ಸಾರಾಂಶ
ನಾಗಸಮುದ್ರದಲ್ಲಿ 1982ರ ಗೋಲಿಬಾರ್ ಘಟನೆ ವೇಳೆ ಭಾಗವಹಿಸಿದ್ದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಾಗಸಮುದ್ರದ ಎಸ್.ಶಿವಮೂರ್ತಿ (65) ಹೃದಯಘಾತದಿಂದ ಶುಕ್ರವಾರ ತಡರಾತ್ರಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಅಂತ್ಯ ಸಂಸ್ಕಾರ ಶನಿವಾರ ಸಂಜೆ ಸ್ವಂತ ಜಮೀನಿನಲ್ಲಿ ನೆರವೇರಿಸಲಾಯಿತು.
ಕನ್ನಡಪ್ರಭ ವಾರ್ತೆ, ಹೊಳೆಹೊನ್ನೂರು
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಾಗಸಮುದ್ರದ ಎಸ್.ಶಿವಮೂರ್ತಿ (65) ಹೃದಯಘಾತದಿಂದ ಶುಕ್ರವಾರ ತಡರಾತ್ರಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಅಂತ್ಯ ಸಂಸ್ಕಾರ ಶನಿವಾರ ಸಂಜೆ ಸ್ವಂತ ಜಮೀನಿನಲ್ಲಿ ನೆರವೇರಿಸಲಾಯಿತು.ನಾಗಸಮುದ್ರ ಗೋಲಿಬಾರ್:
ಎಸ್.ಶಿವಮೂರ್ತಿ ಅವರು ಜಿಲ್ಲಾ ರೈತ ಸಂಘದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ನಾಗಸಮುದ್ರದಲ್ಲಿ 1982 ರಲ್ಲಿ ನಡೆದ ಗೋಲಿಬಾರ್‌ನಲ್ಲಿ ಭಾಗವಹಿಸಿದ್ದರು. ಹತ್ತಾರು ರೈತಪರ ಹೋರಾಟಗಳಲ್ಲಿ ಬಂಧಿತರಾಗಿ ಜೈಲು ವಾಸ ಅನುಭವಿಸಿದ್ದಾರೆ. ತಾಲೂಕು ಹಾಗೂ ಜಿಲ್ಲಾಮಟ್ಟದ ಅನೇಕ ಹುದ್ದೆಗಳನ್ನು ನಿಭಾಯಿಸಿ, ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.ವಿವಿಧೆಡೆಗಳಿಂದ ಆಗಮನ:
ಅಕ್ಕಪಕ್ಕ ಜಿಲ್ಲೆಗಳಾದ ದಾವಣಗೆರೆ, ಹಾವೇರಿ, ಚಿತ್ರದುರ್ಗ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ರೈತರ ಮುಖಂಡರು ಮೃತರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಎಡಿಜಿಪಿ ಅನಿಲ್‌ಕುಮಾರ್ ಭೂಮರೆಡ್ಡಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಲ್. ಷಡಾಕ್ಷರಿ, ರೈತ ಮುಖಂಡರಾದ ಸೂಡುರು ಶಿವಣ್ಣ, ಕೆ.ಎಲ್. ಅಶೋಕ್, ಕುರುವ ಗಣೇಶ್, ಸಿದ್ದವೀರಪ್ಪ, ಮುನಿಯಪ್ಪ, ಟಿ.ಎಂ. ಚಂದ್ರಪ್ಪ, ರಾಜರಾಮ್, ಸಿ,ಎಚ್. ಜಗದೀಶ್ ಇನ್ನಿತರರು ರೈತನಾಯಕನ ಸಾವಿಗೆ ಕಂಬನಿ ಮಿಡಿದರು. ಮೃತರ ಅಂತಿಮ ಯಾತ್ರೆಯಲ್ಲಿ ಭಾಗಿಯಾದರು.ಸಂತಾಪ ಸಭೆ:
ಜ.23ರಂದು ಮಂಗಳವಾರ ರಾಜ್ಯ ರೈತ ಸಂಘ ಶಿವಮೊಗ್ಗದಲ್ಲಿ ಸಂತಾಪ ಸಭೆಯನ್ನು ಆಯೋಜಿಸಿದೆ.- - - -20ಎಚ್‌ಎಚ್ಆರ್01: ಎಸ್.ಶಿವಮೂರ್ತಿ