ಕಾರ್ಕಳ ವಿಜೇತ ಶಾಲೆಗೆ ಸೈಂಟ್ ಮಿಲಾಗ್ರಿಸ್‌ ಸೊಸೈಟಿ ಅವಶ್ಯಕ ವಸ್ತುಗಳ ಕೊಡುಗೆ

| Published : Aug 22 2025, 02:00 AM IST

ಕಾರ್ಕಳ ವಿಜೇತ ಶಾಲೆಗೆ ಸೈಂಟ್ ಮಿಲಾಗ್ರಿಸ್‌ ಸೊಸೈಟಿ ಅವಶ್ಯಕ ವಸ್ತುಗಳ ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಅಯ್ಯಪ್ಪನಗರದ ವಿಜೇತ ವಿಶೇಷ ಮಕ್ಕಳ ಶಾಲೆಗೆ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋಪರೇಟಿವ್ ಲಿಮಿಟೆಡ್ ಕಾರ್ಕಳ ಶಾಖೆಯ ವತಿಯಿಂದ ಅವಶ್ಯಕ ವಸ್ತುಗಳನ್ನು ಇತ್ತೀಚೆಗೆ ನಡೆದ ಸರಳ ಸಮಾರಂಭದಲ್ಲಿ ಹಸ್ತಾಂತರ ಮಾಡಲಾಯಿತು.

ಕಾರ್ಕಳ: ಇಲ್ಲಿನ ಕುಕ್ಕುಂದೂರು ಅಯ್ಯಪ್ಪನಗರದ ವಿಜೇತ ವಿಶೇಷ ಮಕ್ಕಳ ಶಾಲೆಗೆ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋಪರೇಟಿವ್ ಲಿಮಿಟೆಡ್ ಕಾರ್ಕಳ ಶಾಖೆಯ ವತಿಯಿಂದ ಅವಶ್ಯಕ ವಸ್ತುಗಳನ್ನು ಇತ್ತೀಚೆಗೆ ನಡೆದ ಸರಳ ಸಮಾರಂಭದಲ್ಲಿ ಹಸ್ತಾಂತರ ಮಾಡಲಾಯಿತು.ಮುಖ್ಯ ಅತಿಥಿಗಳಾಗಿ ಬಂಟ್ಸ್ ಕ್ರೆಡಿಟ್ ಕೋಪರೇಟಿವ್ ಸೊಸೈಟಿ ಅಧ್ಯಕ್ಷರಾಗಿರುವ, ಉದ್ಯಮಿ, ರಾಜಕೀಯ ಮುಖಂಡರಾದ ಉದಯ್ ಶೆಟ್ಟಿ ಮುನಿಯಾಲು ಹಾಗೂ ಭುವನೇಂದ್ರ ಹೈಸ್ಕೂಲ್ ಪ್ರಾಧ್ಯಾಪಕ, ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಮತ್ತುಸ್ಕೌಟ್ ಆ್ಯಂಡ್ ಗೈಡ್ಸ್ ಕಾರ್ಕಳ ವಲಯದ ಕಾರ್ಯದರ್ಶಿ ಗಣೇಶ್ ಜಾಲ್ಸುರ್ ಅವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಬೆಡ್ ಶೀಟ್, ಟವೆಲ್ ಹಾಗೂ ತಂಪು ಪಾನೀಯ ವಸ್ತುಗಳನ್ನು ವಿತರಿಸಿದರು. ಈ ಸಹಕಾರಿ ಸಂಘದ ಕಾರ್ಕಳ ಶಾಖೆಯ ಪ್ರಬಂಧಕ ಕಿಶೋರ್ ದೇವಾಡಿಗ, ಉಡುಪಿ ಮತ್ತು ಮಂಗಳೂರು ವಿಭಾಗ ಅಭಿವೃದ್ಧಿ ವ್ಯವಸ್ಥಾಪಕ ಮನೀಶ್, ವಿಭಾಗ ಸಾಲ ವಸೂಲಾತಿ ಅಧಿಕಾರಿ ಗೌತಮ್ ರೈ, ವಿಜೇತ ವಿಶೇಷ ಶಾಲಾ ಸಂಸ್ಥಾಪಕರಾದ ಡಾ.ಕಾಂತಿ ಹರೀಶ್, ಮ್ಯಾನೇಜಿಂಗ್ ಟ್ರಸ್ಟಿ ಹರೀಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಶೇಷ ಶಿಕ್ಷಕಿ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿ, ಡಾ.ಕಾಂತಿ ಹರೀಶ್ ಸ್ವಾಗತಿಸಿ, ಸಿಬ್ಬಂದಿ ವರ್ಗದವರು ಹಾಗೂ ಮಕ್ಕಳು ಪ್ರಾರ್ಥನೆಯನ್ನು ನೆರವೇರಿಸಿದರು, ವಿಶೇಷ ಶಿಕ್ಷಕಿ ಶ್ರೀಮತಿ ಶ್ವೇತಾ ವಂದಿಸಿದರು.