ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಕ್ಷೇತ್ರದ ಜನರು ಅಧಿಕಾರ ನೀಡಿದ ಅಲ್ಪ ಅವಧಿಯಲ್ಲಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿ ತೋರಿಸಿಕೊಟ್ಟಿದ್ದಾರೆ ಎಂದರು.ಜನಪ್ರತಿನಿಧಿಗಳು ಹೇಗಿರಬೇಕು. ಹೇಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂಬುದನ್ನು ಯುವ ಜನಪ್ರತಿನಿಧಿಗಳಿಗೆ ತಿಳಿಸಿಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸುವ ಮೂಲಕ ಆಚರಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬಲ್ಲೇನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಆಗಮಿಸಿ ಒಳ ರೋಗಿಗಳಿಗೆ ಹಣ್ಣು, ಬ್ರೇಡ್‌ಗಳನ್ನ ವಿತರಿಸಿದರು. ನಂತರ ಮಾತನಾಡಿದ ಮಂಜುನಾಥ್, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಕ್ಷೇತ್ರದ ಜನರು ಅಧಿಕಾರ ನೀಡಿದ ಅಲ್ಪ ಅವಧಿಯಲ್ಲಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿ ತೋರಿಸಿಕೊಟ್ಟಿದ್ದಾರೆ ಎಂದರು.ಜನಪ್ರತಿನಿಧಿಗಳು ಹೇಗಿರಬೇಕು. ಹೇಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂಬುದನ್ನು ಯುವ ಜನಪ್ರತಿನಿಧಿಗಳಿಗೆ ತಿಳಿಸಿಕೊಟ್ಟಿದ್ದಾರೆ. ಅವರಿಗೆ ದೇವರು ಆರೋಗ್ಯ, ಆಯಸ್ಸು, ಅಧಿಕಾರ ನೀಡಿ ಬಡವರ ಸೇವೆ ಮಾಡಲು ಅವಕಾಶ ಕಲ್ಪಿಸುವಂತೆ ಪ್ರಾರ್ಥಿಸುತ್ತೇನೆ ಎಂದರು.

ಬಳಿಕ ತಾಲೂಕಿನ ಅರಕೆರೆ ಗ್ರಾಮದ ರವೀಂದ್ರ ಶ್ರೀಕಂಠಯ್ಯ ಅವರ ಮನೆ ಬಳಿ ಸಹಸ್ರಾರು ಅಭಿಮಾನಿಗಳು, ಹಿತೈಷಿಗಳು ಹಾಗೂ ಗ್ರಾಮದ ಮಹಿಳಾ ಸ್ವ-ಸಹಾಯ ಗುಂಪಿನ ನೂರಾರು ಸದಸ್ಯರು ಹೂ ಮಳೆ ಸುರಿದು ವೇದಿಕೆಯತ್ತ ಬರಮಾಡಿಕೊಂಡರು. ನಂತರ ಬೃಹತ್ ಗಾತ್ರದ ಹಾರ ಹಾಗೂ ಕೇಕ್ ಕತ್ತರಿ ಹುಟ್ಟು ಹಬ್ಬವನ್ನ ಆಚರಿಸಿದರು.

ಈ ವೇಳೆ ಮಾಜಿ ಶಾಸಕಿ ಪಾರ್ವತಮ್ಮ ಶ್ರೀಕಂಠಯ್ಯ, ರವೀಂದ್ರ ಅವರ ಪತ್ನಿ ಗೀತಾ ರವೀಂದ್ರ, ಪುತ್ರ ದೇವನಾಂಪ್ರಿಯ ಜೊತೆಯಲ್ಲಿದ್ದು ಹುಟ್ಟು ಹಬ್ಬದ ಶುಭಾಶಯ ಕೋರಿದರು.

ಈ ವೇಳೆ ಬೆಳಗೊಳ ಗ್ರಾಪಂ ಮಾಜಿ ಅಧ್ಯಕ್ಷ ಬಿ.ವಿ.ಲೋಕೇಶ್, ಜೆಡಿಎಸ್ ಮುಖಂಡರಾದ ಬೆಳಗೊಳ ವಿ. ಸಂತೋಷ್, ವಾಸು, ಈರೇಗೌಡ, ಪ್ರಕಾಶ್, ರವಿಕುಮಾರ್, ನಂದೀಶ್, ನಾಗೇಂದ್ರ, ನಾಗಣ್ಣ, ರವಿ, ಹರೀಶ್, ರಾಹುಲ್, ಚಿಂದಗಿರಿಕೊಪ್ಪಲು ಹರ್ಷವರ್ಧನ್, ನಿಖಿಲ್ ಕುಮಾರಸ್ವಾಮಿ ಸಂಘದ ಅಧ್ಯಕ್ಷ ಪ್ರೀತಮ್ ರಾಂಪುರ, ಪಶ್ಚಿಮವಾಹಿನಿ ಸರಸ್ವತಿ, ಪುರಸಭಾ ಮಾಜಿ ಸದಸ್ಯೆ ನಳಿನಿ, ದರಸಗುಪ್ಪೆ ಧನಂಜಯ್ಯ, ಕೆ.ಶೆಟ್ಟಹಳ್ಳಿ ಸುರೇಶ್, ಶರತ್, ಶೈಲೇಂದ್ರ, ತಡಗವಾಡಿ ಸುನೀಲ್ ಸೇರಿಂತೆ ಸಹಸ್ರಾರು ಅಭಿಮಾನಿಗಳು, ಹಿತೈಷಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.