ಶರಣಬಸವ ವಿವಿಯಲ್ಲಿ ಬಿಬಿಎ, ಬಿಸಿಎ ಕೋರ್ಸ್‌ ಆರಂಭ: ಬಿಡವೆ

| Published : May 12 2024, 01:21 AM IST

ಸಾರಾಂಶ

ಎಐಸಿಟಿಇ 2024-25ರ ಶೈಕ್ಷಣಿಕ ವರ್ಷಕ್ಕೆ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ) ಮತ್ತು ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (ಬಿಸಿಎ) ಸೇರಿದಂತೆ ಎರಡು ಪದವಿಪೂರ್ವ ಕೋರ್ಸ್‌ಗಳಿಗೆ ತನ್ನ ಅನುಮೋದನೆಯನ್ನು ನೀಡಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್- ಎಐಸಿಟಿಇ 2024-25ರ ಶೈಕ್ಷಣಿಕ ವರ್ಷಕ್ಕೆ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ) ಮತ್ತು ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (ಬಿಸಿಎ) ಸೇರಿದಂತೆ ಎರಡು ಪದವಿಪೂರ್ವ ಕೋರ್ಸ್‌ಗಳಿಗೆ ತನ್ನ ಅನುಮೋದನೆಯನ್ನು ನೀಡಿದೆ.

ಈ ಶೈಕ್ಷಣಿಕ ವರ್ಷದಿಂದ ಮೊದಲ ಬಾರಿಗೆ ಎಐಸಿಟಿಇ ಶಿಕ್ಷಣ ಸಂಸ್ಥೆಗಳು ನೀಡುವ ಬಿಬಿಎ ಮತ್ತು ಬಿಸಿಎ ಕೋರ್ಸ್‌ಗಳನ್ನು ತನ್ನ ವ್ಯಾಪ್ತಿಗೆ ತಂದಿದೆ ಮತ್ತು ಈ ಕೋರ್ಸ್‌ಗಳನ್ನು ನಡೆಸಲು ಎಐಸಿಟಿಇ ಅನುಮೋದನೆ ಪಡೆಯುವುದನ್ನು ಕಡ್ಡಾಯಗೊಳಿಸಿದೆ.

ಶನಿವಾರ ಪ್ರಕಟಣೆ ನೀಡಿರುವ ಶರಣಬಸವ ವಿವಿ ಉಪ ಕುಲಪತಿ ಡಾ. ಅನಿಲಕುಮಾರ ಬಿಡವೆ, ಬಿಬಿಎ ಮತ್ತು ಬಿಸಿಎ ಕೋರ್ಸ್‌ ಎಐಸಿಟಿಇ ವ್ಯಾಪ್ತಿಗೆ ತರುವುದರಿಂದ ಎಐಸಿಟಿಇ ಸೇರಿದಂತೆ ವಿದ್ಯಾರ್ಥಿಗಳಿಗೆ ನೀಡುವ ಎಲ್ಲಾ ಸವಲತ್ತುಗಳಾದ ವಿದ್ಯಾರ್ಥಿವೇತನ, ಇಂಟರ್ನ್‍ಶಿಪ್‍ಗಳು, ಉದ್ಯೋಗಕ್ಕಾಗಿ ಸಹಾಯ, ಫೆಲೋಶಿಪ್ ಮತ್ತು ಇತರ ಪ್ರಯೋಜನಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಬಿಸಿಎ ಮತ್ತು ಬಿಬಿಎ ಕೋರ್ಸ್‌ಗಳ ಪ್ರವೇಶಕ್ಕೆ ಅನುಮೋದನೆಯೊಂದಿಗೆ, 2024-25ರ ಶೈಕ್ಷಣಿಕ ವರ್ಷಕ್ಕೆ ತನ್ನ ವ್ಯಾಪ್ತಿಯಲ್ಲಿ ಬರುವ ಇತರ ಪದವಿಪೂರ್ವ ಮತ್ತು ಸ್ನಾತಕೋತ್ತರ ತಾಂತ್ರಿಕ ಮತ್ತು ನಿರ್ವಹಣಾ ಕೋರ್ಸ್‌ಗಳಿಗೆ ಅನುಮೋದನೆಯನ್ನು ನವೀಕರಿಸಿದೆ ಎಂದು ಡಾ. ಬಿಡವೆ ತಿಳಿಸಿದ್ದಾರೆ.

ಪದವಿ ಪೂರ್ವ ಕೋರ್ಸ್‌ಗಳು:

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ (ಪದವಿಪೂರ್ವ) 60 ಸೀಟುಗಳು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲನಿರ್ಂಗ್ (ಪದವಿಪೂರ್ವ) 60 ಸೀಟುಗಳು, ಸಿವಿಲ್ ಇಂಜಿನಿಯರಿಂಗ್ (ಪದವಿಪೂರ್ವ) 120 ಸೀಟುಗಳು, ಸಿವಿಲ್ ಇಂಜಿನಿಯರಿಂಗ್ (ಮಹಿಳೆ-ಪದವಿಪೂರ್ವ) 30 ಸೀಟುಗಳು, ಕಂಪ್ಯೂಟರ್ ಸೈನ್ಸ್ ಮತ್ತು ಡಿಸೈನ್ (ಪದವಿಪೂರ್ವ) 60 ಸೀಟುಗಳು, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (ಪದವಿಪೂರ್ವ) 180 ಸೀಟುಗಳು,, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (ಮಹಿಳೆ-ಪದವಿಪೂರ್ವ) 150 ಸೀಟುಗಳು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ (ಪದವಿಪೂರ್ವ) 60 ಸೀಟುಗಳು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ (ಮಹಿಳೆ-ಪದವಿಪೂರ್ವ) 60 ಸೀಟುಗಳು, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ (ಪದವಿಪೂರ್ವ) 120 ಸೀಟುಗಳು, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ (ಮಹಿಳೆ-ಪದವಿಪೂರ್ವ) 120 , ಎನರ್ಜಿ ಇಂಜಿನಿಯರಿಂಗ್ (ಪದವಿಪೂರ್ವ) 60 ಸೀಟುಗಳು, ಮೆಕ್ಯಾನಿಕಲ್ ಇಂಜಿನಿಯರಿಂಗ್ (ಪದವಿಪೂರ್ವ) 120 ಸೀಟುಗಳು ಲಭ್ಯ.

ಸ್ನಾತಕೋತ್ತರ ತಾಂತ್ರಿಕ ಮತ್ತು ನಿರ್ವಹಣಾ ಕೋರ್ಸ್‌ಗಳು:

ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಸ್ನಾತಕೋತ್ತರ) 60 ಸೀಟುಗಳು, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (ಸ್ನಾತಕೋತ್ತರ) 18, ಕಂಪ್ಯೂಟರ್ ನೆಟ್‍ವರ್ಕ್ ಇಂಜಿನಿಯರಿಂಗ್ (ಸ್ನಾತಕೋತ್ತರ) 15 ಸೀಟುಗಳು, ವಿಎಲ್‍ಎಸ್‍ಐ ಮತ್ತು ಎಂಬೆಡೆಡ್ ಸಿಸ್ಟಮ್ಸ್ (ಸ್ನಾತಕೋತ್ತರ) 18 ಸೀಟುಗಳು, ಡಿಜಿಟಲ್ ಎಲೆಕ್ಟ್ರಾನಿಕ್ಸ್ (ಸ್ನಾತಕೋತ್ತರ) 18 ಸೀಟುಗಳು, ಸ್ಟ್ರಕ್ಚರಲ್ ಇಂಜಿನಿಯರಿಂಗ್ (ಸ್ನಾತಕೋತ್ತರ) 24 ಸೀಟುಗಳು, ಮೆಷಿನ್ ಡಿಸೈನ್ (ಸ್ನಾತಕೋತ್ತರ) 18 ಸೀಟುಗಳು, ಡಿಜಿಟಲ್ ಕಮ್ಯುನಿಕೇಷನ್ಸ್ ಮತ್ತು ನೆಟ್‍ವಕಿರ್ಂಗ್ (ಮಹಿಳಾ-ಸ್ನಾತಕೋತ್ತರ) 18 ಸೀಟುಗಳು, ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಸ್ನಾತಕೋತ್ತರ) 180 ಸೀಟುಗಳು, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (ಮಹಿಳೆ-ಸ್ನಾತಕೋತ್ತರ) 18 ಸೀಟುಗಳು, ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ-ಸ್ನಾತಕೋತ್ತರ) 60 ಸೀಟುಗಳು, ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್-ಸ್ನಾತಕೋತ್ತರ) 30 ಸೀಟುಗಳು ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ (ಸ್ನಾತಕೋತ್ತರ) 18 ಸೀಟುಗಳು ಎಂದು ಡಾ. ಅನಿಲಕುಮಾರ ಬಿಡವೆ ತಿಳಿಸಿದ್ದಾರೆ.