ಎಸ್ಸೆಸ್ಸೆಲ್ಸಿ ಫಲಿತಾಂಶ ಜಿಲ್ಲೆಗೆ 27ನೇ ಸ್ಥಾನ

| Published : May 03 2025, 12:17 AM IST

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೬೨೦ ಅಂಕ ಪಡೆದ ಗುಂಡ್ಲುಪೇಟೆ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿನಿ ಹರ್ಷಿಣಿ ಎಂ ಗೆ ತಂದೆ ಆರ್.ಮಂಜು, ತಾಯಿ ಮೋನಿಸ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕಳೆದ ಮಾರ್ಚ್‌-ಏಪ್ರಿಲ್‌ನಲ್ಲಿ ನಡೆದ 2024-25ನೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 10,855 ವಿದ್ಯಾರ್ಥಿಗಳು ಹಾಜರಾಗಿದ್ದು, 6606 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.60. 86 ಫಲಿತಾಂಶ ಬಂದಿದ್ದು, ಜಿಲ್ಲೆ 27ನೇ ಸ್ಥಾನ ಪಡೆದಿದೆ.2022-23ರಲ್ಲಿ 7ನೇ ಸ್ಥಾನ, 2023-24ರಲ್ಲಿ 24ನೇ ಸ್ಥಾನ ಈ ಬಾರಿ 2024-25ನೇ ಸಾಲಿನಲ್ಲಿ 27 ನೇ ಸ್ಥಾನ ಪಡೆದಿದೆ. ಈ ಬಾರಿ 5319 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2731 ಮಂದಿ ಉತ್ತೀರ್ಣರಾಗುವ ಮೂಲಕ ಶೇ.51.03 ಫಲಿತಾಂಶ ಬಂದಿದೆ ಮತ್ತು 5536 ವಿದ್ಯಾರ್ಥಿನಿಯರ ಪೈಕಿ 3975 ಶೇ.70 ರಷ್ಟು ಫಲಿತಾಂಶ ಬಂದಿದೆ. ಇದರ ಮೂಲಕ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಸರ್ಕಾರಿ ಶಾಲೆಯ 5347 ವಿದ್ಯಾರ್ಥಿಗಳ ಪೈಕಿ 3152 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 58. 95, ಅನುದಾನಿತ ಶಾಲೆಯ 2830 ವಿದ್ಯಾರ್ಥಿಗಳ ಪೈಕಿ 1458 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು ಶೇ. 51. 52 ಪ‍‍ಲಿತಾಂಶ ಬಂದಿದ್ದು, ಅನುದಾನ ರಹಿತ ಶಾಲೆಯ 2778 ವಿದ್ಯಾರ್ಥಿಗಳ ಪೈಕಿ 1996 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 74. 53 ಫಲಿತಾಂಶ ಬಂದಿದೆ.

ಕನ್ನಡ ಮಾಧ್ಯಮದ 7108 ವಿದ್ಯಾರ್ಥಿಗಳ ಪೈಕಿ 3687 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 51.87 ಫಲಿತಾಂಶ ಬಂದಿದ್ದು, ಆಂಗ್ಲ ಮಾಧ್ಯಮದ 3747 ವಿದ್ಯಾರ್ಥಿಗಳ ಪೈಕಿ 2919 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 77. 90 ಫಲಿತಾಂಶ ಬಂದಿದೆ.

ಗುಂಡ್ಲುಪೇಟೆ ತಾಲೂಕು ಪ್ರಥಮ:ಗುಂಡ್ಲುಪೇಟೆ ತಾಲೂಕು ಶೇ.65.18 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, ಕೊಳ್ಳೇಗಾಲ ಶೇ.63. 02 ಫಲಿತಾಂಶ ಪಡೆದು ಎರಡನೇ ಸ್ಥಾನ, ಚಾಮರಾಜನಗರ 59.20 ಫಲಿತಾಂಶ ಪಡೆದು ಮೂರನೇ ಸ್ಥಾನ, ಯಳಂದೂರು 58.08 ಫಲಿತಾಂಶ ಪಡೆದು ನಾಲ್ಕನೇ ಸ್ಥಾನ, ಹನೂರು 57.75 ಫಲಿತಾಂಶ ಪಡೆದು ಐದನೇ ಸ್ಥಾನ ಪಡೆದಿದೆ.

ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ:

ಗುಂಡ್ಲುಪೇಟೆ: ಹರ್ಷಿಣಿ- 620

ಕೊಳ್ಳೇಗಾಲ: ಶರ್ಮಿಳ-618

ಚಾಮರಾಜನಗರ: ಪೂಜಾ ಎನ್‌-618

ಹನೂರು: ಕೃತಿಕ್‌-618