ಮೂಲ ಸೌಲಭ್ಯ ಕಲ್ಪಿಸಲು ಕಾಮಗಾರಿಗಳಿಗೆ ಚಾಲನೆ: ದರ್ಶನ್ ಧ್ರುವನಾರಾಯಣ

| Published : Nov 20 2024, 12:32 AM IST

ಮೂಲ ಸೌಲಭ್ಯ ಕಲ್ಪಿಸಲು ಕಾಮಗಾರಿಗಳಿಗೆ ಚಾಲನೆ: ದರ್ಶನ್ ಧ್ರುವನಾರಾಯಣ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ಗ್ರಾಮಸ್ಥರ ಬೇಡಿಕೆಗಳನ್ನು ಎಲ್ಲ ಗ್ರಾಮಗಳಿಗೂ ಮೂಲ ಸೌಕರ್ಯ ಕಲ್ಪಿಸುವ ಸಲುವಾಗಿ ಗ್ರಾಮಸ್ಥರ ಬೇಡಿಕೆಯನ್ನು ಪರಿಗಣಿಸಿ ಮುಖ್ಯಮಂತ್ರಿಗಳ ಮನವೊಲಿಸಿ 25 ಕೋಟಿ ಮಂಜೂರು ಮಾಡಿಸಿ ವಿಶೇಷ ಅನುದಾನದಡಿ ಮೂಲ ಸೌಲಭ್ಯ ನೀಡಲು ಕಾಮಗಾರಿ ನಡೆಸಲಾಗುತ್ತಿದೆ. ಮುಂದುವರೆದ ಕಾಮಗಾರಿಕೆ ಶಾಸಕರ ಅನುದಾನ ಬಳಸಿ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು.

ಕನ್ನಡಪ್ರಭ ವಾರ್ತೆ ನಂಜನಗೂಡು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಕ್ಷೇತ್ರಕ್ಕೆ 25 ಕೋಟಿ ರು. ಗಳ ವಿಶೇಷ ಅನುದಾನ ಮಂಜೂರು ಮಾಡಿದ್ದು, ಅನುದಾನ ಬಳಸಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ದರ್ಶನ್ಧ್ರುವನಾರಾಯಣ ಹೇಳಿದರು.

ತಾಲೂಕಿನ ಕಣೇನೂರು, ಹರದನಹಳ್ಳಿ, ಹುಚ್ಚಗಣಿ, ಇಬ್ಜಾಲ, ಕಾಟೂರು ಗ್ರಾಮಗಳಲ್ಲಿ 1.5 ಕೋಟಿ ರು. ವೆಚ್ಚದಲ್ಲಿ ಕನಕಸಮುದಾಯ ಭವನ, ಸಿ.ಸಿ. ರಸ್ತೆ, ಬಸ್ ಶೆಲ್ಟರ್ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನಡೆಸಿ ಅವರು ಮಾತನಾಡಿದರು.

ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ಗ್ರಾಮಸ್ಥರ ಬೇಡಿಕೆಗಳನ್ನು ಎಲ್ಲ ಗ್ರಾಮಗಳಿಗೂ ಮೂಲ ಸೌಕರ್ಯ ಕಲ್ಪಿಸುವ ಸಲುವಾಗಿ ಗ್ರಾಮಸ್ಥರ ಬೇಡಿಕೆಯನ್ನು ಪರಿಗಣಿಸಿ ಮುಖ್ಯಮಂತ್ರಿಗಳ ಮನವೊಲಿಸಿ 25 ಕೋಟಿಗಳನ್ನು ಮಂಜೂರು ಮಾಡಿಸಿ ವಿಶೇಷ ಅನುದಾನದಡಿ ಮೂಲ ಸೌಲಭ್ಯ ನೀಡಲು ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಮುಂದುವರೆದ ಕಾಮಗಾರಿಕೆ ಶಾಸಕರ ಅನುದಾನ ಬಳಸಿ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ತಾಲೂಕಿನ ಕಣೇನೂರು ಗ್ರಾಮದಲ್ಲಿ ಮಂಗಳವಾರ 35 ಲಕ್ಷ ರು. ವೆಚ್ಚದ ಸಿಸಿ ರಸ್ತೆ ನಿರ್ಮಾಣ ನಿರ್ಮಾಣ, 5 ಲಕ್ಷ ವೆಚ್ಚದಲ್ಲಿ ಕನಕ ಭವನ ನಿರ್ಮಾಣ, ಹುಚ್ಚಗಣಿ ಗ್ರಾಮದಲ್ಲಿ 25 ಲಕ್ಷ ವೆಚ್ಚದ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, ಕೆಂಪೇಗೌಡ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ 10 ಲಕ್ಷ ನೀಡಲಾಗಿದೆ, ಹುಚ್ಚಗಣಿ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಲು , ಗ್ರಾಮದ ಗಡಿಯನ್ನು ಗುರ್ತು ಮಾಡಲಾಗಿದೆ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲಿ ಕಂದಾಯ ಗ್ರಾಮವನ್ನಾಗಿ ಘೋಷಿಸಲಾಗುವುದು ಎಂದು ಹೇಳಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ತಾಲೂಕಿನ ಗಡಿ ಭಾಗದ ಗ್ರಾಮಗಳ 800 ಎಕರೆ ಪ್ರದೇಶಕ್ಕೆ ಕಬಿನಿ ಬಲ ದಂಡೆ ಕಾಲುವೆ ಮೂಲಕ ನೀರಿನ ಸಂಪರ್ಕ ಒದಗಿಸುವಂತೆ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ, ಅವರ ಬೇಡಿಕೆಯನ್ನು ಮನ್ನಿಸಿ ಸಣ್ಣ ನೀರಾವರಿ ಯೋಜನೆಯಡಿಯಲ್ಲಿ ಕಾಮಗಾರಿಯನ್ನು ಕೈಗೊಂಡು ನೀರಿನ ಸಂಪರ್ಕ ನೀಡಲು ಕ್ರಮವಹಿಸಲಾಗುವುದು ಎಂದು ಹೇಳಿದರು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಮಾರುತಿ, ಕಾಂಗ್ರೆಸ್ ಉಸ್ತುವಾರಿ ಸೋಮೇಶ್‌, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯ್ಕ, ಮುಖಂಡರಾದ ರಾಜಣ್ಣ, ಸೂರ್ಯ ಕುಮಾರ್, ಬಾಲರಾಜ್, ನರಸಿಂಹೇಗೌಡ, ಅಭಿನಂದನ್ಪಟೇಲ್‌, ಬಸಪ್ಪ, ಸೂರ್ಯನಾರಾಯಣ, ಸಾಧಿಕ್ಪಾಷ, ಬಸಮ್ಮ, ಬಸವರಾಜು ಗ್ರಾಪಂ ಅಧ್ಯಕ್ಷ ಮಂಜುನಾಥ್‌, ಭೂಸೇನೆ ನಿಗಮದ ಎಇ ಶರಣ್ ಇದ್ದರು.