ಮಾಲೂರು ತಾಲೂಕು ರಾಜ್ಯದ ಗಡಿಭಾಗಗಳನ್ನು ಹೊಂದಿದ್ದು, ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅವ್ಯವಸ್ಥೆಯ ಕಾರಣ ಗ್ರಾಮದ ಜನರು ಪಕ್ಕದ ರಾಜ್ಯದ ಪಟ್ಟಣದ ಆಸ್ವತ್ರೆಗೆ ತೆರೆಳುವ ಸಂಖ್ಯೆ ಹೆಚ್ಚಾಗಿದೆ.
ಪಕ್ಕದ ರಾಜ್ಯದಿಂದ ಪಟ್ಟಣದ ಆಸ್ವತ್ರೆಗೆ ತೆರೆಳುವ ಸಂಖ್ಯೆ ಹೆಚ್ಚು । ೫೧ ಸಿಬ್ಬಂದಿ ಪೈಕಿ ಖಾಯಂ ಆಗಿ ಕೇವಲ ೭ ಮಂದಿ ಕರ್ತವ್ಯ
ರಾಜೇಂದ್ರ ವೈದ್ಯಕನ್ನಡಪ್ರಭ ವಾರ್ತೆ ಮಾಲೂರು
ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ನೀಡಬೇಕಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆಯಿಂದ ಇಲಾಖೆಯೇ ಅನಾರೋಗ್ಯ ಪೀಡಿತಗೊಂಡಿದ್ದು, ಕಟ್ಟಕಡೇಯ ವ್ಯಕ್ತಿಯ ಆರೋಗ್ಯ ಕಾಪಾಡಬೇಕಾದ ಸರ್ಕಾರದ ಭರವಸೆ ಭ್ರಮೆಯಾಗಿ ನಿಂತಿದೆ.ರೋಗಿಗಳಿಂದ ತುಂಬಿ ತುಳಕಾಡುತ್ತಿರುವ ತಾಲೂಕಿನ ಎಲ್ಲ ಆರೋಗ್ಯ ಕೇಂದ್ರಗಳು ಸಿಬ್ಬಂದಿ ಬರ ಎದುರಿಸುತ್ತಿದೆ. ಮಾಲೂರು ತಾಲೂಕು ರಾಜ್ಯದ ಗಡಿಭಾಗಗಳನ್ನು ಹೊಂದಿದ್ದು, ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅವ್ಯವಸ್ಥೆಯ ಕಾರಣ ಗ್ರಾಮದ ಜನರು ಪಕ್ಕದ ರಾಜ್ಯದ ಪಟ್ಟಣದ ಆಸ್ವತ್ರೆಗೆ ತೆರೆಳುವ ಸಂಖ್ಯೆ ಹೆಚ್ಚಾಗಿದೆ. ಇಲ್ಲಿನ ಹಸಂಡಹಳ್ಳಿ, ಮಾಸ್ತಿ, ಟೇಕಲ್, ಹುಳದೇನಹಳ್ಳಿ, ಡಿ.ಎನ್.ದೊಡ್ಡಿ, ದೊಡ್ಡಶಿವಾರ, ತೊರ್ನಹಳ್ಳಿ, ತೊರಲಕ್ಕಿ ಸೇರಿದಂತೆ ತಾಲೂಕಿನಲ್ಲಿರುವ ೯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಟು ವೈದ್ಯರಿದ್ದರೂ, ಅವುಗಳಲ್ಲಿ ಕಾರ್ಯನಿರ್ವಹಿಸಬೇಕಾಗಿದ್ದ ೫೧ ಅಧಿಕಾರಿ ಸಿಬ್ಬಂದಿ ಪೈಕಿ ಖಾಯಂ ಆಗಿ ಕೇವಲ ೭ ಹಾಗೂ ಹೊರಗುತ್ತಿಗೆ ಮೂಲಕ ೭ ಮಂದಿ ಮಾತ್ರ ಇದ್ದಾರೆ.
ಅದಲ್ಲದೇ ಪ್ರಾಥಮಿಕ ಆರೋಗ್ಯ ನಿರೀಕ್ಷಣಾಧಿಕಾರಿ ಒಟ್ಟು ೨೩ ಹುದ್ದೆಗಳು ಖಾಲಿ ಇದೆ. ತಾಲೂಕಿನಲ್ಲಿರಬೇಕಾದ ಎಲ್ಲ ೪ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹುದ್ದೆಗಳು ಖಾಲಿ ಇದೆ. ೯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ೭ ಪ್ರಾಥಮಿಕ ಕೇಂದ್ರಗಳು ೨೪/೭ ಹೆರಿಗೆ ಸೌಲಭ್ಯ ಇದ್ದು, ಮೂರು ಮಂದಿ ಸ್ಟಾಪ್ ನರ್ಸುಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಆರೋಗ್ಯ ಕೇಂದ್ರಗಳಲ್ಲಿ ಸಮಾಧಾನಕಾರ ವಿಷಯವೆಂದರೆ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ನಾಯಿ ಕಡಿತಕ್ಕೆ ಚುಚ್ಚುಮದ್ದು ಲಭ್ಯವಿದ್ದು, ಎಲ್ಲವೂ ಸ್ವಂತ ಕಟ್ಟಡಗಳಲ್ಲಿ ಹೊಂದಿದೆ. ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ವಿದ್ಯುತ್, ಶೌಚಾಲಯ ವ್ಯವಸ್ಥೆ ಇರುವುದು ರೋಗಿಗಳು ಸಮಾಧಾನಪಟ್ಟುಕೊಳ್ಳಬಹುದಾಗಿದೆ. ವೈದ್ಯಕೀಯ ಔಷಧಿಗಳು ಸರ್ಕಾರದ ಜಿಎಂಎಸ್ ಸರ್ಕಾರಿ ಔಷಧ ಮಳಿಗೆಯಿಂದ ಸರಬರಾಜು ಆಗದ ಔಷಧಿಗಳು ಖರೀದಿಸಲು ಎ.ಬಿ.ಆರ್.ಕೆ. ಅನುಮೋದನೆ ಮಾಡಿಸಿಕೊಂಡು ಕಡಿತಕ್ಕೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖರೀದಿ ಮಾಡಬಹುದಾಗಿದೆ. ಅನಾರೋಗ್ಯಕ್ಕೆ ಒಳಗಾದ ತುರ್ತು ರೋಗಿಗಳನ್ನು ನಗರದ ಅಥವಾ ಜಿಲ್ಲಾ ಕೇಂದ್ರದ ಆಸ್ವತ್ರೆಗೆ ರವಾನಿಸಲು ಸರ್ಕಾರಿ ಸಾರ್ವಜನಿಕ ಆಸ್ವತ್ರೆಯ ನಿಯಂತ್ರಣದಲ್ಲಿ ನಗುಮಗು ಒಂದು ವಾಹನ ಹಾಗೂ ೧೦೮ ಅ್ಯಂಬುಲೆನ್ಸ್ ಮಾಲೂರು, ಮಾಸ್ತಿ ಯಲ್ಲಿದ್ದು, ಉಳಿದ ಕಡೆ ಇದರ ಅವಶ್ಯಕತೆ ಹೆಚ್ಚಾಗಿದೆ. ಹಾಲಿ ಇರುವ ಅಂಬುಲೆನ್ಸ್‌ಗಳಿಗೆ ಸಿಬ್ಬಂದಿ ಕೊರತೆ ಸಹ ಇದೆ.
ಸರ್ಕಾರಿ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಿಬ್ಬಂದಿ ಅಧಿಕಾರಿಗಳ ಅಗತ್ಯ ಇದ್ದು, ಸರ್ಕಾರ ಕೊಡಲೇ ಗಮನ ಹರಿಸಿ ನೇಮಕಾತಿ ಮಾಡಿದರೆ ಒಳ್ಳೆದು. ಮಾಸ್ತಿ, ಟೇಕಲ್ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದೇರ್ಜೆಗೇರಿಸಬೇಕಾಗಿದೆ.ಡಾ.ರಮೇಶ್ ಬಾಬು, ತಾಲೂಕು ಆರೋಗ್ಯ ಆಧಿಕಾರಿ
..ನನ್ನ ಮೊದಲ ಅದ್ಯತೆಯಲ್ಲಿ ಕ್ಷೇತ್ರದ ಆರೋಗ್ಯ ಸಹ ಒಂದಾಗಿದ್ದು, ಮಾಲೂರು ಪಟ್ಟಣದಲ್ಲಿ ಇಪ್ಪತ್ತು ಕೋಟಿ ವೆಚ್ಚದಲ್ಲಿ ಹೈಟೆಕ್ ಆಸ್ವತ್ರೆಗೆ ನಿರ್ಮಾಣ ಈಗಾಗಲೇ ಪ್ರಾರಂಭವಾಗಿದೆ. ಹಾಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿ ಯಾಗಿ ತಾಲೂಕಿನಲ್ಲಿ ಹೆಚ್ಚು ರೋಗಿಗಳು ಭೇಟಿ ಮಾಡುವ ತಾಲೂಕಿನ ಎರಡು ಪ್ರಾಥಮಿಕ ಕೇಂದ್ರಗಳಾದ ಮಾಸ್ತಿ ಹಾಗೂ ಟೇಕಲ್ ಕೇಂದ್ರಗಳನ್ನು ಮೇಲ್ದೇರ್ಜೆಗೆ ಎರಿಸುವ ಬಗ್ಗೆ ಚರ್ಚಿಸಲಾಗಿದ್ದು, ಉತ್ತಮ ರೀತಿಯ ಸ್ಪಂದನೆ ಸಿಕ್ಕಿದೆ.
ಕೆ.ವೈ.ನಂಜೇಗೌಡ, ಶಾಸಕ