ಶ್ರೀರಂಗಪಟ್ಟಣ ತಾಲೂಕು ಪತ್ರಕರ್ತರ ಸಂಘಕ್ಕೆ ಆರ್.ಸೋಮಶೇಖರ್ ಅಧ್ಯಕ್ಷ

| Published : Jan 13 2025, 12:46 AM IST

ಶ್ರೀರಂಗಪಟ್ಟಣ ತಾಲೂಕು ಪತ್ರಕರ್ತರ ಸಂಘಕ್ಕೆ ಆರ್.ಸೋಮಶೇಖರ್ ಅಧ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಂಗಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ - ಉಪಾಧ್ಯಕ್ಷರಾಗಿ ಆಯ್ಕೆಯಾದ ಆರ್.ಸೋಮಶೇಖರ್ ಹಾಗೂ ಎಸ್.ಕೃಷ್ಣಮೂರ್ತಿ ಅವರನ್ನು ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆರ್.ಸೋಮಶೇಖರ್ ಹಾಗೂ ಉಪಾಧ್ಯಕ್ಷರಾಗಿ ಎಸ್.ಕೃಷ್ಣಮೂರ್ತಿ ಅವಿರೋಧವಾಗಿ ಭಾನುವಾರ ಆಯ್ಕೆಯಾದರು.

ನಿಕಟ ಪೂರ್ವ ಅಧ್ಯಕ್ಷ ಎಸ್.ಕುಮಾರ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಒಡಂಬಡಿಕೆಯಂತೆ ಆರ್. ಸೋಮಶೇಖರ್ ಅವರನ್ನು ಜಿಲ್ಲಾಧ್ಯಕ್ಷ ಕೆ.ಎನ್ ನವೀನ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ನಂತರ ನವೀನ್‌ಕುಮಾರ್ ಮಾತನಾಡಿ, ನೂತನ ಅಧ್ಯಕ್ಷರು ಸರ್ವ ಸದಸ್ಯರನ್ನ ಒಮ್ಮತಕ್ಕೆ ತೆಗೆದುಕೊಂಡು ಸಂಘದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು. ಈ ಹಿಂದಿನ ಅವಧಿಯಲ್ಲಿನ ಎಲ್ಲಾ ಅಧ್ಯಕ್ಷರು ಉತ್ತಮವಾಗಿ ಕೆಲಸ ಮಾಡಿ ಸಂಘದ ಏಳಿಗೆಗೆ ಶ್ರಮಿಸಿದ್ದಾರೆ. ಅವರ ಮಾರ್ಗದರ್ಶದಲ್ಲಿ ಮತ್ತಷ್ಟು ಅಭಿವೃದ್ಧಿಗೆ ಸಂಘವನ್ನ ತೆಗೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಪ್ರಧಾನ ಕಾರ್ಯದರ್ಶಿ ಆನಂದ್, ರಾಜ್ಯ ಸಂಘದ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಮಾಜಿ ಅಧ್ಯಕ್ಷರಾದ ಕೆ.ಸಿ.ಮಂಜುನಾಥ್, ಬಿ.ಪಿ.ಪ್ರಕಾಶ್, ರಾಷ್ಟ್ರೀಯ ಮಂಡಳಿ ಸದಸ್ಯ ಬಾಲಕೃಷ್ಣ, ರಾಜ್ಯ ಸಮಿತಿ ಸದಸ್ಯರಾದ ಮಂಜುನಾಥ್, ಉಪಾಧ್ಯಕ್ಷರಾದ ಗಣಂಗೂರು ನಂಜೇಗೌಡ, ಕೆ.ಎಂ.ದೊಡ್ಡಿ ರವಿ, ಖಜಾಂಚಿ ನಂಜುಂಡಸ್ವಾಮಿ, ಕಾರ್ಯದರ್ಶಿ ಜಯರಾಮ್, ನಿರ್ದೇಶಕರಾದ ಶಿವನಂಜಯ್ಯ, ನಾಗೇಶ್, ರವೀಶ್, ಶ್ರೀರಂಗಪಟ್ಟಣ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್‌ಕುಮಾರ್, ಮಾಜಿ ಅಧ್ಯಕ್ಷರಾದ ಗಂಜಾಂ ಮಂಜು, ಎಸ್. ಕುಮಾರ್ ಸೇರಿದಂತೆ ಇತರ ಪತ್ರಕರ್ತರು ಇದ್ದರು.

ವೀರಶೈವ ಲಿಂಗಾಯತ ಮಹಾಸಭಾ ಕ್ಯಾಲೆಂಡರ್ ಬಿಡುಗಡೆ

ಪಾಂಡವಪುರ:

ಅಖಿಲ ಭಾರತ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಈ ವೇಳೆ ಪಾಂಡವಪುರ ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲೇಶ್ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಸ್.ಆನಂದ್ ಹಾಗೂ ತಾಲೂಕು ಅಧ್ಯಕ್ಷ ಎಂ.ಶಿವಕುಮಾರ್ ,ಜಯಕುಮಾರ್, ಮೀನಾಕ್ಷಿ, ರುದ್ರೇಶ್, ಕಲಿ ಗಣೇಶ್, ಬಸಪ್ಪ, ರಾಜೇಶ್ವರಿ, ಬಿ.ಪಿ.ಉಮೇಶ್ ಕುಮಾರ್, ಕುಮಾರ, ತಮ್ಮಯ್ಯ, ದಯಾನಂದ, ಪ್ರಾಣೇಶ್, ಬಸಪ್ಪ, ರುದ್ರಸ್ವಾಮಿ, ಪದ್ಮರಾಜು, ಜ್ಯೋತಿ, ಸವಿತಾ, ಶೈಲಾ, ಶಶಿಕಲಾ, ಉಮಾಂಬಿಕಾ ಇತರರು ಇದ್ದರು.