ಸ್ವಾವಲಂಬಿಯಾಗಲು ಗೃಹ ಉದ್ಯೋಗ ಪ್ರಾರಂಭಿಸಿ: ಬಸವರಾಜ ಪಾಟೀಲ ಸೇಡಂ

| Published : Feb 11 2024, 01:53 AM IST

ಸಾರಾಂಶ

ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸುವಂತೆ ರಾಜ್ಯ ಸಭಾ ಮಾಜಿ ಸದಸ್ಯ ಕರೆ ನೀಡಿದರು. ಹಾರಕೂಡ ಹಿರೇಮಠ ಸಂಸ್ಥಾನ ಹಾಗೂ ಬಸವಕಲ್ಯಾಣ ಕ್ಷೇತ್ರ ಸಮಿತಿಯ ಸಹಯೋಗದಲ್ಲಿ ಬಸವಕಲ್ಯಾಣದ ಥೇರ್‌ ಮೈದಾನದಲ್ಲಿ ದ್ವಿತೀಯ ಕಾಯಕ ಉತ್ಸವ ಜರುಗಿತು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ದೇಶಿಯ ಉತ್ಪನಗಳನ್ನ ಬೆಳೆಸಿ, ಉಳಿಸಿ ಅವುಗಳನ್ನು ಖರೀದಿಸುವ ಮುಖಾಂತರ ಸ್ಥಳೀಯರಿಗೆ ಉದ್ಯೋಗ ನೀಡಬಹುದು ಎಂದು ರಾಜ್ಯ ಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ತಿಳಿಸಿದರು.

ಅವರು ಹಾರಕೂಡ ಹಿರೇಮಠ ಸಂಸ್ಥಾನ ಹಾಗೂ ಬಸವಕಲ್ಯಾಣ ಕ್ಷೇತ್ರ ಸಮೀತಿಯ ಸಹಯೋಗದಲ್ಲಿ ಇಲ್ಲಿಯ ಥೇರ ಮೈದಾನದಲ್ಲಿ ಹಮ್ಮಿಕೊಂಡಿರುವ ದ್ವಿತೀಯ ಕಾಯಕ ಉತ್ಸವದಲ್ಲಿ ಆಶಯ ನುಡಿಗಳನ್ನಾಡಿ, ಸ್ಥಳೀಯ ಬಡಿಗೇತನ, ಕಂಬಾರ, ಕುಂಬಾರ, ತಯಾರಿಸುವ ಸಾಮಾಗ್ರಿಗಳು ಖರೀದಿಸುವ ಮುಖಾಂತರ ಗೃಹ ಉದ್ಯೋಗ ಬೆಳೆಸಬೇಕೆಂದರು.

ಬಸವಾದಿ ಶಿವಶರಣರು ಕೃಷಿ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಿದ ಎಲ್ಲರು ಕಾಯಕ ಮಾಡಿ ಜೀವನ ಸಾಗಿಸಬೇಕು ಮತ್ತು ಕಾಯಕದಿಂದ ಬಂದ ಸಂಪಾದನೆಯಲ್ಲಿ ದಾಸೋಹ ಮಾಡಬೇಕು ಬಸವಕಲ್ಯಾಣದಲ್ಲಿ 770 ಕಾಯಕ ಜೀವಿಗಳು ಒಟ್ಟಿಗೆ ಸೇರಿ ಉನ್ನತ ಜೀವನ ಸಾಗಿಸಿರುವುದು ನಮ್ಮೆಲರಿಗೆ ಆದರ್ಶವಾಗಿದೆ. ನಾವು ಸಹ ಗುಡಿ ಕೈಗಾರಿಕೆಗೆ ಆದ್ಯತೆ ನೀಡಿ ಉದ್ಯೋಗ ಸೃಷ್ಟಿಸುವ ಮುಖಾಂತರ ದೇಶದ ಆರ್ಥಿಕತೆ ಬಲಿಷ್ಠಗೊಳಿಸಬೇಕೆಂದರು.

ಡಾ.ಗಂಗಾಂಬಿಕಾ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಯಕ ಸತ್ಯ ಶುದ್ಧವಾಗಿರಬೇಕು ಮನಶುದ್ಧವಾಗಿ ಕೆಲಸ ಮಾಡಬೇಕು ತನುಮನ ಶುದ್ಧವಾಗಿ ಕೆಲಸ ಮಾಡಿದವರಿಗೆ ಯಾವುದೇ ಹಣದ ಕೊರತೆ ಆಗುವುದಿಲ್ಲ ಎಂದ ಅವರು, ಹಾಲು ಮಾರುವುದು ಕಾಯಕ, ಹಾಲಿನಲ್ಲಿ ನೀರು ಬೆರೆಸಿ ಮಾರುವುದು ಕಾಯಕವಾಗುವುದಿಲ್ಲ. ಕಾಯಕದಲ್ಲಿ ಮೋಸ, ವಂಚನೆ ಇರ ಕೂಡದು, ಅಂದಾಗ ಜನರ ವಿಶ್ವಾಸ ಗಳಿಸಿ ಉದ್ಯೋಗ ವೃದ್ಧಿಸಿಕೊಳ್ಳಬಹುದು ಎಂದರು.

ನಾಡೋಜಾ ಡಾ.ಬಸವಲಿಂಗ ಪಟ್ಟದೇವರು, ಸಿದ್ದರಾಮೇಶ್ವರ ಸ್ವಾಮೀಜಿ, ಶಾಸಕ ಶರಣು ಸಲಗರ, ಸಿರಿಧಾನ್ಯ ಸಂಶೋಧನಾ ಸಂಸ್ಥೆ ಹೈದ್ರಾಬಾದ ವಿಜ್ಞಾನಿಗಳಾದ ಡಾ.ಸಂಗಪ್ಪ ಚಿಲ್ಲರಗೆ, ಹಿರಿಯ ಸಾಹಿತಿ ಪ್ರೊ.ಸಿದ್ದಣ್ಣ ಲಂಗೋಟಿ, ಮಲ್ಲಿನಾಥ ಹಿರೇಮಠ, ಬಿ.ಕೆ ಹಿರೇಮಠ, ಮಾಜಿ ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ರಾಜಕುಮಾರ ಸಿರಗಾಪೂರ, ಮಾಜಿ ತಾ.ಪಂ ಅಧ್ಯಕ್ಷ ಮೇಘರಾಜ ನಾಗರಾಳೆ, ನಿವೃತ್ತ ಜಿಲ್ಲಾ ಸಿವಿಲ ನ್ಯಾಯಾಧಿಶರಾದ ಸುಭಾಷಚಂದ್ರ ನಾಗರಾಳೆ, ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾದ ಮನೋಜಕುಮಾರ ಪಾಟೀಲ, ಮಾಜಿ ಎಪಿಎಂಸಿ ಅಧ್ಯಕ್ಷರಾದ ಸಿದ್ರಾಮಪ್ಪ ಗುದಗೆ ಉಪಸ್ಥಿತರಿದ್ದರು.