ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ: ತಾಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ಸಹಕಾರಿ ಸಂಘ ನಿಯಮಿತ ಇದರ ಎರಡನೇ ಅವಧಿಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ಶ್ರೀಶೈಲ ಮೇಟಿ ಅವರನ್ನು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಕಾಮರಾಜ ಬಿರಾದಾರ ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಗಣ್ಯರಾದ ವೈ.ಎಚ್.ವಿಜಯಕರ ಅವರು ಮಾತನಾಡಿ, ಶೈಲ ಮೇಟಿ ಅವರು ಕೃಷಿಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಪ್ರಗತಿಪರ ರೈತರಾಗಿ ಮಾತ್ರವಲ್ಲದೇ ಸಮಾಜ ಚಿಂತಕರಾಗಿ ಸಧ್ಯ ಪ್ರತಿಷ್ಠಿತ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವುದು ಅವರ ಕ್ರೀಯಾಶೀಲತೆಗೆ ದೊರೆತ ಉನ್ನತ ಸ್ಥಾನ ಇದಾಗಿದೆ ಎಂದರು.ಇದೇ ವೇಳೆ ಕರ್ನಾಟಕ ಮಾಧ್ಯಮ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಪರುಶುರಾಮ ಕೊಣ್ಣೂರರನ್ನು ಸನ್ಮಾನಿಸಲಾಯಿತು.
ಪರಶುರಾಮ ಕೊಣ್ಣೂರುವರು ಬಡತನದಲ್ಲಿ ಹುಟ್ಟಿ ಬೆಳೆದು ಬಸವಾದಿ ಶರಣರ ಹಾಗೂ ಅಂಬೇಡ್ಕರವರ ಜೀವನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪದವೀಧರರಾಗಿ ಸಾಹಿತಿಗಳಾಗಿ, ಪತ್ರಕರ್ತರಾಗಿ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಧ್ಯ ಕರ್ನಾಟಕ ಮಾಧ್ಯಮ ಒಕ್ಕೂಟದ ಮುದ್ದೇಬಿಹಾಳ ತಾಲೂಕು ಅಧ್ಯಕ್ಷರಾಗಿದ್ದು ಸಂತಸ ತಂದಿದೆ ಎಂದು ವೈ.ಎಚ್.ವಿಜಯಕರ ಶುಭಹಾರೈಸಿದರು.ಹೋಟೇಲ್ ಉದ್ಯಮಿ ಸದಾಶಿವ ಮಠ, ಸಂಗಣ್ಣ ಮೇಲಿನಮನಿ, ಶ್ರೀಶೈಲ ಪೂಜಾರಿ, ಹುಸೇನ ಮುಲ್ಲಾ, ಹಸೇನ ಕಾಳಗಿ, ಅಮರೇಶ ಗೂಳಿ, ಅಶೋಕ ಚಟ್ಟೇರ ಸೇರಿದಂತೆ ಹಲವು ಇದ್ದರು.