ಸಾರಾಂಶ
ರೋಣ: ತಾಪಂನ ಗ್ರಾಮಗಳ ಅಭಿವೃದ್ಧಿಗೆ ಗ್ರಾಪಂ ಪಿಡಿಒ, ಅಭಿಯಂತರು ಸೇರಿದಂತೆ ಎಲ್ಲ ಸಿಬ್ಬಂದಿ ಸಹಾಯ, ಸಹಕಾರ ಶ್ರಮ ಅಗತ್ಯವಾಗಿದೆ.ಈ ಹಿನ್ನೆಲೆ ತಾಲೂಕಿನ ಅಭಿವೃದ್ಧಿಗೆ ತಾವೆಲ್ಲರು ಕೈ ಜೋಡಿಸಿ ಎಂದು ರೋಣ ತಾಪಂ ನೂತನ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ ಕಂದಕೂರ ಹೇಳಿದರು.
ತಾಪಂ ಸಭಾ ಭವನದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರೋಣ ತಾಲೂಕಿಗೆ ಬಹಳ ದೊಡ್ಡ ಇತಿಹಾಸವಿದೆ.ಇಲ್ಲಿ ಮಹಾನ್ ವ್ಯಕ್ತಿಗಳು ಜನ್ಮ ತಾಳಿದ್ದಾರೆ,ಇಂತಹ ತಾಲೂಕಿನಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನಗೆ ಖುಷಿ ತಂದಿದೆ. ಹಾಗೆಯೇ ತಾಲೂಕನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಪ್ರತಿಯೊಬ್ಬರ ಕೊಡುಗೆ ಇರುತ್ತದೆ.ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಒಗ್ಗೂಡಿ ಒಂದೇ ಕುಟುಂಬದ ಹಾಗೇ ಕೆಲಸ ಮಾಡೋಣ. ಒಗ್ಗೂಡಿ ಕೆಲಸ ಮಾಡುವುದರಿಂದ ತಾಲೂಕಿನ ಪ್ರಗತಿಗೆ ಮುನ್ನಡೆ ಆಗುತ್ತದೆ.ಈ ಹಿನ್ನೆಲೆಯಲ್ಲಿ ತಾಲೂಕಿನ ಪ್ರಗತಿ ಉತ್ತಮಪಡಿಸಲು ಸಿಬ್ಬಂದಿಗಳ ಸಹಾಯ, ಸಹಕಾರವು ಕೂಡಾ ಅಗತ್ಯವಿದೆ. ತಾಲೂಕಿನ ಪ್ರಗತಿ ಸಾಧಿಸಲು ಸಂಘಟಿತ ಪ್ರಯತ್ನ ಅತ್ಯಗತ್ಯ ಎಲ್ಲ ಸಿಬ್ಬಂದಿಗಳು ಈ ಹಿನ್ನೆಲೆ ತಾಲೂಕಿನ ಪ್ರಗತಿಗೆ ತಾವೆಲ್ಲರೂ ಕೈ ಜೋಡಿಸಿ ಎಂದರು.ಸಭೆಯಲ್ಲಿ ಡಿ. 5 ರ ಒಳಗಾಗಿ 2025-26 ಸಾಲಿನ ಕ್ರಿಯಾ ಯೋಜನೆ ಸಿದ್ದಪಡಿಸುವುದು, ಪಂಚಾಯತಿಗಳಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡುವದು, ಶಾಲಾ ಅಭಿವೃದ್ಧಿ ಕಾಮಗಾರಿ, ಎಸ್ ಬಿಎಂ, ಹೌಸಿಂಗ್, ಮಾನವ ದಿನಗಳ ಸೃಜನೆ, ಮಹಿಳಾ ಭಾಗವಹಿಸುವಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.
ಸಭೆಗೂ ಮುನ್ನ ನೂತನವಾಗಿ ತಾಪಂ ಇಒ ಆಗಿ ಆಧಿಕಾರ ಸ್ವೀಕರಿಸಿ ಚಂದ್ರಶೇಖರ.ಬಿ.ಕಂದಕೂರ ಅವರನ್ನು ತಾಪಂ,ಗ್ರಾಪಂ ಸಿಬ್ಬಂದಿ ವತಿಯಿಂದ ಸನ್ಮಾನಿಸಲಾಯಿತು.ಸಭೆಯಲ್ಲಿ ತಾಪಂ ಯೋಜನಾಧಿಕಾರಿ ಸಿ.ಎಸ್. ನಿಲಗುಂದ, ಕಚೇರಿ ವ್ಯವಸ್ಥಾಪಕ ದೇವರಾಜ ಸಜ್ಜನಶೆಟ್ಟರ ಸೇರಿದಂತೆ ತಾಲೂಕಿನ ಎಲ್ಲ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್, ತಾಂತ್ರಿಕ ಸಹಾಯಕರು, ಎಸ್ ಡಿಎ, ಡಿಇಓ ಸೇರಿದಂತೆ ತಾಪಂ ಸಿಬ್ಬಂದಿ ಹಾಗೂ ನರೇಗಾ ಸಿಬ್ಬಂದಿ ಹಾಜರಿದ್ದರು. ಅರುಣ ಸಿಂಗ್ರಿ ನಿರೂಪಿಸಿ ವಂದಿಸಿದರು.