ಫೋಟೊ 05 ಎಚ್,ಎನ್, ಎಮ್ 03 : ಹನುಮಸಾಗರದ ಶ್ರೀ ಅನ್ನದಾನೇಶ್ವರ ಮಠದಲ್ಲಿ ಎಸ್ಸೆಸ್ಸೆಎಲ್ಸಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಾರ್ಯಾಗಾರವನ್ನು ನಡೆಸಲಾಯಿತು. | Kannada Prabha
Image Credit: KP
ಗ್ರಾಮೀಣ ಪ್ರದೇಶದ ಮಕ್ಕಳು ಇಂಗ್ಲೀಷ್ ಕಲಿಯಲು ಹಿಂಜರಿಯಬಾರದು. ಕಷ್ಟಪಟ್ಟು ಓದಿದರೆ ಸುಲಭವಾಗಿ ಅರ್ಥವಾಗುತ್ತದೆ
ಹನುಮಸಾಗರ: ಎಸ್ಸೆಸ್ಸೆಲ್ಸಿ ಜೀವನದ ಮುಖ್ಯ ಘಟ್ಟವಾಗಿದ್ದು, ಪಾಲಕರು ಕಂಡ ಕನಸು ನನಸು ಮಾಡಬೇಕು ಎಂದು ಆಂಗ್ಲ ಭಾಷೆಯ ಸಂಪನ್ಮೂಲ ವ್ಯಕ್ತಿ ಸತೀಶ ಬಸಾಪುರ ಹೇಳಿದರು.
ಪಟ್ಟಣದ ಹಾಲಕೆರೆ ಶ್ರೀಅನ್ನದಾನೇಶ್ವರ ಮಠದಲ್ಲಿ ನಾನಾ ಶಾಲೆಗಳ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಇಂಗ್ಲೀಷ್ ವಿಷಯ ಕಾರ್ಯಾಗಾರದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಮಕ್ಕಳು ಇಂಗ್ಲೀಷ್ ಕಲಿಯಲು ಹಿಂಜರಿಯಬಾರದು. ಕಷ್ಟಪಟ್ಟು ಓದಿದರೆ ಸುಲಭವಾಗಿ ಅರ್ಥವಾಗುತ್ತದೆ. ನಾವು ಭಾಷೆ ರೂಢಿಗತ ಮಾಡಿಕೊಂಡಾಗ ಮಾತ್ರ ಅದು ಕಡಲೆ ಅಲ್ಲ, ಸರಳ ಎನ್ನುವದು ಮನವರಿಕೆಯಾಗುತ್ತದೆ. ಆದ್ದರಿಂದ ಪ್ರತಿನಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಮುಖ್ಯಶಿಕ್ಷಕ ರವಿಕಾಂತಯ್ಯ ಅಮಲಿಕೊಪ್ಪಮಠ, ಮಹೇಶ ಬಾಳಿಹಳ್ಳಮಠ, ಶರಣಪ್ಪ ಚಿನಿವಾಲರ, ಹುಸೇನಬಾಷಾ ಮುದಗಲ್, ನೀಲಮ್ಮ ಸೊಪ್ಪಿಮಠ, ಅನನ್ಯ ಪಪ್ಪು, ಮಂಜುಳಾ ಗುಡಿ, ಬಸವರಾಜ ಕೊಪ್ಪಳ ಇತರರು ಇದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.