ಎಸ್ಸೆಸ್ಸೆಲ್ಸಿ ಫಲಿತಾಂಶ ಈ ಸಲ ಶೇ.8ರಷ್ಟು ಏರಿಕೆ : ಮಧು ಬಂಗಾರಪ್ಪ

| N/A | Published : May 03 2025, 12:21 AM IST / Updated: May 03 2025, 08:23 AM IST

Madhu Bangarappa Karnataka
ಎಸ್ಸೆಸ್ಸೆಲ್ಸಿ ಫಲಿತಾಂಶ ಈ ಸಲ ಶೇ.8ರಷ್ಟು ಏರಿಕೆ : ಮಧು ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಸೆಸ್ಸೆಲ್ಸಿ ಫಲಿತಾಂಶ ಈ ಬಾರಿ ಶೇ.11ರಷ್ಟು ಕಡಿಮೆಯಾಗಿದ್ದರೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗ್ರೇಸ್‌ ಅಂಕ ಲೆಕ್ಕಾಚಾರದಲ್ಲಿ ಫಲಿತಾಂಶ ಶೇ.8ರಷ್ಟು ಏರಿಕೆಯಾಗಿದೆ ಎಂದು ವ್ಯಾಖ್ಯಾನ ಮಾಡಿದ್ದಾರೆ.

  ಬೆಂಗಳೂರು : ಎಸ್ಸೆಸ್ಸೆಲ್ಸಿ ಫಲಿತಾಂಶ ಈ ಬಾರಿ ಶೇ.11ರಷ್ಟು ಕಡಿಮೆಯಾಗಿದ್ದರೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗ್ರೇಸ್‌ ಅಂಕ ಲೆಕ್ಕಾಚಾರದಲ್ಲಿ ಫಲಿತಾಂಶ ಶೇ.8ರಷ್ಟು ಏರಿಕೆಯಾಗಿದೆ ಎಂದು ವ್ಯಾಖ್ಯಾನ ಮಾಡಿದ್ದಾರೆ.

ಫಲಿತಾಂಶ ಬಿಡುಗಡೆ ಮಾಡಿದ ಸಚಿವರು ಹೇಳಿದ್ದಿಷ್ಟು. ಈ ಸಾಲಿನಲ್ಲಿ ಶೇ.62.34ರಷ್ಟು ಫಲಿತಾಂಶ ಬಂದಿದೆ. ಆದರೆ, ಇದು ಕಳೆದ ಸಾಲಿನಂತೆ ಶೇ.20ರಷ್ಟು ಗ್ರೇಸ್‌ ಅಂಕ ನೀಡಿ ಹೆಚ್ಚಿಸಿದ ಫಲಿತಾಂಶ ಅಲ್ಲ. ಹಾಗಂತ ಸಂಪೂರ್ಣ ಗ್ರೇಸ್‌ ಅಂಕ ನೀಡಿಲ್ಲ ಎಂದೂ ಅಲ್ಲ. ಈ ಬಾರಿ ಮೂರು ವಿಷಯಗಳಲ್ಲಿ ಫೇಲಾಗುವ ಅಂಚಿನಲ್ಲಿದ್ದ ಮಕ್ಕಳಿಗೆ ಶೇ.10ರಷ್ಟು ಗ್ರೇಸ್‌ ಅಂಕ ನೀಡಿ ಪಾಸು ಮಾಡಲಾಗಿದೆ. 

ಇದರಿಂದ ಫಲಿತಾಂಶ ಶೇ.62.34 ತಲುಪಿದೆ. ಆದರೆ, ಕಳೆದ ವರ್ಷ ಫಲಿತಾಂಶ ತೀವ್ರವಾಗಿ ಕುಸಿದಿದ್ದರಿಂದ ಶೇ.10ರಷ್ಟಿದ್ದ ಗ್ರೇಸ್‌ ಅಂಕ ಪ್ರಮಾಣದಲ್ಲಿ ಶೇ.20ಕ್ಕೆ ಹೆಚ್ಚಳ ಮಾಡಿ ಫಲಿತಾಂಶ ನೀಡಲಾಗಿತ್ತು. ಇದರಿಂದ ಅಸಲಿಗೆ ಶೇ.53ರಷ್ಟು ಇರಬೇಕಿದ್ದ ಫಲಿತಾಂಶ ಶೇ.73 ದಾಟಿತ್ತು. ಗ್ರೇಸ್‌ ಅಂಕ ಹೊರತುಪಡಿಸಿ ಬಂದಿದ್ದ ಶೇ.53ರಷ್ಟು ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಶೇ.8ರಷ್ಟು ಫಲಿತಾಂಶ ಹೆಚ್ಚಳವಾದಂತಾಗಿದೆ ಎಂದು ಸಮರ್ಥಿಸಿಕೊಂಡರು.

ಆದರೆ, ಈ ಬಾರಿ ಶೇ.10ರಷ್ಟು ಗ್ರೇಸ್‌ ಅಂಕ ಪಡೆದು ಪಾಸಾದ ವಿದ್ಯಾರ್ಥಿಗಳು ಎಷ್ಟು ಎನ್ನುವುದನ್ನು ಸಚಿವರಾಗಲಿ, ಅಧಿಕಾರಿಗಳಿಗಾಗಲಿ ಮಾಹಿತಿ ನೀಡಲಿಲ್ಲ. ಕಳೆದ ವರ್ಷ ಶೇ.20ರಷ್ಟು ಗ್ರೇಸ್‌ ಅಂಕ ನೀಡಿ 1.70 ಲಕ್ಷ ಮಕ್ಕಳನ್ನು ಪಾಸು ಮಾಡಲಾಗಿತ್ತು ಎನ್ನುವುದು ಗಮನಾರ್ಹ.