ಸಾರಾಂಶ
೨೦೨೪-೨೫ ಸಾಲಿನ ಎಸ್.ಎಸ್.ಎಲ್.ಸಿ ಮುಂಡಗೋಡ ತಾಲೂಕಿನ ಪಲಿಂತಾಂಷ ಶೇ.೬೫.೩ ರಷ್ಟಾಗಿದೆ.
ಮುಂಡಗೋಡ: ೨೦೨೪-೨೫ ಸಾಲಿನ ಎಸ್.ಎಸ್.ಎಲ್.ಸಿ ಮುಂಡಗೋಡ ತಾಲೂಕಿನ ಪಲಿಂತಾಂಷ ಶೇ.೬೫.೩ ರಷ್ಟಾಗಿದ್ದು, ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ.೫೫೪ ಗಂಡು, ೬೯೭ ಹೆಣ್ಣು ಸೇರಿದಂತೆ ಒಟ್ಟು ಪರೀಕ್ಷೆ ಬರೆದ ೧೨೫೧ ಮಕ್ಕಳ ಪೈಕಿ ೨೯೨ ಗಂಡು ಹಾಗೂ ೫೨೫ ಹೆಣ್ಣು ಸೇರಿದಂತೆ ಒಟ್ಟು ೮೧೭ ಜನ ಉತ್ತೀರ್ಣರಾಗಿದ್ದಾರೆ.
ಮಳಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ೬೧೪ ಅಂಕ ಗಳಿಸಿ ಶೇ.೯೮.೨೪ರಷ್ಟು ಫಲಿತಾಂಶದೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಪಟ್ಟಣದ ಮೌಲಾನಾ ಆಜಾದ ಪ್ರೌಢ ಶಾಲೆ ವಿದ್ಯಾರ್ಥಿನಿ ಪರ್ವೀನ್ ಕೌಸರ್ ಅಬ್ದುಲ್‌ಕರೀಂ ನರೇಗಲ್ ೬೧೧ ಅಂಕ ಗಳಿಸಿ ಶೇ. ೯೭.೭೬ ರಷ್ಟು ಫಲಿತಾಂಶದೊಂದಿಗೆ ದ್ವಿತೀಯ ಹಾಗೂ ಪಾಳಾ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿನಿ ಸವಿತಾ ಶಿವಪ್ಪ ಮತ್ತಿಗಟ್ಟಿ ೬೦೪ ಅಂಕ ಪಡೆದು ಶೇ. ೯೬.೬೪ ರಷ್ಟು ಫಲಿತಾಂಶ ಗಳಿಸಿ ತಾಲೂಕಿಗೆ ತೃತೀಯ ಸ್ಥಾನ ಪಡೆದಿದ್ದಾಳೆ. ಈ ಮೂಲಕ ತಾಲೂಕಿನಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ.