ಸಾರಾಂಶ
ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆಬೆಂಗಳೂರು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲೆ ಇದರ ವಾರ್ಷಿಕ ಮಹಾಸಭೆಯು ಸ್ಟೂಡೆಂಟ್ ಸೆಂಟರ್ ಆರ್.ಟಿ ನಗರದಲ್ಲಿ ಜಿಲ್ಲಾ ಅಧ್ಯಕ್ಷರಾದ ಲತೀಫ್ ನಈಮಿ ಉಸ್ತಾದರ ಅಧ್ಯಕ್ಷತೆಯಲ್ಲಿ ಜರಗಿತು. ಎಸ್‌ವೈಎಸ್ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಪಯೋಟ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬೀಬ್ ರವರು ವಾರ್ಷಿಕ ವರದಿ ವಾಚಿಸಿದರೆ, ಕೋಶಾಧಿಕಾರಿ ಅಖ್ತರ್ ಹುಸೈನ್ ಲೆಕ್ಕಪತ್ರ ಮಂಡಿಸಿದರು.ಬಳಿಕ ಕ್ರಮವಾಗಿ ಅಲ್ತಾಫ್ ಅಲಿ ಸಿಸಿ , ಅಬೂಬಕ್ಕರ್ ಅಹ್ಶನಿ ರೈನ್‌ಬೋ, ಫಾರೂಕ್ ಅಮಾನಿ ಕ್ಯೂಡಿ, ಸಿದ್ದೀಕ್ ಕಾಜೂರು ಪಬ್ಲಿಕೇಶನ್, ಹೈದರ್ ಇಲೆಕ್ಟ್ರಾನಿಕ್ ಸಿಟಿ ದಅವಾ, ಶಂಸುದ್ದೀನ್ ಜೆಪಿ ನಗರ ಮೀಡಿಯಾ, ನಿಝರ್ ಖಾದ್ರಿ ಕ್ಯಾಂಪಸ್, ನೌಫಲ್ ಅಡೋರ ಐಟಿ ವರದಿಯನ್ನು ವಾಚಿಸಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ಕರ್ನಾಟಕ ಮುಸ್ಲಿಂ ಜಮಾಅತ್ ಸಂಘಟನಾ ಕಾರ್ಯದರ್ಶಿಗಳಾದ ಮುಜೀಬ್ ಸಖಾಫಿ ತರಗತಿ ನಡೆಸಿಕೊಟ್ಟರು. ಎಸ್ಎಂಎ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ರಾಜ್ಯ ರೈನ್‌ಬೋ ಕಾರ್ಯದರ್ಶಿ ಶಿಹಾಬ್ ಮಡಿವಾಳ ಕೌನ್ಸಿಲ್ ಗೆ ನೇತೃತ್ವ ನೀಡಿದರು. ಅಲ್ತಾಫ್ ಅಲಿ ಸ್ವಾಗತಿಸಿ, ಸಿದ್ದಿಕ್ ಕಾಜೂರ್ ಧನ್ಯವಾದ ಸಮರ್ಪಿಸಿದರು.