರೆಸ್ ಸೇರಿದ ಕುರಿತ ಪ್ರಶ್ನೆಗೆ ವೈ.ದೇವೇಂದ್ರಪ್ಪ ಪ್ರತಿಕ್ರಿಯಿಸಿದರು.- - -
ಕೋಟ್ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯರನ್ನು ಬರ್ಬರವಾಗಿ ಇರಿದು ಕೊಂದಿದ್ದು ಅತ್ಯಂತ ನೋವಿನ ಸಂಗತಿ. ಹುಬ್ಬಳ್ಳಿ ಘಟನೆಯನ್ನು ಬರೀ ಮಾತುಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ಇದು ರಾಷ್ಟ್ರಾದ್ಯಂತ ಸುದ್ದಿಯಾಗಿದೆ. ನಿಜಕ್ಕೂ ಇದೊಂದು ನೋವಿನ ಸಂಗತಿ. ವಿದ್ಯಾರ್ಥಿನಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ ಹಂತಕರಿಗೆ ಕಠಿಣ ಶಿಕ್ಷೆಯಾಗಬೇಕು- ಜಿ.ಜನಾರ್ದನ ರೆಡ್ಡಿ, ಮಾಜಿ ಸಚಿವ
- - - (ಫೋಟೋ: ಜನಾರ್ಧನ ರೆಡ್ಡಿ)