ಕನ್ನಡಪ್ರಭ ವಾರ್ತೆ ಅರಸೀಕೆರೆ

ರಾಜ್ಯಪತ್ರಕರ್ತ ಸಮ್ಮೇಳನದಲ್ಲಿ ಪ್ರಶಸ್ತಿ ಪಡೆದ ತಾಲೂಕಿನವರೇ ಆದ ಪತ್ರಕರ್ತ ಮೋಹನ್ ಕೃಷ್ಣ ಅವರಿಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.

ನಗರದ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋಹನ್ ಕೃಷ್ಣ ಹಾಗೂ ಅವರ ಪತ್ನಿ ಲತಾ ಭಾಗವಹಿಸಿ ಅಭಿನಂದನೆಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೋಹನ್ ಕೃಷ್ಣ, ಪ್ರಶಸ್ತಿ ದೊರೆತಾಗಿಗಿಂತಲೂ ತಮ್ಮ ಹುಟ್ಟೂರಾದ ಅರಸೀಕೆರೆಯಲ್ಲಿ ಪತ್ರಕರ್ತರಿಂದ ಸನ್ಮಾನಿತರಾಗಿರುವುದು ಹೆಚ್ಚು ಸಂತೋಷ ತಂದಿದೆ. ಪ್ರಶಸ್ತಿಗಳು ವ್ಯಕ್ತಿಯ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಕಳೆದ ಮೂರು ದಶಕಗಳಿಂದ ಅರಸೀಕೆರೆ ಪತ್ರಕರ್ತರೊಂದಿಗೆ ಬೆಳೆದ ಒಡನಾಟವನ್ನು ಅವರು ಸ್ಮರಿಸಿದರು.

ಉದ್ಯಮಿ ರಾಘವೇಂದ್ರ ಮಾತನಾಡಿ, ಸಾಧನೆ ಮಾಡಿದವರನ್ನು ಗೌರವಿಸುವುದು ಸಂಘಟನೆಗಳ ಕರ್ತವ್ಯ. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದೆ. ಇಂತಹ ಕಾರ್ಯಕ್ರಮಗಳು ಯುವ ಪತ್ರಕರ್ತರಿಗೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.ಸಂಘದ ಅಧ್ಯಕ್ಷ ಆನಂದ್ ಮಾತನಾಡಿ, ಪತ್ರಕರ್ತರ ಸಾಧನೆಯನ್ನು ಗುರುತಿಸಿ ಗೌರವಿಸುವುದು ನಮ್ಮ ಉದ್ದೇಶ. , ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲು ಪ್ರೇರಣೆಯಾಗುತ್ತವೆ. ಸಂಘವು ಸದಾ ಪತ್ರಕರ್ತರ ಹಿತಾಸಕ್ತಿಗಾಗಿ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ರಾಮಚಂದ್ರ, ಮಾಡಾಳು ಶಿವಲಿಂಗಪ್ಪ, ಕಣಕಟ್ಟೆ ಕುಮಾರ್, ಮಂಜುನಾಥ್, ಕಾರ್ಯದರ್ಶಿ ನವೀನ್, ಉಪಾಧ್ಯಕ್ಷ ಮಾಡಾಳು ಸ್ವಾಮಿ, ಹೇಮಂತ್ ಕುಮಾರ್ ಹಾಗೂ ಹಿರಿಯ ಪತ್ರಕರ್ತ ಜಗಣ್ಣ, ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ವರದಿಗಾರ ಜೀವನ್ ಕುಮಾರ್ ಅವರ ಹುಟ್ಟುಹಬ್ಬವನ್ನು ಸಹ ಆಚರಿಸಲಾಯಿತು.