ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ದೇಶದಲ್ಲಿ ಉನ್ನತ ಸ್ಥಾನಗಳು ದೊರೆಯಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಮನೆಯಲ್ಲಿ ಸಂವಿಧಾನ ಪುಸ್ತಕವನ್ನು ಇಟ್ಟುಕೊಳ್ಳುವುದರಿಂದ ಸಣ್ಣ ಕಾನೂನುಗಳು ಸಹ ಸುಲಭವಾಗಿ ತಿಳಿದುಕೊಳ್ಳಬಹುದು. ಇದರಿಂದ ಕಟ್ಟ ಕಡೆಯ ವ್ಯಕ್ತಿಯೂ ಸಮಾನ ಬದುಕನ್ನು ರೂಪಿಸಿಕೊಳ್ಳಬಹುಹುದು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಸಂವಿಧಾನ ದಿನಾಚರಣೆ ಅಂಗವಾಗಿ ಪ್ರಜ್ಞಾವಂತರ ವೇದಿಕೆಯಿಂದ ಪಟ್ಟಣದಲ್ಲಿ ಸಂವಿಧಾನೋತ್ಸವ ಮೆರವಣಿಗೆ ನಡೆಯಿತು.

ಪಟ್ಟಣದ ಕುವೆಂಪು ವೃತ್ತದಲ್ಲಿ ವೇದಿಕೆ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕ್ರಮಕ್ಕೂ ಮುನ್ನ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.

ನಂತರ ವೇದಿಕೆ ಸಂಚಾಲಕ ವಕೀಲ ಸಿ.ಎಸ್.ವೆಂಕಟೇಶ್ ಮಾತನಾಡಿ, ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ದೇಶದಲ್ಲಿ ಉನ್ನತ ಸ್ಥಾನಗಳು ದೊರೆಯಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಮನೆಯಲ್ಲಿ ಸಂವಿಧಾನ ಪುಸ್ತಕವನ್ನು ಇಟ್ಟುಕೊಳ್ಳುವುದರಿಂದ ಸಣ್ಣ ಕಾನೂನುಗಳು ಸಹ ಸುಲಭವಾಗಿ ತಿಳಿದುಕೊಳ್ಳಬಹುದು. ಇದರಿಂದ ಕಟ್ಟ ಕಡೆಯ ವ್ಯಕ್ತಿಯೂ ಸಮಾನ ಬದುಕನ್ನು ರೂಪಿಸಿಕೊಳ್ಳಬಹುಹುದು ಎಂದರು.

ಮೆರವಣಿಯಲ್ಲಿ ವಾಹನಗಳ ಮೇಲೆ ಅಂಬೇಡ್ಕರ್ ಭಾವಚಿತ್ರ, ಸಂವಿಧಾನ ಕುರಿತ ಮಾಹಿತಿ ಪುಸ್ತಕಗಳ ಭಾವಚಿತ್ರ ಇಟ್ಟು ಹೂವಿನಿಂದ ಅಲಂಕರಿಸಿ ಮೈಸೂರು-ಬೆಂಗಳೂರು ಹೆದ್ದಾರಿ ವೃತ್ತದ ಮೂಲಕ ಪಟ್ಟಣ ಮುಖ್ಯ ಬೀದಿಯಲ್ಲಿ ನಡೆಸಲಾಯಿತು.

ಟಮಟೆ ವಾದ್ಯಗಳೊಂದಿಗೆ ವೇದಿಕೆ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ, ರಸ್ತೆಯುದ್ದಕ್ಕೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜಯಘೋಷಗಳ ಕೂಗಿ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮೆರವಣಿಗೆ ಅಂತ್ಯಗೊಳಿಸಿದರು.

ಈ ವೇಳೆ ಡಾ.ಸುಜಯ್ ಕುಮಾರ್, ಭೌದ್ದ ಮಹಾಸಭಾ ಮಾಜಿ ಅಧ್ಯಕ್ಷ ಕೆ.ಟಿ ರಂಗಪ್ಪ, ಮುಸ್ಮೀಂ ಸೌಹಾರ್ಥ ವೇದಿಕೆ ಅಪ್ಸರ್ ಪಾಷ, ಒಕ್ಕಲಿಗ ವಿಕಾಸ ವೇದಿಕೆ ಅಧ್ಯಕ್ಷೆ ಯಮುನಾ, ಕಡತನಾಳು ಜಯಶಂಕರ್, ಎಜಾಜ್ ಪಾಷ, ರೈತ ಸಂಘದ ಶಂಭುಗೌಡ, ಮುಖಂಡ ಪಾಂಡು, ಪ್ರಿಯಾರಮೇಶ್, ಅಮ್ರಿನ್‌ತಾಜ್, ಸಿಪಿಎಂ ಮುಖಂಡೆ ಕಲಾವತಿ, ಪ್ರಜ್ಞಾವಂತರ ವೇದಿಕೆ ಕಾರ್ಯದರ್ಶಿ ಚಿಕ್ಕತಿಮ್ಮೆಗೌಡ ಸೇರಿದಂತೆ ಇತರರು ಇದ್ದರು.