ಶ್ರೀರಂಗಪಟ್ಟಣ ಪುರಸಭಾ ಸದಸ್ಯನಿಂದ ಸ್ವಂತ ಖರ್ಚಿನಲ್ಲಿ ದೇಗುಲ ನವೀಕರಣ

| Published : Mar 07 2025, 11:45 PM IST

ಸಾರಾಂಶ

ಶ್ರೀರಂಗಪಟ್ಟಣ ಪಟ್ಟಣ ಪುರಸಭೆ ವಾರ್ಡ್ ನಂ 10ರ ಪುರಸಭಾ ಸದಸ್ಯ ಎಸ್.ಪ್ರಕಾಶ್ ಗಾಂಧಿನಗರದ ಶ್ರೀಆಧಿಶಕ್ತಿ ಪಟ್ಟಲದಮ್ಮ ದೇಗುಲದ ನವೀಕರಣ ಕಾರ್ಯವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿಸುವ ಮೂಲಕ ಚುನಾವಣೆ ವೇಳೆ ಸ್ಥಳೀಯರಿಗೆ ನೀಡಿದ್ದ ಮಾತು ಉಳಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣ ಪುರಸಭೆ ವಾರ್ಡ್ ನಂ 10ರ ಪುರಸಭಾ ಸದಸ್ಯ ಎಸ್.ಪ್ರಕಾಶ್ ಗಾಂಧಿನಗರದ ಶ್ರೀಆಧಿಶಕ್ತಿ ಪಟ್ಟಲದಮ್ಮ ದೇಗುಲದ ನವೀಕರಣ ಕಾರ್ಯವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿಸುವ ಮೂಲಕ ಚುನಾವಣೆ ವೇಳೆ ಸ್ಥಳೀಯರಿಗೆ ನೀಡಿದ್ದ ಮಾತು ಉಳಿಸಿಕೊಂಡಿದ್ದಾರೆ.

ಆಧಿಶಕ್ತಿ ಪಟ್ಟಲದಮ್ಮ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಅನುದಾನ ನೀಡುವಂತೆ ಸರ್ಕಾರವನ್ನg ಎರಡು ಬಾರಿ ಒತ್ತಾಯಿಸಲಾಗಿತ್ತು. ಮುಜರಾಯಿ ಇಲಾಖೆಗೆ ಒಳಪಡದ ಕಾರಣ ಹಣ ಬಿಡುಗಡೆ ಮಾಡಿರಲಿಲ್ಲ.

ಸಂಪೂರ್ಣವಾಗಿ ದೇಗುಲದ ಮೆಲ್ಛಾವಣಿ ಕಿತ್ತು ಬರುವ ಹಂತದಲ್ಲಿದ್ದು, ಜೊತೆಗೆ ಎಲೆಕ್ಟ್ರಿಕಲ್ ವೈರುಗಳು ಫ್ಯಾನ್ ಹಾಗೂ ಬಣ್ಣದ ಕೆಲಸಕ್ಕೆ ಇಂದು ಚಾಲನೆ ಕೊಟ್ಟಿದ್ದೇನೆ. ಸುಮಾರು 1.5 ಲಕ್ಷದಿಂದ 2 ಲಕ್ಷದ ವರೆಗೆ ಖರ್ಚಾಗಲಿದೆ. ಇನ್ನು ಕೆಲ ದಿನಗಳಲ್ಲಿ ಈ ದೇವಾಲಯದಲ್ಲಿ ಹಬ್ಬ ನಡೆಯಲಿದೆ. ಅಷ್ಟರಲ್ಲಿ ದೇಗುಲದ ನವೀಕರಣ ಕಾರ್ಯ ಮುಗಿಸಿಕೊಡುವುದಾಗಿ ತಿಳಿಸಿದರು.

ಅಲ್ಲದೇ, ವಾರ್ಡ್‌ನ ಪ್ರತಿ ಬೀದಿಗಳಿಗೂ ಕಾಂಕ್ರಿಟ್ ರಸ್ತೆ, ಹೈಮಾಕ್ಸ್ ದೀಪ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ. ವಾರ್ಡ್‌ನ ಜನತೆ ತಮ್ಮ ಸ್ವತ್ತಿಗೆ ಸಂಬಂಧಿಸಿದಂಥೆ ಯಾವುದೇ ದಾಖಲೆಗಳನ್ನು ಹೊಂದದಿದ್ದಲ್ಲಿ ಸರ್ಕಾರ ಹೊಸ ಯೋಜನೆಯಡಿ ಇ-ಖಾತೆ ಮಾಡಿಸಿಕೊಳ್ಳುವಂತೆ ತಿಳಿಸಿದರು.

ವಿದ್ಯಾರ್ಥಿಗಳಿಂದ ಸರ್ಕಾರಿ ಶಾಲೆಗೆ 16 ಸಾವಿರ ರು. ಮೌಲ್ಯದ ಫ್ರೀಡ್ಜ್ ಕೊಡುಗೆ

ಹಲಗೂರು:

ಸಮೀಪದ ಹುಲ್ಲಾಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 7ನೇ ತರಗತಿ ವಿದ್ಯಾರ್ಥಿಗಳು 16 ಸಾವಿರ ರು. ಮೌಲ್ಯದ ಫ್ರೀಡ್ಜ್ ಅನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.

ಮುಖ್ಯ ಶಿಕ್ಷಕಿ ಹೇಮಲತಾ ಮಾತನಾಡಿ, ಶಾಲೆಯಲ್ಲಿ ಬಿಸಿಯೂಟ ಮಾಡುತ್ತಿದ್ದು, ಸೊಪ್ಪು, ತರಕಾರಿ ಮತ್ತಿತರ ಆಹಾರ ಪದಾರ್ಥಗಳು ತಾಜಾತನದಿಂದ ಕೂಡಿಟ್ಟುಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಪೋಷಕರ ಸಹಕಾರದಿಂದ ಮಕ್ಕಳು ಫ್ರೀಡ್ಜ್ಅನ್ನು ನೆನಪಿನ ಕಾಣಿಕೆಯಾಗಿ ನೀಡಿರುವುದು ಖುಷಿ ತಂದಿದೆ. ಶಾಲಾ ಸಿಬ್ಬಂದಿ ವತಿಯಿಂದ ಧನ್ಯವಾದಗಳನ್ನು ಸಲ್ಲಿಸುವೆ ಎಂದರು.

ಈ ವೇಳೆ ಮುಖ್ಯ ಶಿಕ್ಷಕಿ ಹೇಮಲತಾ, ಶಿಕ್ಷಕರಾದ ಎನ್.ಇ.ಅದರ್ಶ, ಶಿಲ್ಪಶ್ರೀ, ಅನ್ನಪೂರ್ಣ, ವಿದ್ಯಾರ್ಥಿಗಳಾದ ಗಾನವಿ, ವರ್ಷ, ಪೂರ್ವಿಕಾ, ದೀಕ್ಷಾ, ರೋಹಿತ್ ಗೌಡ, ಆನಂದ್ ಗೌಡ ಸೇರಿದಂತೆ ಪೋಷಕರು ಭಾಗವಹಿಸಿದ್ದರು.