ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತ: ಪೋಷಕರ ಆತಂಕ

| Published : May 20 2024, 01:33 AM IST

ಸಾರಾಂಶ

ಪ್ರಸಕ್ತ ಸಾಲಿನ ಹತ್ತನೆಯ ತರಗತಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಶೇ.೫೦ ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದು, ಮುಂದೆ ತಮ್ಮ ಮಕ್ಕಳನ್ನು ಆಯಾಯ ಶಾಲೆಗಳಿಗೆ ಸೇರಿಸಲು ಹಿಂದೆ ಮುಂದೆ ನೋಡುವಂತೆ ಮಾಡಿವೆ.

ಕನ್ನಡಪ್ರಭ ವಾರ್ತೆ ಮುಳಬಾಗಿಲುಪ್ರಸಕ್ತ ಸಾಲಿನ ಹತ್ತನೆಯ ತರಗತಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಶೇ.೫೦ ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದು, ಮುಂದೆ ತಮ್ಮ ಮಕ್ಕಳನ್ನು ಆಯಾಯ ಶಾಲೆಗಳಿಗೆ ಸೇರಿಸಲು ಹಿಂದೆ ಮುಂದೆ ನೋಡುವಂತೆ ಮಾಡಿವೆ.ನಗರದ ಸರ್ಕಾರಿ ನೂತನ ಪ್ರೌಢಶಾಲೆಯಲ್ಲಿ ಒಟ್ಟು 33 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೇ ಕೇವಲ ೯ ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯ ೧೨೫ ವಿದ್ಯಾರ್ಥಿಗಳಲ್ಲಿ ೪೦ ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿ ೮೫ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು ಶೇ.೩೨.೧ ಫಲಿತಾಂಶ, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಒಟ್ಟು ೭೩ ವಿದ್ಯಾರ್ಥಿಗಳು ಪರೀಕ್ಷೆ ಬರೆದು ೩೬ ವಿದ್ಯಾರ್ಥಿಗಳು ಉತ್ತೀರ್ಣರಾಗಿ ೩೭ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು ಶಾಲೆ ೪೯.೦೩% ಫಲಿತಾಂಶ ಪಡೆದಿದೆ. ಅನುದಾನಿತ ಶಾಲೆಗಳಾದ ರಾಯಲಮಾನ ದಿನ್ನೆಯ ಆದರ್ಶ ಪ್ರೌಢಶಾಲೆಯಲ್ಲಿ ಒಟ್ಟು ೩೪ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತು ಕೇವಲ, ೧೧ ವಿದ್ಯಾರ್ಥಿಗಳು ಪಾಸಾಗಿ ೨೩ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು ಶಾಲೆ ಶೇ.೩೨.೦೪ ಫಲಿತಾಂಶ ಪಡೆದಿದ್ದರೆ, ನಂಗಲಿ ಶ್ರೀ ವರಸಿದ್ದಿ ಪ್ರೌಢಶಾಲೆಯಲ್ಲಿ ಒಟ್ಟು ೬೫ ವಿದ್ಯಾರ್ಥಿಗಳಲ್ಲಿ ೩೧ ಮಂದಿ ಉತ್ತೀರ್ಣ ಹಾಗೂ ೪೪ ಮಂದಿ ಅನುತ್ತೀರ್ಣರಾಗಿದ್ದು ಶಾಲೆ ಶೇ.೪೭.೦೭ ಫಲಿತಾಂಶ ಪಡೆದಿದ್ದರೆ.ಶಾಲೆಗಳಿಗೆ ದಾಖಲು ಮಾಡಲು ಪೋಷಕರ ಚಿಂತನೆ:

ತಾಲೂಕಿನ ಅನುದಾನ ರಹಿತ ಶಾಲೆಗಳಾದ ನಂಗಲಿ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ೬೦ ವಿದ್ಯಾರ್ಥಿಗಳಲ್ಲಿ ೨೮ ಮಂದಿ ಮಾತ್ರ ಉತ್ತೀರ್ಣರಾಗಿ ೩೨ ಮಂದಿ ಅನುತ್ತೀರ್ಣಗೊಂಡು ಶಾಲೆ ಶೇ.೪೬.೦೭ ಫಲಿತಾಂಶ ಪಡೆದರೆ, ಯಲುವಹಳ್ಳಿ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲೆಯಲ್ಲಿ ಒಟ್ಟು ೨೦ ವಿದ್ಯಾರ್ಥಿಗಳಲ್ಲಿ ೯ ಮಂದಿ ಪಾಸಾಗಿ ೧೧ ಮಂದಿ ಅನುತ್ತೀರ್ಣರಾಗಿ ಶಾಲೆ ಶೇ.೪೫. ಫಲಿತಾಂಶ ಮತ್ತು ಎಸ್.ಎನ್.ಆಂಗ್ಕ ಸಹ ಶಿಕ್ಷಣ ಪ್ರೌಢಶಾಲೆಯಲ್ಲಿ ಒಟ್ಟು ೬೭ ವಿದ್ಯಾರ್ಥಿಗಳಲ್ಲಿ ೨೮ ಮಂದಿ ಉತ್ತೀರ್ಣರಾಗಿ ೩೨ ಮಂದಿ ಅನುತ್ತೀರ್ಣರಾಗಿದ್ದು ಕೇವಲ ೪೬.೦೭ % ಫಲಿತಾಂಶ ಪಡೆದಿವೆ.ಹೀಗಾಗಿ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳಲ್ಲಿ ದಾಖಲಾತಿ ಮಾಡಲು ಪೋಷಕರು ಹಿಂದೂ ಮುಂದೆ ನೋಡುವಂತಹ ಸ್ಥಿತಿ ಎದುರಾಗಿದೆ ಎಂದು ಪೋಷಕರು ಹೇಳಿದರು. ತಾಲೂಕಿನಲ್ಲಿ ಒಟ್ಟು ೬೩ ಪ್ರೌಢಶಾಲೆಗಳಿದ್ದು ಕೆಲವು ಶಾಲೆಗಳು ಮಾತ್ರ ಉತ್ತಮ ಫಲಿತಾಂಶ ನೀಡಿದ್ದರೆ, ಬಹುತೇಕ ಶಾಲೆಗಳು ಸಾಧಾರಣ ಹಾಗೂ ಸುಮಾರು ೮ ಶಾಲೆಗಳು ಕಡಿಮೆ ಫಲಿತಾಂಶ ಪಡೆದಿವೆ. ಹೀಗಾಗಿ ಕಡಿಮೆ ಫಲಿತಾಂಶದ ಶಾಲೆಗಳಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ದಾಖಲಾತಿಯ ಮೇಲೆ ಕೆಟ್ಟ ಪರಿಣಾಮ ಬೀರುವಂತಾಗಿದೆ.ಕಡಿಮೆ ಫಲಿತಾಂಶ ನೀಡಿರುವ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಿದರೆ ಫಲಿತಾಂಶ ಮುಂದೆ ಏನಾಗಬಹುದೋ ಎಂಬ ಸಂದೇಹ ಕಾಣುತ್ತಿದೆ ಎಂದು ವಿದ್ಯಾರ್ಥಿ ಪೋಷಕರೊಬ್ಬರು ಆತಂಕ ವ್ಯಕ್ತಪಡಿಸಿದರು.ಈ ಸಂಬಂಧ ಬಿಇಒ ಕೆ.ಆರ್.ಗಂಗರಾಮಯ್ಯರನ್ನು ಸಂಪರ್ಕಿಸಿದರೆ ಅತೀ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳು ಮುಂದಿನ ಫಲಿತಾಂಶದಲ್ಲಿ ಸುಧಾರಣೆ ಕಾಣದಿದ್ದಲ್ಲಿ ಕಠಿಣ ಕ್ರಮ ಜರುಗಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.