ಸಂತ ಜೋಸೆಫರ ಪಿಯು ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಚಾಲನೆ: ಪ್ರಮಾಣ ವಚನ

| Published : Aug 04 2025, 12:30 AM IST

ಸಾರಾಂಶ

ಸಂತ ಜೋಸೆಫರ ಪಿಯು ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಸಂತ ಜೋಸೆಫರ ಪಿಯು ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸಂತಜೋಸೆಫರ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಧರ್ಮಗುರು ಅವಿನಾಶ್ ಉದ್ಘಾಟಿಸಿದರು. ಕಾಲೇಜಿನ ಅಧ್ಯಕ್ಷೆಯಾಗಿ ಎಸ್.ಹಿತೈಷಿ, ಉಪಾಧ್ಯಕ್ಷರಾಗಿ ತೀರ್ಥೆಶ್‌ಗೌಡ, ಶಿಸ್ತುಪಾಲಕರಾಗಿ ಕೆ.ನಿತೇಶ್, ಸಾಯಿ ಪ್ರಿಯ, ಸಾಂಸ್ಕೃತಿಕ ನಾಯಕರಾಗಿ ಡಿ.ಪಿ.ಮೊನಿಶಾ, ಟಿ.ಎಸ್.ಸೂರ್ಯ, ಕ್ರೀಡಾನಾಯಕರಾಗಿ ಕೆ.ಎಸ್.ತೇಜಸ್, ಎಂ.ಸಿ.ಹಂಸಿನಿ, ವಿವಿಧ ಘಟಕಗಳ ನಾಯಕರುಗಳಾಗಿ ಪಿ.ಸಾತ್ವಿಕ್, ಎಂ.ಪಿ.ಕಾರುಣ್ಯ, ಫಾತಿಮ ಹಮೀದ್, ಎಸ್.ಎಸ್.ಜತೀನ್, ವಯಾಲಿನ್ ಲೋಬೋ, ಜಿ.ಎನ್.ಕೌಸಿಕ್, ಸಿ.ಪಿ.ವರ್ಷಾ, ಎಂ.ಅಕಾಶ್, ಡಿ.ಪಿ.ಮೊನಿಷಾ, ಎಸ್.ಲಕಿನ್, ಎಂ.ನಿಖಿಲೇಶ್, ಎಚ್.ಎಂ.ಪೂರ್ವಿಕಾ, ಟಿ.ಎ.ಸಂಜಯ್, ಎಸ್.ಕೆ.ಚಿರಾಗ್, ಕೆ.ಆರ್.ಆಧ್ಯ, ಡಿ.ಎಸ್.ದೀಪಾಲಿ, ಬಿ.ಡಿ.ಪ್ರೀತಮ್, ಪಾರ್ವತಿ, ಸಿ.ಆರ್.ಸುಪ್ರಿತಾ, ಸಿ.ಪಿ.ಶೇಯಾ, ಎಂ.ರಿತೀಶ್, ಕೆ.ಎ.ನೌಫಿಯಾ, ಎಂ.ಎ.ಆಶಿಕ್, ಜಿ.ಆರ್.ಸೋನಿಕಾ, ಎಚ್.ವಿ.ಧನ್ವಂತ್ರಿ, ಎನ್.ಜಿ.ಮೊನಿಕಾ, ಕೆ.ಯು.ಕುವಾಲ್, ಎಸ್.ಮೊನಿಷ, ಕೆ.ಜಿ.ದಿಶಾ, ಕೆ.ಡಿ.ಗುರುಪ್ರಸಾದ್ ಅವರುಗಳು ಪ್ರಮಾಣ ವಚನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಶಶಿಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜ, ಸರ್ಕಲ್‌ಇನ್ಸ್ಪೆಕ್ಟರ್ ಮುದ್ದು ಮಹಾದೇವ, ಆರ್‌ಎಫ್‌ಒ ಶೈಲೆಂದ್ರ ಕುಮಾರ್, ಓಎಲ್‌ವಿ ಚರ್ಚ್ ಸದಸ್ಯ ವಿ.ಎ.ಲಾರೆನ್ಸ್, ಪ್ರಾಂಶುಪಾಲರಾದ ಹರೀಶ್, ಥೋಮಸ್, ಮುಖೋಪಾಧ್ಯಾಯರಾದ ಹ್ಯಾರಿಮೋರಸ್, ಕವಿತ ಇದ್ದರು. ಉಪನ್ಯಾಸಕಿ ಜ್ಯೋತಿ ಸ್ವಾಗತಿಸಿ, ಆಶಾ ವಂದಿಸಿ, ವಿದ್ಯಾರ್ಥಿನಿಯರಾದ ವರ್ಷಾ, ವಯಾಲಿನ್ ಕಾರ್ಯಕ್ರಮ ನಿರೂಪಿಸಿದರು.