ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಒಳಚರಂಡಿ ನಿರ್ಮಿಸಿದ ಬಳಿಕ ಪುರಸಭೆ ವ್ಯಾಪ್ತಿಯಲ್ಲಿನ ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಿ ಎಂದು ಸಂಸದ ಸುನೀಲ್ ಬೋಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕ್ಷೇತ್ರದ ಟೌನ್ ವ್ಯಾಪ್ತಿಯ ಕಡ್ಲೆ ರಂಗಮ್ಮನ ಬೀದಿಯಲ್ಲಿ ಗುರುವಾರ 5 ಕೋಟಿ ರು. ವೆಚ್ಚದ ವಿವಿಧ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ಸಲ್ಲಿಸಿದ ಅವರಿಗೆ ಸ್ಥಳೀಯರು ಹದಗೆಟ್ಟು ಹಾಳಾಗಿರುವ ರಸ್ತೆಗಳ ಅವ್ಯವಸ್ಥೆ ಮತ್ತು ಒಳಚರಂಡಿಯನ್ನು ನಿರ್ಮಾಣ ಮಾಡದಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆ ಒಳಚರಂಡಿ ಕಾಮಗಾರಿ ಕೈಗೊಂಡ ಬಳಿಕವೇ ರಸ್ತೆ ಕಾಮಗಾರಿಯನ್ನು ಆರಂಭಿಸಿ ಎಂದು ಸ್ಥಳದಲ್ಲಿದ್ದ ಪುರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಟ್ಟಣದಲ್ಲಿ ಹದಗೆಟ್ಟು ಹಾಳಾಗಿರುವ ರಸ್ತೆಗಳು ಹಾಗೂ ಪುರಸಭೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ಅರಿವಿದೆ. ಆಡಳಿತಾತ್ಮಕ ಲೋಪಗಳನ್ನು ಸರಿಪಡಿಸಿಕೊಂಡು, ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಹಲವು ಬಾರಿ ಸೂಚನೆ ನೀಡಿದ್ದೇವೆ. ಮುಂದಿನ ತಿಂಗಳೊಳಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಿ, ಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.ಲೋಕೋಪಯೋಗಿ ಕಚೇರಿಗೆ ಕಾಂಪೌಂಡ್ ನಿರ್ಮಾಣ:
ಪಟ್ಟಣದ ತಲಕಾಡು ಹೆಮ್ಮಿಗೆ ಮುಖ್ಯರಸ್ತೆಯಲ್ಲಿರುವ ಲೋಕೋಪಯೋಗಿ ತಾಂತ್ರಿಕ ಉಪ ವಿಭಾಗದ ಕಚೇರಿಗೆ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡುವ 45 ಲಕ್ಷ ರು. ಗಳ ವೆಚ್ಚದ ಕಾಮಗಾರಿಗೆ ಸಂಸದ ಸುನೀಲ್ ಬೋಸ್ ಭೂಮಿ ಪೂಜೆ ಸಲ್ಲಿಸಿ, ಚಾಲನೆ ನೀಡಿದರು.ವಿದ್ಯಾರ್ಥಿನಿಯರ ನಿಲಯಕ್ಕೂ ಭೇಟಿ, ಅಹವಾಲು ಆಲಿಕೆ:
ಲೋಕೋಪಯೋಗಿ ಕಚೇರಿಯ ಕಾಂಪೌಂಡ್ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿದ ಬಳಿಕ ಸಂಸದರು ಪಕ್ಕದಲ್ಲಿಯೇ ಇದ್ದ ಹಿಂದುಳಿದ ವರ್ಗಗಳ ಇಲಾಖೆಯ ಡಿ. ದೇವರಾಜ ಅರಸು ವಿದ್ಯಾರ್ಥಿನಿಯರ ನಿಲಯ ಭೇಟಿ ನೀಡಿ, ಪರಿಶೀಲಿಸಿದರು. ಅಲ್ಲದೆ ನಿಲಯದಲ್ಲಿನ ಸೌಲಭ್ಯಗಳು ಮತ್ತು ಶೈಕ್ಷಣಿಕ ಸವಲತ್ತುಗಳ ಬಗ್ಗೆ ಅಲ್ಲಿನ ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದು, ಸಮಸ್ಯೆಗಳನ್ನ ಆಲಿಸಿದರು. ನಂತರ ಅತಿಗಣ್ಯರ ಅಧಿತಿಗೃಹಕ್ಕೆ ತೆರಳಿ ಕೆಲವು ತಾಸು ಸಾರ್ವಜನಿಕರು ಹಾಗೂ ಕಾರ್ಯಕರ್ತರ ಕುಂದು ಕೊರತೆಗಳನ್ನು ವಿಚಾರಿಸಿದರು.ಪುರಸಭೆ ಅಧ್ಯಕ್ಷೆ ಬಿ. ವಸಂತ ಶ್ರೀಕಂಠ, ಸದಸ್ಯರಾದ ನಾಗತ್ನ ಮಾದೇಶ್, ಬಾದಾಮಿ ಮಂಜು, ಸಿ. ಪ್ರಕಾಶ್, ಮದನ್ ರಾಜ್, ಆರ್. ನಾಗರಾಜು, ಸಿದ್ದು, ಮುಖ್ಯಾಧಿಕಾರಿ ಬಿ.ಕೆ. ವಸಂತ ಕುಮಾರಿ, ಕಿರಿಯ ಎಂಜಿನಿಯರ್ ಎ.ಡಿ. ನಾಗರಾಜು, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಸತೀಶ್ ಚಂದ್ರ, ತಾಪಂ ಮಾಜಿ ಉಪಾಧ್ಯಕ್ಷ ಬಿ. ಮರಯ್ಯ, ಮಾಜಿ ಸದಸ್ಯ ಎಂ. ರಮೇಶ್, ಮೃಗಾಲಯದ ಪ್ರಾಧಿಕಾರದ ಮಾಜಿ ನಿರ್ದೇಶಕಿ ಲತಾ ಜಗದೀಶ್, ಇನ್ ಸ್ಪೆಕ್ಟರ್ ಧನಂಜಯ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))