ದೇವಾಲಯದ ಅಂದಿನ ವ್ಯವಸ್ಥಾಪನ ಸಮಿತಿಯಲ್ಲಿ ಸಭೆ ನಡೆಸಿ ಅವರಿಗೆ ನೀಡಿದ್ದ ಗುತ್ತಿಗೆಯನ್ನೂ ಸಹ ರದ್ದು ಪಡಿಸುವಂತೆ ತೀರ್ಮಾನಿಸಲಾಗಿದೆ. ಆದರೂ ಇಂತಹ ಗಂಭೀರ ಆರೋಪ ಹೊತ್ತಿರುವ ಸಿದ್ದರಾಜು ಅವರು ಕಳೆದ 8 ವರ್ಷಗಳಿಂದ ದೇವಾಲಯದಲ್ಲಿ ಹಲವು ಗುತ್ತಿಗೆ ಪಡೆದು ಕಾರ್ಯನಿರ್ವಹಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕಳ್ಳತನ ಆರೋಪ ಇರುವ ವ್ಯಕ್ತಿಗೆ ಅನ್ನ ದಾಸೋಹ ಹಾಗೂ ಲಾಡು ತಯಾರಿಕೆ ಗುತ್ತಿಗೆ ನೀಡಿರುವುದನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಜಯ ಕರ್ನಾಟಕ ಜನಪರ ವೇದಿಕೆಯಿಂದ ಶ್ರೀನಿಮಿಷಾಂಬ ದೇವಾಲಯದ ಇಒ ಮಹೇಶ್ ಅವರಿಗೆ ಮನವಿ ಸಲ್ಲಿಸಿತು.ಪಟ್ಟಣ ಸಮೀಪದ ಗಂಜಾಂ ದೇವಾಲಯದ ಇಒ ಕಚೇರಿಗೆ ಭೇಟಿ ನೀಡಿದ ವೇದಿಕ ತಾಲೂಕು ಅಧ್ಯಕ್ಷ ಕುಮಾರ್, ದೇವಾಲಯದಲ್ಲಿ ಅನ್ನ ದಾಸೋಹ ಭವನದಲ್ಲಿ ಅಡುಗೆ ಮತ್ತು ಲಾಡು ತಯಾರಿಕೆ ಮಾಡಲು ಗುತ್ತಿಗೆ ಪಡೆದಿರುವ ಜೀವನ್ ಶಾಮಿಯಾನ, ಮಮತ ಕ್ಯಾಟರಿಂಗ್ ಮತ್ತು ಶಾಮಿಯಾನ ನಿರ್ವಹಣೆ ಮಾಡುತ್ತಿರುವ ಸಿದ್ದರಾಜು ಅವರು ಈ ಹಿಂದೆ ದೇವಾಲಯದಲ್ಲಿ ಕಳ್ಳತನ ಮಾಡುವ ವೇಳೆ ನೇರವಾಗಿ ಸಿಕ್ಕಿ ಬಿದ್ದಿದ್ದಾರೆ.
ದೇವಾಲಯದ ಅಂದಿನ ವ್ಯವಸ್ಥಾಪನ ಸಮಿತಿಯಲ್ಲಿ ಸಭೆ ನಡೆಸಿ ಅವರಿಗೆ ನೀಡಿದ್ದ ಗುತ್ತಿಗೆಯನ್ನೂ ಸಹ ರದ್ದು ಪಡಿಸುವಂತೆ ತೀರ್ಮಾನಿಸಲಾಗಿದೆ. ಆದರೂ ಇಂತಹ ಗಂಭೀರ ಆರೋಪ ಹೊತ್ತಿರುವ ಸಿದ್ದರಾಜು ಅವರು ಕಳೆದ 8 ವರ್ಷಗಳಿಂದ ದೇವಾಲಯದಲ್ಲಿ ಹಲವು ಗುತ್ತಿಗೆ ಪಡೆದು ಕಾರ್ಯನಿರ್ವಹಿಸುತ್ತಿದ್ದಾರೆ.ಅಲ್ಲದೇ, ಲಾಡು ಟೆಂಡರ್‌ನಲ್ಲಿ ಭಾರೀ ಅವ್ಯವಹಾರ ನಡೆದಿದೆ. ಪ್ರತಿ ಲಾಡು ಒಂದಕ್ಕೆ 29 ಪೈಸೆ ಅತಿ ಕಡಿಮೆ ಬೆಲೆಗೆ ಕೋಟ್ ಮಾಡಿರುವ ಗುತ್ತಿಗೆದಾರನಿಗೆ ನೀಡದೆ, 91 ಪೈಸೆ ಅಧಿಕ ಬೆಲೆಗೆ ಕೋಟ್ ಮಾಡಿರುವ ವ್ಯಕ್ತಿಗೆ ಲಾಡು ತಯಾರಿಕೆ ಮಾಡಲು ಗುತ್ತಿಗೆ ನೀಡಲಾಗಿದೆ. ಈ ಎಲ್ಲಾ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ದೇವಾಲಯದ ಇಒ ಅವರಿಗೆ ಘೇರಾವ್ ಹಾಕುವ ಮೂಲಕ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ನಂತರ ದೇವಾಲಯದ ಇಒ ಮಹೇಶ್ ಈ ಸಂಬಂಧ ಪ್ರತಿಕ್ರಿಯಿಸಿ ಗುತ್ತಿಗೆದಾರ ಸಿದ್ದರಾಜು ಅವರ ಮೇಲಿನ ಆರೋಪಗಳ ಸಂಬಂಧ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತರಲಾಗುವುದು. ನಂತರ ಸಭೆ ತೀರ್ಮಾನದಂತೆ ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು.ಸೆ.೨೫ರಂದು ಶ್ರೀಅನಂತಪದ್ಮನಾಭ ಸ್ವಾಮಿ ಜಯಂತ್ಯುತ್ಸವಕನ್ನಡಪ್ರಭ ವಾರ್ತೆ ಮಂಡ್ಯತಾಲೂಕಿನ ಹೊಸಬೂದನೂರು ಗ್ರಾಮದಲ್ಲಿರುವ ಐತಿಹಾಸಿಕ ಶ್ರೀಅನಂತಪದ್ಮನಾಭ ಸ್ವಾಮಿಯ ಜಯಂತ್ಯುತ್ಸವ ಸೆ.೨೫ರ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಬಿ.ಸಿ.ಕುಮಾರ್ ತಿಳಿಸಿದ್ದಾರೆ. ಅಂದು ಬೆಳಿಗ್ಗೆ ೧೦.೩೦ ರಿಂದ ೧೧.೩೦ರ ವರೆಗೆ ಸಲ್ಲುವ ಶುಭಲಗ್ನದಲ್ಲಿ ಮಹಾ ಮಂಗಳಾರತಿ ನಡೆಯಲಿದೆ. ಮಧ್ಯಾಹ್ನ ೧೨ ಗಂಟೆಗೆ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.