ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ನೇತೃತ್ವದಲ್ಲಿ ಅಧಿಕಾರಿಗಳಿಂದ ಪರಿಶೀಲನೆ

| Published : Oct 25 2024, 12:45 AM IST

ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ನೇತೃತ್ವದಲ್ಲಿ ಅಧಿಕಾರಿಗಳಿಂದ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ವಸತಿ ನಿಲಯದ ವಾರ್ಡನ್ ಬೇಜವಾಬ್ದಾರಿತನದಿಂದ ಮಕ್ಕಳು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಹಾಜರಾತಿಗೆ ಮಯೋಮೆಟ್ರಿಕ್ ಅಳವಡಿಸಿಲ್ಲ. ವಿದ್ಯಾರ್ಥಿಗಳು ಹೊರ ಹೋಗಿ ಬರುವುದಕ್ಕೆ ಯಾವುದೇ ರಿಜಿಸ್ಟರ್ ನಿರ್ವಹಿಸಿಲ್ಲ.

ಕನ್ನಡಪ್ರಭ ವಾರ್ತೆ ಪಾಂಡವಪುರ

ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ನೇತೃತ್ವದಲ್ಲಿ ತಾಲೂಕಿನ ವಿವಿಧ ಸಂಘ ಸಂಸ್ಥೆ, ಉಪವಿಭಾಗೀಯ ಆಸ್ಪತ್ರೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯ ಹಾಗೂ ಜ್ಯೂಯಿಲರಿ ಅಂಗಡಿಗಳಲ್ಲಿ ಭೇಟಿ ಪರಿಶೀಲನೆ ನಡೆಸಿ ತೂಕದಲ್ಲಿ ವ್ಯತ್ಯಾಸ ಹಾಗೂ ನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರಿರುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ಕೃಷ್ಣನಗರದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯಕ್ಕೆ ಭೇಟಿ ನೀಡಿದ ವೇಳೆ ಡಾ.ಕೃಷ್ಣ ಮಾತನಾಡಿ, ವಸತಿ ನಿಲಯದ ವಾರ್ಡನ್ ಬೇಜವಾಬ್ದಾರಿತನದಿಂದ ಮಕ್ಕಳು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಹಾಜರಾತಿಗೆ ಮಯೋಮೆಟ್ರಿಕ್ ಅಳವಡಿಸಿಲ್ಲ. ವಿದ್ಯಾರ್ಥಿಗಳು ಹೊರ ಹೋಗಿ ಬರುವುದಕ್ಕೆ ಯಾವುದೇ ರಿಜಿಸ್ಟರ್ ನಿರ್ವಹಿಸಿಲ್ಲ ಎಂದರು.

ಮಕ್ಕಳು ಇಷ್ಟಬಂದತೆ ಹೋಗಿ ಬರುತ್ತಿದ್ದಾರೆ. ನಿಲಯದಲ್ಲಿ ಶುಚಿತ್ವ ಕಾಪಾಡದೇ ಗಬ್ಬು ನಾರುತ್ತಿದೆ. ನೂರು ಮಕ್ಕಳು ಇರುವ ನಿಲಯದಲ್ಲಿ ಕೇವಲ 50 ಮಕ್ಕಳಿಗಾಗುವಷ್ಟು ವ್ಯವಸ್ಥೆ ಇದೆ. ತರಕಾರಿ ಮತ್ತು ಇತರೆ ಆಹಾರ ಪದಾರ್ಥಗಳಲ್ಲಿ ವ್ಯತ್ಯಾಸ ಕಾಣುತ್ತಿದೆ. ವಾರ್ಡನ್ ಬೇಜವಾಬ್ದಾರಿತನದ ವಿರುದ್ಧ ಕ್ರಮಕ್ಕೆ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಪಟ್ಟಣದ ಕಸಬಾಸ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪಡಿತರ ಆಹಾರ ದಾಸ್ತಾನುನಿನಲ್ಲಿ ವ್ಯತ್ಯಾಸ ಕಂಡು ಬಂದಿದೆ. ಹೆಚ್ಚಿನ ಪ್ರಮಾಣದಲ್ಲಿ ವ್ಯತ್ಯಾಸವಿಲ್ಲದ ಕಾರಣ ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಮುಂದೆ ಇದೇ ರೀತಿ ನಡೆದುಕೊಮಡರೆ ಕ್ರಮ ಕೈಗೊಳ್ಳಲಾಗುವುದು. ತಾಲೂಕಿನ ದೊಡ್ಡಬ್ಯಾಡರಹಳ್ಳಿಯ ನ್ಯಾಯ ಬೆಲೆ ಅಂಗಡಿಯಲ್ಲಿ ಅಕ್ರಮ ಕಂಡು ಬಂದಿದ್ದು, ಅಂಗಡಿ ಮುಚ್ಚಿಸಲು ನಿರ್ದೇಶನ ಆಹಾರ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಜ್ಯೂವೆಲರಿಗಳಲ್ಲಿ ಗ್ರಾಹಕರಿಗೆ ವಂಚನೆ:

ಪಟ್ಟಣದ ಪೊಲೀಸ್ ಠಾಣೆ ರಸ್ತೆಯ ಲಕ್ಷ್ಮೀ ಜ್ಯೂವೆಲರಿ, ಮಹಾಲಕ್ಷೀ ಹಾಗೂ ಮಹೇಶ್ ಜ್ಯೂವೆಲರಿಗಳಲ್ಲಿ ಚಿನ್ನಾಭರಣಗಳ ತೂಕದಲ್ಲಿ ವ್ಯತ್ಯಾಸ ಮಾಡುತ್ತಿರುವುದು ಕಂಡು ಬಂದಿದೆ. ಜ್ಯೂವೆಲರಿ ಮಾಲೀಕರು ಕಳೆದ ಐದು ವರ್ಷದಿಂದ ತೂಕದ ಯಂತ್ರಕ್ಕೆ ಮಾಪಕ ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂದರು.

ಜತೆಗೆ ಮಹಾಲಕ್ಷ್ಮೀ ಜ್ಯೂವೆಲರಿ ಮಾಲೀಕರು ಗಿರವಿ ಅಂಗಡಿಗೆ ಹೆಸರಿನಲ್ಲಿ ಪರವಾನಗಿ ಪಡೆದು ಚಿನ್ನಾಭರಣ ಮಾರಾಟ ಮಾಡುತ್ತಿದ್ದಾರೆ. ತೂಕದಲ್ಲಿ ಮೋಸ, ವಚನೆ ವಿರುದ್ಧ ಕ್ರಮಕ್ಕೆ ಸಮಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.

ಈ ವೇಳೆ ಆಯೋಗದ ಸದಸ್ಯರಾದ ಲಿಂಗರಾಜು ಕೋಟೆ, ಮಾರುತಿ ದೊಡ್ಡಲಿಂಗಣ್ಣನವರ್, ಸುಮಂತ್ ರಾವ್, ರೋಹಿಣಿ, ತಹಸೀಲ್ದಾರ್ ಎಸ್.ಸಂತೋಷ್ ಇತರರು ಇದ್ದರು.