ಶ್ರೀಶೈಲ ಪಾದಯಾತ್ರೆಗೆ ಶ್ರೀಗಳಿಂದ ಚಾಲನೆ

| Published : Mar 27 2024, 01:05 AM IST

ಸಾರಾಂಶ

ಮಹಾಲಿಂಗಪುರ: ಚಿಮ್ಮಡ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಆಂಧ್ರಪ್ರದೇಶದ ಶ್ರೀಶೈಲಂ ಕ್ಷೇತ್ರಕ್ಕೆ ಪಾದಯಾತ್ರೆಯ ಮೂಲಕ ತೆರಳುವ ಸುಮಾರು 300ಕ್ಕೂ ಹೆಚ್ಚು ಪಾದಯಾತ್ರಿಕರಿಗೆ ವಿಶೇಷ ಪೂಜೆಯೊಂದಿಗೆ ಶ್ರೀ ಪ್ರಭು ಮಹಾಸ್ವಾಮೀಜಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಚಿಮ್ಮಡ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಆಂಧ್ರಪ್ರದೇಶದ ಶ್ರೀಶೈಲಂ ಕ್ಷೇತ್ರಕ್ಕೆ ಪಾದಯಾತ್ರೆಯ ಮೂಲಕ ತೆರಳುವ ಸುಮಾರು 300ಕ್ಕೂ ಹೆಚ್ಚು ಪಾದಯಾತ್ರಿಕರಿಗೆ ವಿಶೇಷ ಪೂಜೆಯೊಂದಿಗೆ ಶ್ರೀ ಪ್ರಭು ಮಹಾಸ್ವಾಮೀಜಿ ಚಾಲನೆ ನೀಡಿದರು.

ಹೋಳಿ ಹುಣ್ಣಿಮೆಯ ರಾತ್ರಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಜಮಾವಣೆಗೊಂಡ 300ಕ್ಕೂ ಹೆಚ್ಚು ಜನ ಭಕ್ತರು ವಿಶೇಷವಾದ ಕಂಬಿ (ಮಲ್ಲಯ್ಯ) ಪೂಜೆ ನೆರವೇರಿದ ನಂತರ ತೆರಳಿದರು. ನಂತರ ಗ್ರಾಮದ ರಘುನಾಥ ಪ್ರಿಯ ಸಾಧು ಮಹಾರಾಜರ ಮಠಕ್ಕೆ ತೆರಳಿದರು. ಭಕ್ತರಿಗೆ ಶ್ರೀ ಜನಾರ್ಧನ ಮಹಾರಾಜರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಬೀಳ್ಕೊಟ್ಟರು. ಪಾದಯಾತ್ರಿಗಳಿಗೆ ಗ್ರಾಮಸ್ಥರು ಹಣ್ಣು, ನೀರು, ಅಲ್ಪೋಪಹಾರ ವಿತರಿಸುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.

ಗ್ರಾಮದ ಶ್ರೀ ಭ್ರಮರಾಂಬಾ ಮಲ್ಲಿಕಾರ್ಜುನ ಅನ್ನದಾಸೋಹ ಸೇವಾ ಸಮಿತಿಯಿಂದ ಪಾದಯಾತ್ರಿಗಳಿಗೆ ಅನ್ನದಾಸೋಹ ಹಾಗೂ ವೈದ್ಯಕೀಯ ಸೇವೆಯನ್ನು ಮಾ. 28ರಿಂದ ನಿರಂತರವಾಗಿ ಐದು ದಿನಗಳಕಾಲ ಆಧ್ರೆಪ್ರದೇಶದ ಗಡಿ ಬಾಗದ ಕರಿಹೊಳಿ ಹತ್ತಿರ ನಡೆಯಲಿದೆ.