ಶ್ರೀರಾಮುಲು 85 ಕೋಟಿ ಆಸ್ತಿಯ ಒಡೆಯ

| Published : Apr 13 2024, 01:05 AM IST / Updated: Apr 13 2024, 10:05 AM IST

Sriramulu

ಸಾರಾಂಶ

ಶ್ರೀರಾಮುಲು ಬಳಿ ₹5.50 ಲಕ್ಷ ನಗದು ಹಣ ಇದ್ದು, ಪತ್ನಿ ಬಿ.ಭಾಗ್ಯಲಕ್ಷ್ಮಿ ಅವರ ಬಳಿ ₹2.50 ಲಕ್ಷ, ಪುತ್ರ ಧನುಶ್‌ ಬಳಿ ₹1 ಲಕ್ಷ, ಪುತ್ರಿ ಬಿ.ದೀಕ್ಷಿತಾ ಬಳಿ ₹25 ಸಾವಿರ ನಗದು ಹಣವಿದೆ.

ಅಭ್ಯರ್ಥಿ ಹೆಸರು: ಬಿ.ಶ್ರೀರಾಮುಲು

ಪಕ್ಷ : ಬಿಜೆಪಿ

ಕ್ಷೇತ್ರ: ಬಳ್ಳಾರಿ

ವಯಸ್ಸು: 56

ಶಿಕ್ಷ ಣ: ಬಿಎ ಪದವಿ

ಒಟ್ಟು ಚರಾಸ್ತಿ: ₹10.40 ಕೋಟಿ

ಒಟ್ಟು ಸ್ಥಿರಾಸ್ತಿ: 75 ಕೋಟಿ

ಒಟ್ಟು ಸಾಲ: ₹6.69 ಕೋಟಿ

ಒಟ್ಟು ಆಸ್ತಿ: ₹85 ಕೋಟಿ

ಶ್ರೀರಾಮುಲು ಬಳಿ ₹5.50 ಲಕ್ಷ ನಗದು ಹಣ ಇದ್ದು, ಪತ್ನಿ ಬಿ.ಭಾಗ್ಯಲಕ್ಷ್ಮಿ ಅವರ ಬಳಿ ₹2.50 ಲಕ್ಷ, ಪುತ್ರ ಧನುಶ್‌ ಬಳಿ ₹1 ಲಕ್ಷ, ಪುತ್ರಿ ಬಿ.ದೀಕ್ಷಿತಾ ಬಳಿ ₹25 ಸಾವಿರ ನಗದು ಹಣವಿದೆ.

ಶ್ರೀರಾಮುಲು ಬಳಿ ₹1.20 ಕೋಟಿ ಮೌಲ್ಯದ ಬಿಎಂಡಬ್ಲ್ಯು., ₹38.81 ಲಕ್ಷ ಮೌಲ್ಯದ ಬಸ್‌, ₹30 ಲಕ್ಷ ಮೌಲ್ಯದ ಇನೋವಾ ಕಾರ್‌ ಇದೆ.

ಚಿನ್ನಾಭರಣ- ₹2.7ಕೋಟಿ ಮೌಲ್ಯದ 4257ಗ್ರಾಂ ಚಿನ್ನಾಭರಣ, ₹7.79 ಲಕ್ಷ ಮೌಲ್ಯದ 9500 ಗ್ರಾಂ ಬೆಳ್ಳಿ, ಪತ್ನಿ ಬಳಿ ₹1.50 ಕೋಟಿ ಮೌಲ್ಯದ 2330ಗ್ರಾಂ ಚಿನ್ನ, ಪುತ್ರಿ- ₹14.19 ಲಕ್ಷ ಮೌಲ್ಯದ 220ಗ್ರಾಂ, ಪುತ್ರ- ₹6.45 ಲಕ್ಷ ಬೆಲೆಯ 100ಗ್ರಾಂ

ಸಾಲ: ₹6.69 ಕೋಟಿ

ಚರಾಸ್ತಿ ಒಟ್ಟು- ಶ್ರೀರಾಮುಲು ಬಳಿ ₹6.22 ಕೋಟಿ, ಪತ್ನಿ-₹2.28 ಕೋಟಿ, ಪುತ್ರ: ₹1.59 ಕೋಟಿ, ಪುತ್ರಿ: ₹31.96 ಲಕ್ಷ.

ಸ್ಥಿರಾಸ್ತಿ- ಶ್ರೀರಾಮುಲು ₹52 ಕೋಟಿ, ಪತ್ನಿ: ₹22.95 ಕೋಟಿ, ಪುತ್ರ: ₹51.96 ಲಕ್ಷ.

ಒಟ್ಟು ಕುಟುಂಬದ ಆಸ್ತಿ: ₹85 ಕೋಟಿ.

ಕ್ರಿಮಿನಲ್‌ ಕೇಸ್‌ ಮಾಹಿತಿ:

ಭೂ ಕಬಳಿಕೆಗೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ಕೋರ್ಟ್‌ನಲ್ಲಿ, ಅಕ್ರಮ ಆಸ್ತಿ ಪಡೆದ ಬಗ್ಗೆ ಬಳ್ಳಾರಿ ಲೋಕಾಯುಕ್ತದಲ್ಲಿ, ತೆರಿಗೆ ವಂಚನೆ ಕುರಿತು ಬೆಂಗಳೂರಿನಲ್ಲಿ, ಎನ್‌ಎಂಡಿ ಆಕ್ಟ್-2005 ಅಡಿ ಚೆಳ್ಳಿಕೆರೆಯಲ್ಲಿಸೇರಿ ಒಟ್ಟು ಐದು ಪ್ರಕರಣಗಳಿವೆ.