ಸಾರಾಂಶ
ಕನ್ನಡಪ್ರಭ ವಾರ್ತೆ ಚಡಚಣ
ಸಮೀಪದ ಬರಡೋಲ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ 2024-2029ನೇ ಸಾಲಿಗಾಗಿ ನಡೆದ ಚುನಾವಣೆಯಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಣ ಸತತ ಮೂರನೇ ಅವಧಿಗೆ ಆಯ್ಕೆಯಾಗಿದೆ.ಸಂಘದ ಒಟ್ಟು 12 ಸ್ಥಾನಗಳಲ್ಲಿ 11 ಸ್ಥಾನ ಗೆಲ್ಲುವ ಮೂಲಕ ಜಯಭೇರಿ ಭಾರಿಸಿದೆ. ಶ್ರೀಶೈಲಗೌಡ ಬಿರಾದಾರ ಬಣದಲ್ಲಿ ಹಾಲಿ ಅಧ್ಯಕ್ಷ ವಿಶ್ವನಾಥ ಬಿರಾದಾರ, ಭೀಮರಾಯ ಮೇತ್ರಿ, ಮನೋಜ ಬೋಸಲೆ, ನಿಜಾಮ ಕೊಂಕಣಿ, ಭುವನೇಶ್ವರಿ ಕೊಂಕಣಿ, ಲಕ್ಷ್ಮೀ ಹಾವಿನಾಳ, ನಿಂಗಪ್ಪ ಕುಂಬಾರ, ಗುರುರಾಜ ಚೌದರಿ, ಗಜಾನಂದ ತಳವಾರ, ದೀಪಾ ಕುಲಕರ್ಣಿ, ಶ್ರೀಶೈಲ ಕಟ್ಟಿಮನಿ ಆಯ್ಕೆಯಾಗಿದ್ದರೆ, ವಿರೋಧಿ ಬಣದ ಪಿಂಟು ಪವಾರ ಒಬ್ಬರು ಮಾತ್ರ ಆಯ್ಕೆಯಾಗಿದ್ದಾರೆ. ಭಾನುವಾರ ಸಹಕಾರಿ ಪತ್ತಿನ ಸಂಘದ ಆವರಣದಲ್ಲಿ ಜರುಗಿದ ವಿಜಯೋತ್ಸವದಲ್ಲಿ ಗ್ರಾಮದ ಮುಖಂಡರಾದ ರಾಜುಸಾಹುಕಾರ ಝಳಕಿ, ಬಾಪುರಾಯ ಬಿರಾದಾರ, ಲಾಲಸಾಬ ಬಡಿಗೇರ, ಮಹಾದೇವ ಜೀರಂಕಲಗಿ, ಮಲಕಣ್ಣ ಪಟ್ಟಣಶೆಟ್ಟಿ ಮ ಅಣ್ಣಪ್ಪ ಕುಂಬಾರ, ಸಿದ್ದಣ್ಣ ಕುಂಬಾರ, ಗುರುಶಾಂತ ಕುಂಬಾರ, ತುಕಾರಾಮ ಸಿಂಧೆ, ಅರ್ಜುನ ಮೇತ್ರಿ, ಶ್ರೀಶೈಲ ಜಂಗಲಗಿ, ಶ್ರೀಶೈಲ ಹಾವಿನಾಳ, ಹಣಮಂತ ನಂದೂರ, ಮಸೂತಾ ಕಟ್ಟಿಮನಿ, ವೆಂಕಟೇಶ ಶೇಖದಾರ, ಮಹೇಶ ಕುಲಕರ್ಣಿ, ಸಂಜೀವ ಶೇಖದಾರ, ದತ್ತು ನಿರಾಳೆ, ಸಂಜಯ ಪೂಜೇರಿ, ಪಾಂಡುರಂಗ ಭಜಂತ್ರಿ, ಯಲ್ಲಪ್ಪ ನಾಗೇನವರ, ಹಣಮಂತ ಕ್ಷತ್ರಿ ಇದ್ದರು.