ನಮ್ಮ ಹಿರಿಯರ ಹೋರಾಟದ ಫಲವಾಗಿ ವಿಶಾಲ ಕರ್ನಾಟಕ ಉದಯವಾಗಿದೆ. ದೇಶದ ಅಭಿವೃದ್ಧಿ ಯಲ್ಲಿ ಕರ್ನಾಟಕದ ಪಾಲೂ ಇದೆ. ಸರ್ಕಾರದ ಆಡಳಿತದಲ್ಲಿ ಕನ್ನಡವೇ ಪ್ರಧಾನವಾಗಿದೆ.
ಕನ್ನಡಪ್ರಭ ವಾರ್ತೆ ಭೇರ್ಯ ಅಭಿವೃದ್ಧಿ ವಿಷಯದಲ್ಲಿ ಸರ್ಕಾರದ ಜೊತೆ ಕನ್ನಡ ಪರ ಸಂಘಟನೆಗಳು ಗಟ್ಟಿಯಾಗಿ ನಿಲ್ಲಬೇಕು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ಗ್ರಾಮದಲ್ಲಿ ಕನ್ನಡ ಯುವಕರ ಸಂಘ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಹಿರಿಯರ ಹೋರಾಟದ ಫಲವಾಗಿ ವಿಶಾಲ ಕರ್ನಾಟಕ ಉದಯವಾಗಿದೆ. ದೇಶದ ಅಭಿವೃದ್ಧಿ ಯಲ್ಲಿ ಕರ್ನಾಟಕದ ಪಾಲೂ ಇದೆ. ಸರ್ಕಾರದ ಆಡಳಿತದಲ್ಲಿ ಕನ್ನಡವೇ ಪ್ರಧಾನವಾಗಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಉಳಿವಿಗೆ ಶ್ರಮಿಸಿದ ಅನೇಕ ಸಾಧಕರನ್ನು ನೆನಪು ಮಾಡಿ ಕೊಳ್ಳತ್ತಿರುವುದು ಶ್ಲಾಘನೀಯ ಎಂದರು.ಸಾಲಿಗ್ರಾಮ ತಾಲೂಕು ಕೇಂದ್ರವಾಗಿದ್ದು, ಸಾಲಿಗ್ರಾಮ ಗ್ರಾಪಂಯನ್ನು ಪಪಂ ಆಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಅದೇ ರೀತಿ ಭೇರ್ಯ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಂತೆ ಭೇರ್ಯ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಣೆ ಮಾಡಲು ಈಗಾಗಲೇ ಸಂಬಂಧಪಟ್ಟ ಇಲಾಖೆ ಸಚಿವರಿಗೆ ಮನವಿ ಮಾಡಲಾಗಿದೆ. ಅದೇ ರೀತಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ ವಹಿಸಲಾಗಿದೆ ಎಂದರು.ಇದಕ್ಕೂ ಮೊದಲು ಗ್ರಾಮದ ವಿವಿಧ ಶಾಲಾ ವಿದ್ಯಾರ್ಥಿಗಳು ವೇಷಭೂಷಣ ದೊಂದಿಗೆ ಆಲಂಕೃತ ಟ್ರ್ಯಾಕ್ಟರ್ ಗಳಲ್ಲಿ ಸ್ತಬ್ದಚಿತ್ರದೊಂದಿಗೆ ಮೆರವಣಿಗೆಯಲ್ಲಿ ಸಾಗಿ ಕನ್ನಡಾಂಬೆಯ ಮೆರಗನ್ನು ನೆರೆದಿದ್ದ ಸಭಿಕರಿಗೆ ಸಾರಿದರು.ಕಾರ್ಯಕ್ರಮದಲ್ಲಿ ಕನ್ನಡದ ಇತಿಹಾಸದ ಬಗ್ಗೆ ಶಾಲಾ ಮಕ್ಕಳು ಏಕಪಾತ್ರಾಭಿನಯ ಹಾಗೂ ಕನ್ನಡ ಪರಂಪರೆಯ ಇತಿಹಾಸವುಳ್ಳ ಭಾವ ಗೀತೆ, ಭಕ್ತಿಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತುಂಬಿದರು.ತಾಲೂಕು ಶರಣು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಪಿ. ರಮೇಶ್ ಕುಮಾರ್ , ಜಿಪಂ ಮಾಜಿ ಸದಸ್ಯ ಅಮಿತ್ ದೇವರಹಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಮುಶೀರ್, ಬಿ.ಎಚ್. ಮಹದೇವ್, ಗ್ರಾಮ ಮುಖಂಡ ರಷೀದ್, ಇಲ್ಲು, ಶಿಕ್ಷಕ ವಿಜಯ್, ಕಾಂಗ್ರೆಸ್ ಮುಖಂಡ ಖಾಲಿದ್ ಪಾಷ, ಸೆಸ್ಕ್ ಜೆಇ ಮಂಜುನಾಥ್, ಸಂಘದ ಗೌರವಾಧ್ಯಕ್ಷ ಬಿ.ಎಂ. ಕೃಷ್ಣೇಗೌಡ, ಅಧ್ಯಕ್ಷ ರಾಘವೇಂದ್ರ, ಉಪಾಧ್ಯಕ್ಷ ಖಲಿಪತ್, ಪ್ರಧಾನ ಕಾರ್ಯದರ್ಶಿ ಕೆ. ದಿನೇಶ್, ಪದಾಧಿಕಾರಿಗಳಾದ ಬಿ.ಎನ್. ನವೀನ್, ರಂಗ, ಎಕಬಲ್ ಪಾಷ, ಪ್ರಕಾಶ್ ನಾಯಕ್, ಅಶೋಕ, ಲ್ಯಾಂಡ್ರಿ ಶಿವಶೆಟ್ಟಿ, ಮಣಿ, ಬಿ.ಟಿ. ಶ್ರೀನಿವಾಸ, ಬಿ.ಎ. ಕೃಷ್ಣ,, ಚಂದು, ರವಿ, ಇಂಮು, ವಿಜಯ್, ಜಭಿ ಇದ್ದರು.-------------