ಉತ್ತರಕನ್ನಡ ಜಿಲ್ಲೆಯಲ್ಲಿ ಸುಗಮವಾಗಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ

| Published : Mar 22 2025, 02:01 AM IST

ಉತ್ತರಕನ್ನಡ ಜಿಲ್ಲೆಯಲ್ಲಿ ಸುಗಮವಾಗಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾರವಾರ ಶೈಕ್ಷಣಿಕ ಜಿಲ್ಲೆಯ ೫ ತಾಲೂಕಿನಲ್ಲಿ ತೆರೆಯಲಾದ ೩೭ ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದೆ.

ಕಾರವಾರ: ಕಾರವಾರ ಶೈಕ್ಷಣಿಕ ಜಿಲ್ಲೆಯ ೫ ತಾಲೂಕಿನಲ್ಲಿ ತೆರೆಯಲಾದ ೩೭ ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದ್ದು, ಮೊದಲ ದಿನ ಸುಗಮವಾಗಿ ನಡೆದಿದೆ. ೯೩೩೫ ವಿದ್ಯಾರ್ಥಿಗಳು ಪರೀಕ್ಷೆಗೆ ಕಟ್ಟಿದ್ದು, ಅವರಲ್ಲಿ ೯೨೦೯ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ೧೨೬ ಜನ ಗೈರಾಗಿದ್ದಾರೆ.

ಅಂಕೋಲಾ ತಾಲೂಕಿನಲ್ಲಿ ೧೧೪೩ ಜನರಲ್ಲಿ ೧೧೩೫ ಜನರು ಪರೀಕ್ಷೆ ಎದುರಿಸಿದ್ದು, ೮ ಜನ ಗೈರಾಗಿದ್ದಾರೆ. ಭಟ್ಕಳ ತಾಲೂಕಿನಲ್ಲಿ ೨೨೧೦ ವಿದ್ಯಾರ್ಥಿಗಳು ಪರೀಕ್ಷೆಗೆ ಕಟ್ಟಿದ್ದು, ೨೧೯೮ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ೧೨ ಜನ ಪರೀಕ್ಷೆ ಬರೆದಿಲ್ಲ. ಹೊನ್ನಾವರದಲ್ಲಿ ೧೯೪೭ ವಿದ್ಯಾರ್ಥಿಗಳಲ್ಲಿ ೧೯೨೬ ವಿದ್ಯಾರ್ಥಿಗಳು ಹಾಜರಾಗಿದ್ದರೆ, ೧೫ ಜನ ಗೈರಾಗಿದ್ದಾರೆ. ಕಾರವಾರದಲ್ಲಿ ೧೯೪೩ ಜನ ಪರೀಕ್ಷೆಗೆ ಕಟ್ಟಿದ್ದು, ೧೮೬೨ ಜನ ಬರೆದಿದ್ದಾರೆ. ೮೧ ಜನ ಗೈರಾಗಿದ್ದಾರೆ. ಕುಮಟಾ ತಾಲೂಕಿನಲ್ಲಿ ೨೦೯೮ ವಿದ್ಯಾರ್ಥಿಗಳು ಪರೀಕ್ಷೆಗೆ ಕಟ್ಟಿದ್ದು, ೨೦೮೮ ಜನ ಬರೆದಿದ್ದಾರೆ. ೧೦ ಜನರು ಮೊದಲ ದಿನದ ಪರೀಕ್ಷೆ ಬರೆದಿಲ್ಲ.ಪರೀಕ್ಷಾ ಕೇಂದ್ರದಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ನೀರು, ವೈದ್ಯಕೀಯ ವ್ಯವಸ್ಥೆ ಒಳಗೊಂಡು ಮೂಲಭೂತ ಅವಶ್ಯಕತೆ ಒದಗಿಸಲಾಗಿತ್ತು.

ಕಾರವಾರದಲ್ಲಿ ಎಸ್ಸೆಸ್ಸಲ್ಸಿ ಪರೀಕ್ಷಾ ಕೇಂದ್ರದಿಂದ ಹೊರಬರುತ್ತಿರುವ ವಿದ್ಯಾರ್ಥಿಗಳು.