ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕಣ್ಣಿನ ಉಚಿತ ತಪಾಸಣಾ ಶಿಬಿರ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ತಾಲೂಕು ಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾವಳಿ ನಡೆಯಿತು.ಕರ್ನಾಟಕ ರಕ್ಷಣಾ ವೇದಿಕೆ ಎಚ್.ಶಿವರಾಮೇಗೌಡ ಬಣ ತಾಲೂಕು ಶಾಖೆ, ಮಹಾವೀರ್ ಕಣ್ಣಿನ ಆಸ್ಪತ್ರೆಯಿಂದ ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ಕರವೇ ತಾಲೂಕು ಅಧ್ಯಕ್ಷ ಚಂದಗಾಲು ಶಂಕರ್ ಪಂದ್ಯಾವಳಿ ಆಯೋಜಿಸಿ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿನಿಯರು ಭಾಗವಹಿಸಿ ತಮ್ಮ ತಂಡದ ಗೆಲುವುಗಾಗಿ ಸೆಣ ಸಾಟ ನಡೆಸಿದರು.
ಅಂತಿಮವಾಗಿ ಪಟ್ಟಣದ ನ್ಯೂ ಆಕ್ಸ್‌ಫರ್ಡ್ ಶಾಲಾ ವಿದ್ಯಾರ್ಥಿನಿಯರು ಪ್ರಥಮ, ನಗುವನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ದ್ವಿತೀಯ, ಪಟ್ಟಣದ ವಿದ್ಯಾಭಾರತಿ ಶಾಲೆ ತೃತಿಯ ಹಾಗೂ ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾ ವಿದ್ಯಾರ್ಥಿನಿಯರು ನಾಲ್ಕನೇ ಸ್ಥಾನ ಪಡೆದರು. ವಿಜೇತ ತಂಡಕ್ಕೆ ನಗದು ಸಹಿತ ಟ್ರೋಪಿ ವಿತರಣೆ ಮಾಡಿದರು.ಕಣ್ಣಿನ ತಪಾಸಣಾ ಶಿಬಿರದಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿ ಭಾಗವಹಿಸಿ, ತಮ್ಮ ನೇತ್ರ ತಪಾಸಣೆ ಮಾಡಿಸಿಕೊಂಡರು. ನುರಿತ ತಜ್ಞರು ಸ್ಥಳದಲ್ಲೇ ಅಗತ್ಯ ಸಲಹೆ ನೀಡಿದರು. ಶಸ್ತ್ರಚಿಕಿತ್ಸೆ ಅಗತ್ಯವಿರುವವರಿಗೆ ಆಸ್ಪತ್ರೆಗೆ ಭೇಟಿ ನೀಡುವಂತೆ ತಿಳಿಸಿದರು.
ಇದಕ್ಕೂ ಮುನ್ನ ತಹಸೀಲ್ದಾರ್ ಚೇತನಾ ಯಾದವ್ ಕನ್ನಡ ದ್ವಜಾರೋಹಣ ನೆರವೇರಿಸಿ ಕಬಡ್ಡಿ ತಂಡದ ವಿದ್ಯಾರ್ಥಿನಿಯರಿಗೆ ಶುಭ ಕೋರಿದರು. ಈ ವೇಳೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಸೇರಿದಂತೆ ಕ್ರೀಡಾಶಕ್ತರು ವಿದ್ಯಾರ್ಥಿನಿಯರನ್ನು ಆಟದಲ್ಲಿ ಹುರಿದುಂಬಿಸಿದರು.ಡಾ.ಕೆ.ವೈ.ಶ್ರೀನಿವಾಸ್ ಕ್ಯಾತನಹಳ್ಳಿಗೆ ಶ್ರದ್ಧಾಂಜಲಿ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಹೃದಯಾಘಾತದಿಂದ ನಿಧನರಾದ ಡಾ.ಕೆ.ವೈ.ಶ್ರೀನಿವಾಸ್ ಕ್ಯಾತನಹಳ್ಳಿ ಅವರು ಹಲವು ವರ್ಷಗಳಿಂದ ಹತ್ತಾರು ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದರು. ಅವರ ಸೇವೆಗಳು ಶ್ಲಾಘನೀಯ ಎಂದು ಪ್ರಜ್ಞಾವಂತರ ವೇದಿಕೆ ಸಂಚಾಲಕ, ವಕೀಲ ಸಿ.ಎಸ್.ವೆಂಕಟೇಶ್ ಹೇಳಿದರು.
ಪಟ್ಟಣದ ಮುಖ್ಯ ರಸ್ತೆಯ ಲಕ್ಷ್ಮಿದೇವಿ ವೃತ್ತದಲ್ಲಿ ಪ್ರಜ್ಞಾವಂತರ ವೇದಿಕೆ ಆಯೋಜಿಸಿದ್ದ ಡಾ ಕೆ.ವೈ.ಶ್ರೀನಿವಾಸ್ ಕ್ಯಾತನಹಳ್ಳಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸ್ಮರಿಸಿದರು.ನಂತರ ವೆಂಕಟೇಶ್ ಮಾತನಾಡಿ, ವೃತ್ತಿಯಲ್ಲಿ ವೈದ್ಯರಾದರೂ ಶಾಲಾ-ಕಾಲೇಜು ಮಕ್ಕಳಿಗೆ ಪ್ರೋತ್ಸಾಹ, ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ, ಗಿಡನೆಡುವುದು ಸೇರಿದಂತೆ ವೈದ್ಯ ವೃತ್ತಿ ಜೊತೆಗೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದರು ಎಂದರು.
ಈ ವೇಳೆ ಕರವೇ ಸ್ವಾಮಿಗೌಡ, ಶ್ರೀರಂಗನಾಥ ದೇವಾಲಯ ಸಮಿತಿ ಸದಸ್ಯೆ ಆಶಾಲತ ಪುಟ್ಟೆಗೌಡ. ಕಸಾಪ ನಗರಾಧ್ಯಕ್ಷೆ ಸರಸ್ವತಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗಾಯತ್ರಿ ಪಾಲಹಳ್ಳಿ, ಬೌದ್ಧ ಸಮಾಜದ ಅಧ್ಯಕ್ಷ ಕೆ.ಟಿ. ರಂಗಪ್ಪ ಸೇರಿದಂತೆ ಇತರರು ಮಾತನಾಡಿದರು. ಜಯಶಂಕರ ಕಡತನಾಳು, ಸುರೇಶ್, ಶಿವಕುಮಾರ್, ಗೋಪಾಲ ಇತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))