ಬೈಲಹೊಂಗಲ ಸೌಂದರ್ಯೀಕರಣಕ್ಕೆ ಪ್ರಮಾಣಿಕ ಪ್ರಯತ್ನ: ಮಹಾಂತೇಶ ಕೌಜಲಗಿ

| Published : Jan 10 2025, 12:47 AM IST

ಸಾರಾಂಶ

ಬೈಲಹೊಂಗಲ ನಗರದ ಸೌಂದರ್ಯೀಕರಣ ಹೆಚ್ಚಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುತ್ತಿದ್ದು, ನಾಗರಿಕರ ಸಹಕಾರ ಬಹುಮುಖ್ಯವಾಗಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ನಗರದ ಸೌಂದರ್ಯೀಕರಣ ಹೆಚ್ಚಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುತ್ತಿದ್ದು, ನಾಗರಿಕರ ಸಹಕಾರ ಬಹುಮುಖ್ಯವಾಗಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಪಟ್ಟಣದ ಎಸ್‌ಆರ್ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆಯ ಜತ್ತ-ಜಾಂಬೋಟಿ ಎಸ್‌.ಎಚ್. 31 ಯೋಜನೆಯ 5054 ಅಪೆಂಡಿಕ್ಸ್‌ ಇ 2024-25ರ ಯೋಜನೆ ಅಡಿಯಲ್ಲಿ ₹5 ಕೋಟಿ ವೆಚ್ಚದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕಿತ್ತೂರು ಚನ್ನಮ್ಮ ವೃತ್ತದವರೆಗೆ ಪ್ರಮುಖ ರಸ್ತೆಗೆ ಸಿಮೆಂಟ್ ಪ್ಲೆವರ್ ಜೋಡಣೆ ಮತ್ತು ಮರು ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಈಗಾಗಲೇ ನಗರ ಮತ್ತು ಮತಕ್ಷೇತ್ರದ ಜನತೆಗೆ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಲಾಗುತ್ತಿದೆ. ಗುತ್ತಿಗೆದಾರರು ನಿಗದಿತ ಅವಧಿ ಒಳಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ಸೂಚಿಸಿದರು.

ಪುರಸಭೆ ಮುಖ್ಯಾಧಿಕಾರಿ ವೀರಪ್ಪ ಹಸಬಿ, ಲೋಕೋಪಯೋಗಿ ಇಲಾಖೆಯ ಅಭಿಯಂತರ ಬಸವರಾಜ ಹಲಗಿ, ಎಇ ಅನಿಲ ಎಂ., ವಿವೇಕ ರೆಡ್ಡಿ, ಪೂರ್ಣಾನಂದ, ಅಧ್ಯಕ್ಷ ವಿಜಯ ಬೋಳಣ್ಣವರ, ಉಪಾಧ್ಯಕ್ಷ ಬುಡ್ಡೇಸಾಬ್ ಶಿರಸಂಗಿ, ಸ್ಥಾಯಿ ಸಮಿತಿ ಸದಸ್ಯ ಹೇಮಲತಾ ಹಿರೇಮಠ, ಸದಸ್ಯರಾದ ಬಸವರಾಜ ಜನ್ಮಟ್ಟಿ, ಸದ್ರುದ್ದೀನ್‌ ಅತ್ತಾರ, ಸಾಗರ ಭಾಂವಿಮನಿ, ಅಂಜನಾ ಬೊಂಗಾಳೆ, ಅರ್ಜುನ ಕಲಕುಟಕರ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಮಹಾಂತೇಶ ಕಳ್ಳಿಬಡ್ಡಿ, ವಿಜಯ ಪತ್ತಾರ, ಮಹೇಶ ಹಿರೇಮಠ. ಮಲ್ಲಿಕಾರ್ಜುನ ಏಣಗಿಮಠ, ಗುತ್ತಿಗೆದಾರರಾದ ಮಹಾದೇವ ಪಿರಗಿ, ಜಾವಾಜಿ ಬಾಪೂಜಿ ಸೇರಿದಂತೆ ನೂರಾರು ನಾಗರಿಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪುರಸಭೆ ವತಿಯಿಂದ ನೀರು ಸರಬರಾಜು, ಕಸ ವಿಲೇವಾರಿ, ಬೀದಿ ದೀಪ, ಕಟ್ಟಡ ನಿರ್ಮಾಣ, ತೆರವು ವ್ಯಾಜ್ಯ ಸಂಬಂಧಪಟ್ಟ ದೂರುಗಳಿಗೆ ಸಹಾಯವಾಣಿ 08288-233135, ವ್ಯಾಟ್ಸಾಪ್ -9481563135 ಸಂಪರ್ಕಿಸಲು ಬಿತ್ತಿ ಪತ್ರಗಳನ್ನು ಪ್ರದರ್ಶಿಸಲಾಯಿತು.