ರಮಾಬಾಯಿ ತ್ಯಾಗದ ಸಂಕೇತ

| Published : Feb 11 2025, 12:49 AM IST

ಸಾರಾಂಶ

ರಮಾಬಾಯಿ ಬಾಬಾಸಾಹೇಬರ ಪ್ರತಿ ಕ್ಷಣದಲ್ಲೂ ಆಸರೆಯಾಗಿ ನಿಂತು ಆತ್ಮಸ್ಥೈರ್ಯವನ್ನು ತುಂಬಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಮಹಾಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ ಜೀವನದ ಯಶಸ್ಸಿನ ಹಿಂದೆ ರಮಾಬಾಯಿಯ ತ್ಯಾಗ ದೊಡ್ಡದಿದೆ. ಅವರು ಒಬ್ಬ ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಸಹೋದರಿಯಾಗಿ, ಗೆಳತಿಯಾಗಿ, ಹಿತೈಷಿಯಾಗಿ ಅವರ ಜೀವನದಲ್ಲಿ ಸಾಥ್ ನೀಡಿದ್ದಾರೆ. ಅವರು ತ್ಯಾಗದ ಸಂಕೇತ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಎಸ್. ಪ್ರಕಾಶ್ ಪ್ರಿಯದರ್ಶನ್ ಹೇಳಿದರು.ಅರವಿಂದನಗರದ ಜೆಎಸ್ಎಸ್ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಎಸ್. ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು ಹಾಗೂ ದಿನಸಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ರಮಾಬಾಯಿ ಅಂಬೇಡ್ಕರರವರ 127ನೇ ಜನ್ಮ ದಿನವನ್ನು ಆಚರಿಸಲಾಯಿತು.ರಮಾಬಾಯಿ ಬಾಬಾಸಾಹೇಬರ ಪ್ರತಿ ಕ್ಷಣದಲ್ಲೂ ಆಸರೆಯಾಗಿ ನಿಂತು ಆತ್ಮಸ್ಥೈರ್ಯವನ್ನು ತುಂಬಿದರು. ಆ ತಾಯಿಯ ಸ್ತ್ರೀ ಕುಲಕ್ಕೆ ಆದರ್ಶವಾಗಿದೆ. ಒಬ್ಬ ಪುರುಷ ಯಶಸ್ವಿಯಾಗಬೇಕಾದರೆ ಒಬ್ಬ ಸ್ತ್ರೀ ಪಾತ್ರ ಅತ್ಯವಶ್ಯಕವಾಗಿದೆ. ಸ್ತ್ರೀ ಇಲ್ಲದಿದ್ದರೆ ಈ ಭೂಮಿಗೆ ಅಸ್ತಿತ್ವವೇ ಇಲ್ಲದಂತಾಗುತ್ತದೆ ಎಂದರು.ಪತ್ರಿಕ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಮುಖಂಡರಾದ ಸುಬ್ರಮಣಿ, ವೀರಭದ್ರ ಸ್ವಾಮಿ, ಛಾಯಾ, ಯಶ್ವಂತ್ ಕುಮಾರ್, ಮಹದೇವ್, ಮಹೇಶ್, ಮಹದೇವಸ್ವಾಮಿ, ಎಸ್.ಪಿ. ಅಕ್ಷಯ್, ಹರ್ಷಿತ್ ಮೊದಲಾದವರು ಇದ್ದರು.