ಸಾರಾಂಶ
ಉಪ್ಪಿನಂಗಡಿ: ಎಸ್ಸೆಸ್ಸೆಫ್ ತುಂಬೆದಡ್ಕ ಶಾಖೆಗೆ ಇತ್ತೀಚೆಗೆ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. ವಾರ್ಷಿಕ ಕೌನ್ಸಿಲ್ ಕಾರ್ಯಕ್ರಮಕ್ಕೆ ಉಸ್ಮಾನ್ ಸಖಾಫಿ ಉಸ್ತಾದರು ಚಾಲನೆ ನೀಡಿದರು. ಉಸ್ಮಾನ್ ಸಖಾಫಿ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಸದಸತ್ವ ಪ್ರಾಯ ಮೀರಿದ ಸದಸ್ಯರಾದ ಆಶ್ರಫ್, ಶಮೀರ್(ಯಂಶ), ಬಶೀರ್, ಮುನೀರ್ ರವರಿಗನ್ನು ಬೀಳ್ಕೊಡಲಾಯಿತು. ಆಸೀಫ್ ಮುಈನಿ ಉಸ್ತಾದರು ಸಂಘಟನಾ ತರಗತಿ ಮಂಡಿಸಿ 2024ರ ಸಮಿತಿಯನ್ನು ಬರ್ಕಾಸ್ತು ಗೊಳಿಸಿ, ಹೊಸ ಸಮಿತಿ ರಚಿಸಲಾಯಿತು.ಅಧ್ಯಕ್ಷರಾಗಿ ಸ್ವಾದಿಕ್ ಸ-ಅದಿ ಅಲ್-ಅದವಿ, ಉಪಾಧ್ಯಕ್ಷರಾಗಿ ಸ್ವಾಲಿಹ್ ಫಾಳಿಲಿ, ಕಾರ್ಯದರ್ಶಿಯಾಗಿ ನಾಸಿರ್ ಕೆ.ಪಿ. ನೇಮಕಗೊಂಡರು. ಕೋಶಾಧಿಕಾರಿಯಾಗಿ ಸ್ವಾದಿಕ್, ಜಿ.ಡಿ. ಕಾರ್ಯದರ್ಶಿಯಾಗಿ ಸಾಬಿತ್ ಆಗಳ್ತಿಮಾರ್, ಕ್ಯೂಡಿ ಕಾರ್ಯದರ್ಶಿಯಾಗಿ ಸಫ್ವಾನ್ ಕೆ.ಪಿ., ಕ್ಯಾಂಪಸ್ ಕಾರ್ಯದರ್ಶಿಯಾಗಿ ಸತ್ತಾರ್, ದಅವಾ ಕಾರ್ಯದರ್ಶಿಯಾಗಿ ಸಲಾವುದ್ದೀನ್ ಹಾಶಿಮಿ, ರೈನ್‌ಬೋ ಕಾರ್ಯದರ್ಶಿಯಾಗಿ ಮಿಫ್ಹಾಂ, ಮೀಡಿಯಾ ಕಾರ್ಯದರ್ಶಿಯಾಗಿ ಮಿಕ್ದಾದ್, ಸದಸ್ಯರಾಗಿ ಆಸೀಫ್ ಮುಈನಿ, ಅಬುಬಕ್ಕರ್ ಝುಹ್ರಿ, ತುಫೈಲ್, ಸಿಮಾಕ್, ಸ್ವಾದಿಕ್ , ಸಲ್ವಾನ್ ಆಯ್ಕೆಯಾದರು. ಹೊಸ ಅಧ್ಯಕ್ಷರ ಭಾಷಣದ ಬಳಿಕ ನೂತನ ಕಾರ್ಯದರ್ಶಿ ವಂದಿಸಿದರು. ಸೆಕ್ಟರ್ ವೀಕ್ಷಕರಾಗಿ ಝೈನುದ್ದೀನ್, ಮಸೂದ್, ಜೌಹರ್,ಅಶ್ಬಾಕ್, ಪಾಲ್ಗೊಂಡಿದ್ದರು. ಅಬೂಬಕ್ಕರ್ ಝುಹ್ರಿ ಅವರು ಸ್ವಾಗತಿಸಿದರು.