ನಂತರ ಸಂಘದ ಷೇರುದಾರರು ಮೃತರಾದರೆ ಮರಣೋತ್ತರವಾಗಿ ಅವರು ಸಂಘಕ್ಕೆ ಕಟ್ಟಿದ ಷೇರು ಹಣದ ಜೊತೆ ಭವಿಷ್ಯ ನಿಧಿಯಿಂದ 5 ಸಾವಿರ ರೂಗಳನ್ನು ಸಂಘದಿಂದ ಮೃತರ ಕುಟುಂಬಗಳಿಗೆ ನೀಡಲಾಗುತ್ತಿತ್ತು. ಈ ಬಾರಿ ಷೇರುದಾರರಿಗೆ ಇನ್ನಷ್ಟು ಭವಿಷ್ಯ ನಿಧಿ ಹಣವನ್ನು ನೀಡಲು ಮತ್ತೇ 1100 ರು.ಗಳನ್ನು ಭವಿಷ್ಯ ಕಟ್ಟಿಸಿಕೊಂಡು ಮೃತರ ಕುಟುಂಬಕ್ಕೆ 10 ಸಾವಿರ ನೀಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ವಾರ್ಷಿಕ ಮಹಾ ಸಭೆ ರೈತ ಸಭಾ ಭವನದ ಆವರಣದಲ್ಲಿ ನಡೆಯಿತು.

ಅಧ್ಯಕ್ಷ ಎಸ್.ಎಂ.ನಾಗರಾಜು ಮಾತನಾಡಿ, ಹಿಂದಿನ ಆಡಳಿತ ಮಂಡಳಿಯಲ್ಲಿ ನಮ್ಮ ಸಂಘ ಅಪಾರ ನಷ್ಟದಲ್ಲಿಯೇ ನಡೆದುಕೊಂಡು ಬಂದಿತ್ತು. ಹಿಂದಿನ ಅಧ್ಯಕ್ಷ ನಂದೀಶ್ ಅವಧಿಯಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆಯಾಗಿದೆ.ಸಂಘದ ಜಾಗದಲ್ಲಿರುವ ಮಳಿಗೆ, ಕಲ್ಯಾಣ ಮಂಟಪಬಾಡಿಗೆ, ಸಗಟು ಪಡಿತರ ವ್ಯಾಪಾರ ಲಾಭ,ವಾಹನಗಳಿಂದ ಬಾಡಿಗೆ, ಕಾಲೇಜುಗಳಿಂದ, ತೋಟಗಾರಿಕೆ ಲಾಭ, ಬ್ಯಾಂಕ್ ಹೂಡಿಕೆಗಳ ಬಡ್ಡಿ ಇತರ ಆದಾಯಗಳಿಂದ ಬಂದ ಹಣದಲ್ಲಿ ಜಮಾ ಮತ್ತು ಖರ್ಚುಗಳ, ಕಳೆದು ಸಂಘಕ್ಕೆ ಈ ಬಾರಿ 33,39,377 ರು. ಲಾಭ ಬಂದಿದ್ದು, ಈ ಹಿಂದೆ ಇದ್ದ ನಷ್ಟಕ್ಕೆ ಜಮಾ ಮಾಡಲಾಗಿದೆ ಎಂದರು.

ನಂತರ ಸಂಘದ ಷೇರುದಾರರು ಮೃತರಾದರೆ ಮರಣೋತ್ತರವಾಗಿ ಅವರು ಸಂಘಕ್ಕೆ ಕಟ್ಟಿದ ಷೇರು ಹಣದ ಜೊತೆ ಭವಿಷ್ಯ ನಿಧಿಯಿಂದ 5 ಸಾವಿರ ರೂಗಳನ್ನು ಸಂಘದಿಂದ ಮೃತರ ಕುಟುಂಬಗಳಿಗೆ ನೀಡಲಾಗುತ್ತಿತ್ತು. ಈ ಬಾರಿ ಷೇರುದಾರರಿಗೆ ಇನ್ನಷ್ಟು ಭವಿಷ್ಯ ನಿಧಿ ಹಣವನ್ನು ನೀಡಲು ಮತ್ತೇ 1100 ರು.ಗಳನ್ನು ಭವಿಷ್ಯ ಕಟ್ಟಿಸಿಕೊಂಡು ಮೃತರ ಕುಟುಂಬಕ್ಕೆ 10 ಸಾವಿರ ನೀಡಲಾಗುತ್ತದೆ ಎಂದರು.

ಸಂಘದಲ್ಲಿ ಈ ಹಿಂದೆ ಇದ್ದ ಕಾರ್ಯದರ್ಶಿಗಳು ಹಣ ದುರುಪಯೋಗದ ಬಗ್ಗೆ ನ್ಯಾಯಾಲಯದಲ್ಲಿ ವ್ಯಾಜ್ಯಗಳು ಇದ್ದು, ಅವುಗಳು ಎಂದಿನಂತೆ ನಡೆಯುತ್ತಿದೆ ಎಂದು ಹೇಳಿದರು. ಸಂಘದ ಪ್ರಭಾರ ಕಾರ್ಯದರ್ಶಿ ಶಂಕರ್ ಸಂಘದ ಜಮಾ ಖರ್ಚಿನ ಬಗ್ಗೆ ಷೇರುದಾರರಿಗೆ ಸಭೆಯಲ್ಲಿ ಓದಿ ತಿಳಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಸ್ತಿಪುರ ನಾಗರಾಜು, ಎಂಡಿಸಿಸಿ ಬ್ಯಾಂಕ್ ನಿರ್ದೆಶಕ ಬಿ. ಗಿರೀಶ್, ನಿರ್ದೇಶಕರಾದ ಎಂ.ನಂದೀಶ್, ಕೆ.ಜೆ. ರವಿಶಂಕರ್, ಎಸ್.ಜೆ. ವೆಂಕಟರಾಮು, ಸಂದೇಶ್, ಸುಚಿತ್ರ, ಎಲ್.ನಾಗರಾಜು, ಬಿಷಸ್ ಚಂದ್ರಶೇಖರ್, ಶಿವಯ್ಯ ನರಸಿಂಹೇಗೌಡ ಡಿ., ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾಗಭೂಷಣ್ ಸೇರಿದಂತೆ ಇತರ ಸಂಘದ ಷೇರುದಾರರು ಉಪಸ್ಥಿತರಿದ್ದರು.