ಸಾರಾಂಶ
ಜೂನ್ 14 ರಿಂದ 22 ರವರೆಗೆ ನಡೆದ ಎಸ್ಎಸ್ಎಲ್.ಸಿ ಪರೀಕ್ಷೆ-2 ಜಿಲ್ಲೆಯಲ್ಲಿ ಸುಗಮವಾಗಿ ನಡೆಯಿತು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ನಾಸಿರುದ್ದೀನ್ ಹೇಳಿದರು.
- -
- ಡಯಟ್ ನಲ್ಲಿ ಕುಳಿತು ಪರಿಕ್ಷಾ ಕೇಂದ್ರ ವೀಕ್ಷಿಸಿಸಿದ ಪ್ರಾಚಾರ್ಯ ನಾಸಿರುದ್ದೀನ್ಕನ್ನಡಪ್ರಭವಾರ್ತೆ ಚಿತ್ರದುರ್ಗಜೂನ್ 14 ರಿಂದ 22 ರವರೆಗೆ ನಡೆದ ಎಸ್ಎಸ್ಎಲ್.ಸಿ ಪರೀಕ್ಷೆ-2 ಜಿಲ್ಲೆಯಲ್ಲಿ ಸುಗಮವಾಗಿ ನಡೆಯಿತು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ನಾಸಿರುದ್ದೀನ್ ಹೇಳಿದರು. ನಗರದ ಡಯಟ್‍ನಲ್ಲಿ ವೆಬ್‍ಕಾಸ್ಟ್ ಮೂಲಕ ಜಿಲ್ಲೆಯ ಪರೀಕ್ಷಾ ಕೇಂದ್ರಗಳನ್ನು ವೀಕ್ಷಿಸಿ ಮಾತನಾಡಿದ ಅವರು, ಪರೀಕ್ಷೆ ಸುಗಮವಾಗಿ ನಡೆಸಲು ಡಯಟ್ ಕೇಂದ್ರದಲ್ಲಿ ವೆಬ್‍ಕಾಸ್ಟ್ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 19 ಪರೀಕ್ಷಾ ಕೇಂದ್ರಗಳಿದ್ದು ಪ್ರತಿಯೊಂದು ಪರೀಕ್ಷಾ ಕೇಂದ್ರಗಳ ಪ್ರತಿ ಕೊಠಡಿಯನ್ನು ವೀಕ್ಷಿಸಲು ವೆಬ್‍ಕಾಸ್ಟ್ ವೀಕ್ಷಕರಿಗೆ ಒಂದೇ ಕೊಠಡಿಯಲ್ಲಿ ಅವಕಾಶ ಕಲ್ಪಿಸಲಾಗಿದ್ದು ವೀಕ್ಷಕರಾಗಿ 20 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರಥಮ ಭಾಷೆ-3090, ದ್ವಿತೀಯ ಭಾಷೆ-3813, ತೃತೀಯ ಭಾಷೆ-4184, ಗಣಿತ-4965, ವಿಜ್ಞಾನ-4710, ಸಮಾಜ ವಿಜ್ಞಾನ-2941 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಮಾಹಿತಿ ನೀಡಿದರು.23 ಸಿಟಿಡಿ7
ಎಸ್ಎಸ್ಎಲ್.ಸಿ ಪರೀಕ್ಷೆ-2 ಪಾರದರ್ಶಕವಾಗಿ ನಡೆಸಲು ನಗರದ ಡಯಟ್‍ನಲ್ಲಿ ವ್ಯವಸ್ಥೆ ಮಾಡಿದ್ದ ವೆಬ್‍ಕಾಸ್ಟ್ ಮೂಲಕ ಜಿಲ್ಲೆಯ ಪರೀಕ್ಷಾ ಕೇಂದ್ರಗಳನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ನಾಸಿರುದ್ದೀನ್ ವೀಕ್ಷಿಸಿದರು.