ಸಾರಾಂಶ
ಕನ್ನಡ ಪ್ರಭ ವಾರ್ತೆ ಮಳವಳ್ಳಿ
2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1ಯಲ್ಲಿ ತಾಲೂಕಿಗೆ ಶೇ.68.59ರಷ್ಟು ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ.ಉಮಾ ತಿಳಿಸಿದ್ದಾರೆ.ಕಳೆದ ಸಾಲಿನಲ್ಲಿ ತಾಲೂಕಿನ 75 ಶಾಲೆಗಳಿಂದ 3126 ಮಂದಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಎದುರಿಸಿದ್ದರು. ಅವರಲ್ಲಿ 2144 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ತಾಲೂಕಿನ ಕಿರುಗಾವಲು ಗ್ರಾಮದ ಜ್ಞಾನಗಂಗಾ ಎಜುಕೇಷನ್ ಟ್ರಸ್ಟ್ ಶಾಲೆ ಹಾಗೂ ಹಲಗೂರಿನ ಮೊರಾಜಿ ವಸತಿ ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿವೆ ಎಂದಿದ್ದಾರೆ.
ಪಟ್ಟಣದ ಹೊರವಲಯದ ಮಾರೇಹಳ್ಳಿ ಬಳಿಯ ಆದರ್ಶ ವಿದ್ಯಾಲಯ ವಿದ್ಯಾರ್ಥಿನಿ ಜುಬೀಯಾ ಖಾನಂ 625ಕ್ಕೆ 623 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಿರುಗಾವಲಿನ ಆದರ್ಶ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಭುವನ 622, ಜ್ಞಾನಗಂಗಾ ಎಜುಕೇಷನ್ ಟ್ರಸ್ಟ್ ಶಾಲೆಯ ವಿದ್ಯಾರ್ಥಿನಿ ಕೆ.ಸಿ.ನಿಸರ್ಗ 622 ಹಾಗೂ ಮಾರೇಹಳ್ಳಿ ಆದರ್ಶ ವಿದ್ಯಾಲಯ ವಿದ್ಯಾರ್ಥಿನಿ ಎಂ.ಎನ್.ದೀಪಿಕಾ 621 ಅಂಕ ಗಳಿಸಿದ್ದಾರೆ. ತಾಲೂಕಿನ 51 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಪಡೆದಿದ್ದಾರೆ. ಸರ್ಕಾರಿ ಶಾಲೆಗಳು ಶೇ.70.06, ಅನುದಾನ ರಹಿತ ಶಾಲೆಗಳು ಶೇ.80.45 ಹಾಗೂ ಅನುದಾನಿತ ಶಾಲೆಗಳು ಶೇ.55.13ರಷ್ಟು ಫಲಿತಾಂಶ ಪಡೆದಿವೆ ಎಂದು ತಿಳಿಸಿದ್ದಾರೆ.ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಿ.ಪುನೀತಾ ರಾಜ್ಯಕ್ಕೆ ದ್ವಿತೀಯ ಸ್ಥಾನ
ಮದ್ದೂರು:ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಟ್ಟಣದ ಶಿವಪುರದ ಪೂರ್ಣಪ್ರಜ್ಞಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸಿ.ಪುನೀತಾ ರಾಜ್ಯಕ್ಕೆ ದ್ವಿತೀಯ ಸ್ಥಾನಗಳಿಸಿ ತಾಲೂಕು ಮತ್ತು ಶಾಲೆಗೆ ಕೀರ್ತಿ ತಂದಿದ್ದಾಳೆ ಎಂದು ಸಂಸ್ಥೆ ಕಾರ್ಯದರ್ಶಿ ಎಚ್.ಆರ್.ಅನಂತೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 624 ಶೇ.(99.84) ಅಂಕಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನಗಳಿಸಿದ ಸಿ.ಪುನೀತಾ, ರಾಜ್ಯಕ್ಕೆ 4 ನೇ ಸ್ಥಾನಗಳಿಸಿದ ಎಲ್.ಅನನ್ಯ ಹಾಗೂ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.ಪರೀಕ್ಷೆಗೆ ಕುಳಿತ್ತಿದ್ದ 175 ವಿದ್ಯಾರ್ಥಿಗಳಲ್ಲಿ 169 ಮಂದಿ ಉತ್ತೀಣರಾಗುವ ಮೂಲಕ ಶೇ.96 ರಷ್ಟು ಫಲಿತಾಂಶ ಪಡೆದುಕೊಂಡಿದೆ. ಇವರಲ್ಲಿ 15 ಮಂದಿ 600 ಕ್ಕಿಂತ ಹೆಚ್ಚು ಅಂಕ, ಅತ್ಯುನ್ನತ ಶ್ರೇಣಿಯಲ್ಲಿ 58 ಮಂದಿ ಉತೀರ್ಣರಾಗಿದ್ದಾರೆ ಎಂದರು.
ಎಲ್.ಅನನ್ಯ 622 ಅಂಕ ರಾಜ್ಯಕೆ 4 ನೇ ಸ್ಥಾನ, ಎ.ಸಿಂಧು 617, ಕೆ.ಎಸ್.ರಿಷಭಗೌಡ 616, ಎನ್.ಕೆ.ಯಶವಂತ್ 616, ಮೇಘನಎಸ್ಗೌಡ, 611, ಸಿ.ಪಿ.ತೇಜಸ್ವಿನಿ 610, ಸಿ.ಜೆ.ನಮ್ರತಾ 609, ಕೆ.ಚಿರಂತ್ 606, ಎಂ.ಎಸ್.ಜೀವತ 606, ಎಸ್.ಆರ್.ಲಿಖಿತಾರಾಜು 605, ಕೆ.ಎಸ್.ಪ್ರೀತಮ್ 602, ಎಂ.ವಿ.ತುಷಾರ್ ನಾಯಕ್ 601 ಅಂಕಗಳನ್ನು ಪಡೆದು ತಾಲೂಕು ಮತ್ತು ಶಾಲೆಗೆ ಕೀರ್ಥಿ ತಂದಿದ್ದಾರೆ ಎಂದರು.ಈ ವೇಳೆ ಬಿಇಒ ಧನಂಜಯ, ಸಂಸ್ಥೆ ಅಧ್ಯಕ್ಷೆ ಪಿ.ಕಸ್ತೂರಿ ಅನಂತೇಗೌಡ, ಶಾಲೆ ಶಿಕ್ಷಕರ ವೃಂದ ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ ಅಭಿನಂದಿಸಿದರು.