ಎಸ್ಸೆಸ್ಸೆಲ್ಸಿ: ಮುಂಡರಗಿ ತಾಲೂಕಿಗೆ ಶೇ.63.40ರಷ್ಟು ಫಲಿತಾಂಶ

| Published : May 03 2025, 12:21 AM IST

ಎಸ್ಸೆಸ್ಸೆಲ್ಸಿ: ಮುಂಡರಗಿ ತಾಲೂಕಿಗೆ ಶೇ.63.40ರಷ್ಟು ಫಲಿತಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡರಗಿ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಶೇ. 63.40ರಷ್ಟಾಗಿದೆ. ತಾಲೂಕಿನಲ್ಲಿ ಈ ಬಾರಿ ಒಟ್ಟು1954 ಮಕ್ಕಳು ಪರೀಕ್ಷಗೆ ಹಾಜರಾಗಿದ್ದರು. ಅದರಲ್ಲಿ 1239 ಮಕ್ಕಳು ತೇರ್ಗಡೆಯಾಗಿದ್ದು, ತಾಲೂಕಿನ ಒಟ್ಟಾರೆ ಫಲಿತಾಂಶ ಶೇ. 63.49ರಷ್ಟಾಗಿದೆ.

ಮುಂಡರಗಿ: ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಶೇ. 63.40ರಷ್ಟಾಗಿದೆ. ತಾಲೂಕಿನಲ್ಲಿ ಈ ಬಾರಿ ಒಟ್ಟು1954 ಮಕ್ಕಳು ಪರೀಕ್ಷಗೆ ಹಾಜರಾಗಿದ್ದರು. ಅದರಲ್ಲಿ 1239 ಮಕ್ಕಳು ತೇರ್ಗಡೆಯಾಗಿದ್ದು, ತಾಲೂಕಿನ ಒಟ್ಟಾರೆ ಫಲಿತಾಂಶ ಶೇ. 63.49ರಷ್ಟಾಗಿದೆ.

ತಾಲೂಕಿನ ರಾಟಿ ಕೊರ್ಲಹಳ್ಳಿಯ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಕಾವ್ಯಾ ಯಮನೂರಪ್ಪ ಉಪ್ಪಾರ 622 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ತಾಲೂಕಿಗೆ ಪ್ರಥಮಸ್ಥಾನ ಪಡೆದುಕೊಂಡಿದ್ದಾಳೆ. ಮುಂಡರಗಿ ಪಟ್ಟಣದ ಜ.ಅ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಆದರ್ಶ ಪಾಂಡಪ್ಪ ಕಳ್ಳಿ 618 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾನೆ.ಹಿರೇವಡ್ಡಟ್ಟಿಯ ಎಸ್ಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಲಂಕೇಶ್ ಗಂಗಾಧರ ಬೋರಿನ 615 ಅಂಕಗಳನ್ನು, ಮುಂಡರಗಿ ಎಸ್.ಎಫ್.ಎಸ್. ಶಾಲೆಯ ವಿದ್ಯಾರ್ಥಿ ಸಂದೇಶ ಶರಣಪ್ಪ ನವಲಗುಂದ 616 ಅಂಕಗಳನ್ನು, ಮುಂಡರಗಿ ಎಸ್.ಎಫ್.ಎಸ್.ಶಾಲೆಯ ಪ್ರತೀಕ್ಷಾ ನಾಗೇಶ್ ನಾಯಕ 616 ಅಂಕಗಳನ್ನು ಪಡೆದುಕೊಂಡು ಮೂರು ಜನ ವಿದ್ಯಾರ್ಥಿಗಳು ತಾಲೂಕಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ತಾಲೂಕಿನಲ್ಲಿ ಮೂರು ಜನ ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದು, ಡೋಣಿ ಕರ್ನಾಟಕ ಪಬ್ಲಿಕ ಸ್ಕೂಲ್‌ನ ಸಹನಾ ಸಿದ್ದಲಿಂಗನಗೌಡ ಹರ್ತಿ 609 ಅಂಕಗಳನ್ನು ಪಡೆದುಕೊಂಡು ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಡೋಣಿ ಕರ್ನಾಟಕ ಪಬ್ಲಿಕ ಸ್ಕೂಲ್‌ನ ಸೌಮ್ಯಾ ಬಸನಗೌಡ ಪಾಟೀಲ600 ಅಂಕಗಳನ್ನು ಪಡೆದುಕೊಂಡು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ. ತಾಲೂಕಿನ ಬರದೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶ್ರೀದೇವಿ ದೇವೇಂದ್ರಪ್ಪ ಚಿಕ್ಕಣ್ಣವರ ಕನ್ನಡ ವಿಷಯದಲ್ಲಿ 598 ಅಂಕಗಳನ್ನು ಪಡೆದುಕೊ‍ಳ್ಳುವ ಮೂಲಕ ತಾಲೂಕಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಜಿಲ್ಲೆಯಲ್ಲಿ ಮುಂಡರಗಿ ತಾಲೂಕು 4ನೇ ಸ್ಥಾನದಲ್ಲಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಫಡ್ನೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.