ಎಸ್.ಎಸ್.ಎಲ್.ಸಿ. ಪರೀಕ್ಷೆ ಮರು ಮೌಲ್ಯಮಾಪನದ ಬಳಿಕ ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆ ಬರೋಬ್ಬರಿ 8 ಟಾಪರ್ಸ್‌ ಸಾಧಕರೊಂದಿಗೆ ತನ್ನ ಶ್ರೇಷ್ಠ ಸಾಧನೆ ದಾಖಲಿಸಿದೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಎಸ್.ಎಸ್.ಎಲ್.ಸಿ. ಪರೀಕ್ಷೆ ಮರು ಮೌಲ್ಯಮಾಪನದ ಬಳಿಕ ರೋಟರಿ ಆಂಗ್ಲ ಮಾಧ್ಯಮ ಶಾಲೆ ಬರೋಬ್ಬರಿ 8 ಟಾಪರ್ಸ್‌ ಸಾಧಕರೊಂದಿಗೆ ತನ್ನ ಶ್ರೇಷ್ಠ ಸಾಧನೆ ದಾಖಲಿಸಿದೆ. ಮರುಮೌಲ್ಯಮಾಪನದ ಬಳಿಕ ರಾಜ್ಯ ಮಟ್ಟದ ರ‍್ಯಾಂಕ್‌ಗಳನ್ನು ಪಡೆದವರ ವಿವರ:ಸುಹಾ ಹಲೀಮಾ ೬೨೩ (೩ನೇ ರ‍್ಯಾಂಕ್), ಲಾಸ್ಯ ಉಡುಪ ೬೨೨(೪ನೇ ರ‍್ಯಾಂಕ್), ನ್ಯುಮಾ ಮುಸ್ತಾಕ್ ೬೨೨(೪ನೇ ರ‍್ಯಾಂಕ್), ಚಿರಾಗ್ ಯು. ಸಾಲ್ಯಾನ್ ೬೨೦(೬ನೇ ರ‍್ಯಾಂಕ್), ಸಿಂಚನಾ ಆಚಾರ್ ೬೧೯(೭ನೇ ರ‍್ಯಾಂಕ್), ಪ್ರಣಮ್ಯ ಶೆಟ್ಟಿ ೬೧೯(೭ನೇ ರ‍್ಯಾಂಕ್),ನೆಸ್ಟನ್ ಸೋನಾಲ್ ಗೊನ್ಸಾಲ್ವಿಸ್ ೬೧೮(೮ನೇ ರ‍್ಯಾಂಕ್), ಸತೀಶ್ ವಿ. ಪೈ ೬೧೭(೯ನೇ ರ‍್ಯಾಂಕ್) ಗಳಿಸಿ ಸಾಧನೆ ಮೆರೆದಿದ್ದಾರೆ. ಪರೀಕ್ಷೆಗೆ ಹಾಜರಾದ ೧೨೬ ವಿದ್ಯಾರ್ಥಿಗಳಲ್ಲಿ ೧೨೪ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. ೯೮.೪೧ ಫಲಿತಾಂಶ ಬಂದಿರುತ್ತದೆ.ರುತ್ತಾರೆ. ೬೯ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ೫೧ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ಮೂರು ಮಂದಿ ದ್ವಿತೀಯ ದರ್ಜೆಯಲ್ಲಿ ಹಾಗೂ ಓರ್ವ ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.

10 ನೇ ರ‍್ಯಾಂಕ್ ಪಡೆದಿದ್ದ ಸುಹಾ ಹಲೀಮಾ ಮರು ಮೌಲ್ಯಮಾಪನದ ಬಳಿಕ ೬೨೩ ಅಂಕಗಳೊಂದಿಗೆ 3ನೇ ರ‍್ಯಾಂಕ್, ಇದೇ ವೇಳೆ ಸತೀಶ್ ವಿ. ಪೈ ೬೧೭(೯ನೇ ರ‍್ಯಾಂಕ್) ಪಡೆದು ಗಮನ ಸೆಳೆದಿದ್ದಾರೆ.

ಈ ಸಾಧನೆಗಾಗಿ ಮುಖ್ಯೋಪಾಧ್ಯಾಯಿನಿ, ಅಧ್ಯಾಪಕ ವೃಂದ ಹಾಗೂ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಅಧ್ಯಕ್ಷ ನಾರಾಯಣ ಪಿ.ಎಂ., ಕಾರ್ಯದರ್ಶಿ ಅನಂತಕೃಷ್ಣ ರಾವ್ , ಸಂಚಾಲಕ ಪ್ರವೀಣ್‌ಚಂದ್ರ ಜೈನ್‌ ಅಭಿನಂದಿಸಿದ್ದಾರೆ.