ರಾಮನಗರ: ರಂಗಭೂಮಿ ಜೀವತಳೆದ ದಿನಗಳಿಂದ ಇಂದಿನವರೆಗೂ ರಂಗಗೀತೆಗಳೇ ನಾಟಕದ ಆತ್ಮವಾಗಿವೆ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಹೇಳಿದರು.
ರಾಮನಗರ: ರಂಗಭೂಮಿ ಜೀವತಳೆದ ದಿನಗಳಿಂದ ಇಂದಿನವರೆಗೂ ರಂಗಗೀತೆಗಳೇ ನಾಟಕದ ಆತ್ಮವಾಗಿವೆ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಮೋತ್ಸವದ 2ನೇ ದಿನವಾದ ಶುಕ್ರವಾರ ರಂಗ ಗೀತೆ ಹಾಡುವ ಮೂಲಕ ರಂಗಗೀತೆಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ನಾಟಕ ಕಲೆ, ಕಲಾವಿದರನ್ನು ಪ್ರೋತ್ಸಾಹಿಸಲು ಹಾಗೂ ಹೊಸ ಪ್ರತಿಭೆಗಳನ್ನು ಉತ್ತೇಜಿಸಿ ವೇದಿಕೆ ಒದಗಿಸಲು ಇಂತಹ ಸ್ಪರ್ಧೆಗಳು ಅತ್ಯಗತ್ಯವಿದೆ ಎಂದರು.ರಂಗಗೀತೆಗಳ ಸ್ಪರ್ಧೆಯಲ್ಲಿ ಬಹುಮಾನ ಪಡೆಯುವುದು ಬೇರೆ ವಿಚಾರ. ಬಹುಮಾನಕ್ಕಿಂತ ಪ್ರೇಕ್ಷಕರ ಮನ ರಂಜಿಸುವುದು ಮುಖ್ಯ. ನಮ್ಮಲ್ಲಿ ಉತ್ತಮ ಕಲಾವಿದರಿಗೆ ಕೊರತೆ ಇಲ್ಲ. ರಂಗ ಗೀತೆಗಳನ್ನು ಸೊಗಸಾಗಿ ಹಾಡುವ ಸಾಕಷ್ಟು ಕಲಾವಿದರು ಇದ್ದಾರೆ. ಅವರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿ.ಎಂ.ಲಿಂಗಪ್ಪರವರು ಭರತ ಭೂಮಿ... ರಂಗಗೀತೆ ಹಾಡಿ ಕಲಾ ಬಳಗಕ್ಕೆ ಸ್ಪೂರ್ತಿ ತುಂಬಿದರಲ್ಲದೆ, ಪ್ರೇಕ್ಷಕರ ಗಮನ ಸೆಳೆದರು. ಹೋಬಳಿ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ಮಂದಿ ಕಲಾವಿದರು ವೇಷ ಭೂಷಣದೊಂದಿಗೆ ರಂಗ ಗೀತೆಗಳನ್ನು ಹಾಡಿ ಪಾತ್ರಕ್ಕೆ ಜೀವ ತುಂಬಿದರಲ್ಲದೆ, ತಮ್ಮೊಳಗಿನ ಪ್ರತಿಭೆ ಅನಾವರಣಗೊಳಿಸಿ ಕಲಾರಸಿಕರ ಮನ ಗೆದ್ದರು.ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚೇತನ್ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ತಾಲೂಕು ಅಧ್ಯಕ್ಷ ವಿ. ಎಚ್. ರಾಜು, ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿಜಯ್ ದೇವ್, ನಗರಸಭೆ ಸದಸ್ಯ ಬೈರೇಗೌಡ, ಮುಖಂಡರಾದ ಕೀರಣಗೆರೆ ಜಗದೀಶ್, ಹರೀಶ್, ರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.16ಕೆಆರ್ ಎಂಎನ್ 3.ಜೆಪಿಜಿ
ರಂಗಗೀತೆಗಳ ಕಾರ್ಯಕ್ರಮದಲ್ಲಿ ವೇಷ ಭೂಷಣದೊಂದಿಗೆ ಕಲಾವಿದರು ಪಾಲ್ಗೊಂಡಿರುವುದು.