ಚೂರಿ ಇರಿತ ಪ್ರಕರಣ: ಮೂವರ ಬಂಧನ

| Published : Aug 08 2024, 01:44 AM IST

ಸಾರಾಂಶ

ಬಂಟ್ವಾಳ ನಿವಾಸಿಗಳಾದ ಅಶ್ವಥ್, ಶರಣ್ ಮತ್ತು ವಸಂತ ಬಂಧಿತರು. ಉಳಿದ ಆರೋಪಿಗಳಿಗಾಗಿ ಬಂಟ್ವಾಳ ಪೋಲೀಸರು ಬಲೆ ಬೀಸಿದ್ದು ಕಾರ್ಯಚರಣೆ ಮುಂದುವರಿದಿದೆ.

ಬಂಟ್ವಾಳ: ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು, ಚೂರಿಯಿಂದ ಇರಿದು ಪರಾರಿಯಾಗಿದ್ದ ಮೂವರನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ನಿವಾಸಿಗಳಾದ ಅಶ್ವಥ್, ಶರಣ್ ಮತ್ತು ವಸಂತ ಬಂಧಿತರು. ಉಳಿದ ಆರೋಪಿಗಳಿಗಾಗಿ ಬಂಟ್ವಾಳ ಪೋಲೀಸರು ಬಲೆ ಬೀಸಿದ್ದು ಕಾರ್ಯಚರಣೆ ಮುಂದುವರಿದಿದೆ.

ಘಟನೆಯಲ್ಲಿ ಪೃಥ್ವಿರಾಜ್ ಮತ್ತು ವಿನೀತ್ ಅವರು ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೈಯಕ್ತಿಕ ಕ್ಸುಲ್ಲಕ ವಿಚಾರವಾಗಿ ಬಂಟ್ವಾಳ ಬೈಪಾಸ್ ಎಂಬಲ್ಲಿ ಎರಡು ತಂಡಗಳ ನಡುವೆ ಇತ್ತೀಚೆಗೆ ರಾಜರಸ್ತೆಯಲ್ಲಿ ಪರಸ್ಪರ ಗಲಾಟೆ ನಡೆದಿದೆ. ಈ ವೇಳೆ ಚೂರಿಯಿಂದ ಇರಿದು ಒಂದು ತಂಡ ಪರಾರಿಯಾಗಿತ್ತು. ಗಾಯಗೊಂಡ ಯುವಕರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಲಪಾಡಿ: ಯುವಕನ ಕೊಲೆ ಯತ್ನ

ಉಳ್ಳಾಲ: ಕಾರಿನಲ್ಲಿ ಬಂದ ಇಬ್ಬರು ಆಗಂತುಕರು ಬಿಯರ್‌ ಬಾಟಲಿಯಿಂದ ಯುವಕನೊಬ್ಬನ ತಲೆಗೆ ಬಡಿದು ಹಾಗೂ ಕತ್ತಿಯಿಂದ ಕುತ್ತಿಗೆ ಭಾಗಕ್ಕೆ ತಿವಿದು ಕೊಲೆಗೆ ಯತ್ನಿಸಿರುವ ಘಟನೆ ಮೇಲಿನ ತಲಪಾಡಿ ಆಶೀರ್ವಾದ್‌ ಹೊಟೇಲ್‌ ಸಮೀಪದ ರಸ್ತೆಯಲ್ಲಿ ಆ.5ರಂದು ಸಂಜೆ ವೇಳೆ ನಡೆದಿದೆ.ತಲಪಾಡಿ ನಿವಾಸಿ ದತ್ತೇಶ್‌ (35) ಕೊಲೆಯತ್ನಕ್ಕೆ ಒಳಗಾದವರು. ದತ್ತೇಶ್‌ ಆಶೀರ್ವಾದ್‌ ಹೊಟೇಲ್‌ ಸಮೀಪ ನಿಂತಿದ್ದ ಸಂದರ್ಭ ತಲಪಾಡಿ ದೇವಿನಗರ ನಿವಾಸಿ ಶೈಲೇಶ್‌ ಮತ್ತು ತಚ್ಚಣಿಯ ರಮಿತ್‌ ಎಂಬವರು ಕಾರಿನಲ್ಲಿ ಬಂದು ದತ್ತೇಶ್‌ ಹತ್ತಿರವೇ ನಿಲ್ಲಿಸಿದ್ದಾರೆ. ಇಬ್ಬರ ಪೈಕಿ ಶೈಲೇಶ್‌ ಕೈಯಲ್ಲಿ ಕತ್ತಿ ಹಿಡಿದುಕೊಂಡಿದ್ದರೆ, ರಮಿತ್‌ ಬಿಯರ್‌ ಬಾಟಲಿಯಲ್ಲಿ ದತ್ತೇಶ್‌ ತಲೆಗೆ ಬಡಿದಿದ್ದಾನೆ. ಘಟನೆಯಿಂದ ರಕ್ತಸ್ರಾವ ಉಂಟಾಗಿ ದತ್ತೇಶ್‌ ಬಿದ್ದಿದದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿಗಳು, ಜೀವ ಬೆದರಿಕೆ ಯೊಡ್ಡಿ ಕತ್ತಿಯಿಂದ ದತ್ತೇಶ್‌ ಕುತ್ತಿಗೆ ಭಾಗಕ್ಕೆ ತಿವಿದಿದು ಪರಾರಿಯಾಗಿದ್ದಾರೆ. ಗಾಯಗೊಂಡ ದತ್ತೇಶ್‌ ಅವರನ್ನು ಸ್ಥಳದಲ್ಲಿದ್ದ ಇಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.