ತುರುವೇಕೆರೆ ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಕೊರತೆ: ಜನಸಾಮಾನ್ಯರ ಪರದಾಟ

| Published : Jul 04 2025, 11:47 PM IST

ತುರುವೇಕೆರೆ ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಕೊರತೆ: ಜನಸಾಮಾನ್ಯರ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಪ್ರತಿಯೊಂದು ವೃತ್ತಕ್ಕೂ ಓರ್ವ ಗ್ರಾಮ ಆಡಳಿತಾಧಿಕಾರಿಗಳು ಇರಬೇಕು ಎನ್ನುವುದು ನಿಯಮ. ಆದರೆ ಇಲ್ಲೂ ಸಹ ಅತಿ ಹೆಚ್ಚಿನ ಹುದ್ದೆಗಳು ಖಾಲಿ ಉಳಿದಿದೆ.

ಎಸ್.ನಾಗಭೂಷಣ

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನಲ್ಲಿ ಸುಮಾರು 2 ಲಕ್ಷದಷ್ಟು ಜನಸಂಖ್ಯೆ ಇದ್ದು, ಹುಟ್ಟಿನಿಂದ ಮರಣದವರೆಗೂ ಒಂದಲ್ಲಾ ಒಂದು ಕಾರಣಕ್ಕೆ ತಾಲೂಕು ಕಚೇರಿಗೆ ಬರಲೇಬೇಖಿರುತ್ತದೆ. ಆದರೆ ಜನರ ಕೆಲಸಕ್ಕೆ ಸಿಬ್ಬಂದಿಗಳ ಕೊರೆತೆ ಎದ್ದು ಕಾಣುತ್ತಿದೆ.

ಭೂ ಹಕ್ಕು ದಾಖಲಾತಿಗಳ ವಿಭಾಗದಲ್ಲಿ ಒಂದು ಶಿರಸ್ತೇದಾರ್ ಹುದ್ದೆ ಖಾಲಿ ಇದ್ದು, ಚುನಾವಣಾ ಶಿರಸ್ತೇದಾರ್ ಇಲ್ಲ. ಕಂದಾಯ ಇಲಾಖಾಧಿಕಾರಿ 4 ಹುದ್ದೆಯಲ್ಲಿ ಒಂದು ಖಾಲಿ ಇದೆ. ಪ್ರಥಮ ದರ್ಜೆ ಸಹಾಯಕರ 7 ಹುದ್ದೆಯಲ್ಲಿ 2 ಖಾಲಿ ಉಳಿದಿದೆ. ದ್ವಿತೀಯ ದರ್ಜೆ ಸಹಾಯಕರ 13 ಹುದ್ದೆಗಳ ಪೈಕಿ 7 ಹುದ್ದೆ ಖಾಲಿ ಇದೆ. ಬೆರಳಚ್ಚು ವಿಭಾಗದ 2 ಹುದ್ದೆಗಳ ಪೈಕಿ ಒಂದು ಹುದ್ದೆ ಕೊರತೆ ಇದೆ. ಗ್ರೂಪ್ ಡಿ ವಿಭಾಗದ 8 ಹುದ್ದೆಗಳ ಪೈಕಿ 5 ಹುದ್ದೆಗಳು ಖಾಲಿ ಇವೆ. 3 ಡೆಪ್ಯುಟಿ ತಹಸೀಲ್ದಾರ್ ಪೈಕಿ 2 ಹುದ್ದೆ ಖಾಲಿ ಇದೆ. 4 ಶಿರಸ್ತೇದಾರ್ ಹುದ್ದೆಗಳ ಪೈಕಿ 2 ಹುದ್ದೆ ಖಾಲಿ ಇದೆ.

ಖಾಲಿ ಖಾಲಿ ಖಾಲಿ:

ಜನಸಾಮಾನ್ಯರಿಗೆ ಅತ್ಯಂತ ಹತ್ತಿರವಾಗಿ ಸರ್ಕಾರದ ಹಾಗೂ ವೈಯಕ್ತಿಕ ಕೆಲಸ ಕಾರ್ಯಗಳಿಗೆ ಹತ್ತಿರವಾಗಿರುವವರೆಂದರೆ ಗ್ರಾಮ ಆಡಳಿತಾಧಿಕಾರಿಗಳು. ತಾಲೂಕಿನ ಜನತೆಗೆ ಅನುಕೂಲವಾಗಲೆಂದು ಒಟ್ಟು 51 ವೃತ್ತಗಳನ್ನಾಗಿ ಮಾರ್ಪಡಿಸಲಾಗಿದೆ. ಇಲ್ಲಿಯ ಪ್ರತಿಯೊಂದು ವೃತ್ತಕ್ಕೂ ಓರ್ವ ಗ್ರಾಮ ಆಡಳಿತಾಧಿಕಾರಿಗಳು ಇರಬೇಕು ಎನ್ನುವುದು ನಿಯಮ. ಆದರೆ ಇಲ್ಲೂ ಸಹ ಅತಿ ಹೆಚ್ಚಿನ ಹುದ್ದೆಗಳು ಖಾಲಿ ಉಳಿದಿದೆ.

ಕಸಬಾಗೆ ಒಟ್ಟು 15 ವೃತ್ತಗಳಿವೆ. ಇದಕ್ಕೆ ಪ್ರತಿಯಾಗಿ ಕೇವಲ 6 ಮಂದಿ ಮಾತ್ರ ಗ್ರಾಮ ಆಡಳಿತಾಧಿಕಾರಿಗಳು ಇದ್ದು 9 ಹುದ್ದೆಗಳು ಖಾಲಿ ಇವೆ. ದಂಡಿನಶಿವರ ಹೋಬಳಿಯಲ್ಲಿ 12 ವೃತ್ತಗಳು ಇದ್ದು ಇದರಲ್ಲಿ ಕೇವಲ 7 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಖಾಲಿ 5 ಹುದ್ದೆ ಇದೆ. ದಬ್ಬೇಘಟ್ಟ ಹೋಬಳಿಯಲ್ಲಿ 11 ವೃತ್ತಗಳಿವೆ. ಇವುಗಳಲ್ಲಿ 6 ಮಂದಿ ಮಾತ್ರ ಕರ್ತವ್ಯ ನಿರ್ವಹಿಸಿದರೆ 5 ಹುದ್ದೆ ಖಾಲಿ ಇದೆ. ಮಾಯಸಂದ್ರ ಹೋಬಳಿಯಲ್ಲಿ 13 ವೃತ್ತಗಳು ಇವೆ. ಅವುಗಳ ಪೈಕಿ 5 ಮಂದಿ ಗ್ರಾಮ ಆಡಳಿತಾಧಿಕಾರಿಗಳು ಇದ್ದರೆ, 8 ಹುದ್ದೆಗಳು ಖಾಲಿ ಇವೆ. ಇನ್ನು ಭೂಮಿ ವಿಭಾಗಕ್ಕೆ 5 ಮಂದಿಯ ಅಗತ್ಯ ಇದೆ. ಇದರಲ್ಲಿ ಮೂವರು ಮಾತ್ರ ಇದ್ದು ಉಳಿದ 2 ಹುದ್ದೆಗಳು ಖಾಲಿ ಇವೆ. ಅಲ್ಲದೇ ಮೀಸಲು ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳೂ ಸಹ ಖಾಲಿ ಇವೆ. ಇಷ್ಟೊಂದು ಹುದ್ದೆಗಳು ಖಾಲಿ ಇವೆ. ಈ ಖಾಲಿ ಇರುವ ಜಾಗಕ್ಕೆ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳನ್ನೇ ಹೆಚ್ಚುವರಿಯಾಗಿ ನೇಮಕ ಮಾಡಲಾಗಿದೆ. ಇದರಿಂದಾಗಿ ಎಲ್ಲೂ ಸಹ ಪ್ರಾಮಾಣಿಕವಾಗಿ ಜನರಿಗೆ ಸೇವೆ ಒದಗಿಸಲು ಅಸಾಧ್ಯವಾಗಿದೆ.ಕೋಟ್ ....

ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇರುವುದು ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಜಾತಿ, ಆರ್ಥಿಕ ಪ್ರಮಾಣ ಪತ್ರ ಸೇರಿದಂತೆ ವಿವಿಧ ದಾಖಲೆಗಳು ಸಿಗದೇ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಅಲೆದಾಡುವಂತಾಗಿದೆ. ಕೂಡಲೇ ಸರ್ಕಾರ ನಿಗದಿತ ಹುದ್ದೆಗಳನ್ನು ಭರ್ತಿ ಮಾಡಬೇಕು.

ಎಂ.ಟಿ.ಕೃಷ್ಣಮೂರ್ತಿ, ಕೇಂದ್ರ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಲಿ ಸದಸ್ಯ 3 ಟಿವಿಕೆ 1 – ತುರುವೇಕೆರೆಯ ತಾಲೂಕು ಕಚೇರಿ. 3 ಟಿವಿಕೆ 2 – ಕೇಂದ್ರ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಲಿಯ ಸದಸ್ಯ ಎಂ.ಟಿ.ಕೃಷ್ಣಮೂರ್ತಿ.