ಸ್ಟಾರ್‌ ಕೇರ್‌ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ 7ರಂದು ಲೋಕಾರ್ಪಣೆ

| Published : Apr 03 2024, 01:32 AM IST

ಸ್ಟಾರ್‌ ಕೇರ್‌ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ 7ರಂದು ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ ಮೂಲದ ಯುವ ವೈದ್ಯರೆಲ್ಲರು ಒಂದಾಗಿ ತಾವಿರುವ ನಗರದಲ್ಲಿನ ನಿವಾಸಿಗಳಿಗೆ ಉತ್ಕೃಷ್ಟ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಸ್ಟಾರ್‌ ಮಲ್ಟಿಸ್ಪೇಶ್ಯಾಲಿಟಿ ಆಸ್ಪತ್ರೆ ಆರಂಭಿಸಲು ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿ ಮೂಲದ ಯುವ ವೈದ್ಯರೆಲ್ಲರು ಒಂದಾಗಿ ತಾವಿರುವ ನಗರದಲ್ಲಿನ ನಿವಾಸಿಗಳಿಗೆ ಉತ್ಕೃಷ್ಟ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಸ್ಟಾರ್‌ ಮಲ್ಟಿಸ್ಪೇಶ್ಯಾಲಿಟಿ ಆಸ್ಪತ್ರೆ ಆರಂಭಿಸಲು ಮುಂದಾಗಿದ್ದಾರೆ.ಇಲ್ಲಿನ ಗುಬ್ಬಿ ರಸ್ತೆಯಲ್ಲಿ ಸುಸಜ್ಜಿತವಾದಂತಹ ಆಸ್ಪತ್ರೆ ಕಟ್ಟಡ ಸಿದ್ಧಗೊಂಡಿದೆ. ಏ.7ರಂದು ಇದು ಉದ್ಘಾಟನೆಗೊಳ್ಳುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಟಾರ್‌ ಆಸ್ಪತ್ರೆಯ ನಿರ್ದೇಶಕ ಡಾ. ಪ್ರಶಾಂತ ಮಾಲಿ ಎಲ್ಲಾ ವಿಭಾಗಗಳನ್ನು ಒಳಗೊಂಡಿರುವ ಆಸ್ಪತ್ರೆ ತಮ್ಮದಾಗಿದ್ದು ಜನರ ಅಪೇಕ್ಷೆಯಂತೆಯೇ ಇದನ್ನು ನಡೆಸಲಗುತ್ತದೆ ಎಂದಿದ್ದಾರೆ.

ದುಬಾರಿ ದರ, ಹಣ ಠೇವಣಿ ಇಡೋದು, ಔಷಧಿ ನಮ್ಮಲ್ಲೇ ಖರೀದಿಸಬೇಕು ಎಂಬಿತ್ಯಾದಿ ರೋಗಿಗಳು, ಅವರ ಸಹಾಯಕರಿಗೆ ತಲೆನೋವಾಗುವಂತಹ ವಿಷಯಗಳು ನಮ್ಮ ಆಸ್ಪತ್ರೆಯಲ್ಲಿ ಹತ್ತಿರವೂ ಸುಳಿಯದಂತೆ ಮಾಡುತ್ತೇವೆ. ರೋಗಿಗಳ ಸ್ನೇಹಿಯಾಗಿ ಆಸ್ಪತ್ರೆ ನಡೆಸುತ್ತೇವೆ ಎಂದಿದ್ದಾರೆ.

ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಡಾ. ಪ್ರಶಾಂತ ಮಾಲಿ ಸ್ತ್ರೀರೋಗ, ಹೆರಿಗೆ, ಸರ್ಜರಿ, ಗ್ಯಾಸ್ಟ್ರೋ ಎಂಟಿಯೋರಾಲಜಿ, ನರರೋಗ, ಅರಿವಳಿಕೆ ಶಾಸ್ತ್ರ, ಎಲುಬು ಕೀಲು, ಟ್ರಾಮಾ, ಕ್ಯಾನ್ಸರ್‌ನಂತರ ಕ್ಲಿಷ್ಟಕರ ಸಮಸ್ಯೆಗಳಿಗೂ ಆಸಪತ್ರೆಯಲ್ಲಿ ಗುಣಣಟ್ಟದ ಚಿರಿತ್ಸೆ ಲಭ್ಯವಿರುವಂತೆ ಮಾಡಲಾಗಿದೆ ಎಂದರು.

ಕಲಬುರಗಿ ಮೂಲದವರೇ ಆಗಿರುವ ಬಾಹೂ ಬೆಂಗಳೂರು, ದೆಹಲಿಯಂತಹ ನಗರಗಳಲ್ಲಿನ ಆಸ್ಪತ್ರೆಗಳಲ್ಲಿ ಅನುಭವ ಹೊಂದಿರುವ ತಜ್ಞವೈದ್ಯರಾದ ಬಸವರಾಜ. ಶ್ರೀನಿತ್‌ ಪಾಟೀಲ್‌, ಅರುಣ ಬರಾಡ್‌, ರಾಜ್‌ ಅಹ್ಮದ್‌, ಅಯೂಜ್‌ ಅಕ್ಷಯ್‌, ರೂಪ ಇವರೆಲ್ಲರು ಸ್ಟಾರ್‌ ಆಸ್ಪತ್ರೆಯ ನುರಿತ ವೈದ್ಯರಾಗಿ ಕೆಲಸ ಮಾಡಲಿದ್ದಾರೆ.

ಇದಲ್ಲದೆ ಆಸ್ಪತ್ರೆಯಲ್ಲಿನ ಸ್ವಚ್ಚತೆ ಕಾಪಾಡುವ ವಿಚಾರ, ರೋಗಿಗಳ ಸಹಾಯಕರಿಗೆ ರೋಗಗಳ ಕುರಿತಂತೆ, ನೀಡುತ್ತಿರುವ ಚಿಕಿತ್ಸೆ ಕುರಿತಂತೆ ತಿಳುವಳಿಕೆ ನೀಡೋದು ಇವೆಲ್ಲದಕ್ಕೂ ಪ್ರತ್ಯೇಕ ವಿಭಾಗಗಳನ್ನೇ ತಾವು ಆರಂಭಿಸುತ್ತಿರೋದಾಗಿ ಹೇಳಿದರು. ಸಾರ್ವಜನಿಕ ಸಂಪರ್ಕಕ್ಕೆ ಪ್ರತ್ಯೇಕ ವಿಭಾಗವಿರಲಿದ್ದು ಈ ವಿಭಾಗದಿಂದಲೇ ಎಲ್ಲರಿಗೂ ಸಂಪಕ್ರಿಸಲಾಗುತ್ತಿದೆ ಎಂದರು.

ಏ.7ರಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್‌, ಜಿಲ್ಲಾ ಉಸತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ಶಾಸಕ ಅಲ್ಲಂಪ್ರಭು ಪಾಟೀಲರು ಆಸ್ಪತ್ರೆ ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮುಗುಳನಾಗಂವ್‌ ಮಠದ ಅಭಿನವ ಸಿದ್ದಿಲಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ಆಸ್ಪತ್ರೆಯಲ್ಲಿ ಬರುವ ದಿನಗಳಲ್ಲಿ ಸರಕರಾದ ಎಲ್ಲಾ ಸೇವೆಗಳು ಲಭ್ಯವಿರುವಂತೆ ಮಾಡುತ್ತೇವೆ. ಜೊತೆಗೇ ಬಡವರಿಗೆ ಕೈಗೆಟಕುವ ದರದಲ್ಲಿಯೇ ಆರೋಗ್ಯ ಸೇೆಗಳು ಲಭಿಸುವಂತೆಯೂ ಯೋಜನೆ ರೂಪಿಸಲಾಗುತ್ತಿದೆ. ಏ.8 ಹಾಗೂ 9ರಂದು 2 ದಿನ ಆಸ್ಪತ್ರೆಯಿಂದಲೇ ಆರೋಗ್ಯ ಶಿಬಿರ ನಡೆಸಲಗುತ್ತದೆ. ಇಲ್ಲಿ ಯಾರಿಗಾದರೂ ತೊದಂರೆ ಕಂಡಲ್ಲಿ, ಸರ್ಜರಿ ಬೇಕಗಿದ್ದಲ್ಲಿ ಅಂತಹವರಿಗೆ ರಿಯಾಯ್ತಿ ದರದಲ್ಲಿ ಸೇವೆ ಒದಗಿಸಲಾಗುತ್ತದೆ ಎಂದು ಡಾ. ಪ್ರಶಾಂತ ಮಾಲಿ ಹೇಳಿದ್ದಾರೆ.