ಸಾರಾಂಶ
ಕನ್ನಡಪ್ರಭ, ಬೆಂಗಳೂರು
2024-25ನೇ ಸಾಲಿನಲ್ಲಿ ಹೊಸದಾಗಿ ಮೂರು ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯ ಜೊತೆಗೆ ಹಾಲಿ ನಿರ್ಮಾಣ ಹಂತದಲ್ಲಿರುವ 3 ಲಕ್ಷ ಮನೆಗಳನ್ನುಬರುವ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ರಾಜ್ಯದಲ್ಲಿರುವ ವಸತಿರಹಿತರ ಸಂಖ್ಯೆಯನ್ನು ಗುರುತಿಸಲು ಸಮೀಕ್ಷೆ ನಡೆಸಲಾಗುವುದು. ಕೊಳೆಗೇರಿ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 1,18,359 ಮನೆಗಳನ್ನು ನಿರ್ಮಿಸಲಾಗುತ್ತಿದೆ.
ಈ ಮನೆಗಳ ಫಲಾನುಭವಿಗಳು ಪಾವತಿಸಬೇಕಾದ ವಂತಿಗೆಯನ್ನು ಒಂದು ಲಕ್ಷ ರು.ಗೆ ಸೀಮಿತಗೊಳಿಸಿ ಹೆಚ್ಚುವರಿ 4 ಲಕ್ಷ ರು.ಯನ್ನು ಸರ್ಕಾರವೇ ಭರಿಸಲು ತೀರ್ಮಾನಿಸಿದೆ. ಸಂಪನ್ಮೂಲಕ್ಕಾಗಿ ಶುಲ್ಕ:
ನಗರ ಪ್ರದೇಶದ ಬಡ ನಿವಾಸಿಗಳಿಗೆ ಕೈಗೆಟಕುವ ದರದಲ್ಲಿ ವಸತಿ ಸೌಲಭ್ಯ ಒದಗಿಸಲು ಸಂಪನ್ಮೂಲ ಕ್ರೋಢೀಕರಿಸಲು ಹಲವು ಕ್ರಮ ಜಾರಿಗೆ ತರಲಿದೆ.
ವಸತಿ ಇಲಾಖೆಯ ಆಸ್ತಿಗಳಿಂದ ಆದಾಯ ಸೃಜನೆ ಕ್ರಮಗಳು, ವಸತಿ ಸೆಸ್ ಮತ್ತು ವಿವಿಧ ಶಾಸನ ಬದ್ಧ ಶುಲ್ಕಗಳನ್ನು ವಿಧಿಸುವ ಮೂಲಕ ಸಂಪನ್ಮೂಲ ಕ್ರೊಢೀಕರಿಸಿ ಕರ್ನಾಟಕ ಗೃಹ ನಿರ್ಮಾಣ ನಿಧಿ (ಕೆಎಎಚ್‌ಎಫ್) ಸ್ಥಾಪಿಸಲು ಯೋಜಿಸಲಾಗಿದೆ. ಕೊಳೆಗೇರಿ ಸೆಸ್ ದರ ಪರಿಷ್ಕರಣೆಗೆ ಯೋಜಿಸಲಾಗಿದೆ.ಕೈಗಾರಿಕಾ ಪಾರ್ಕ್ ಬಳಿ ವಸತಿ ಯೋಜನೆ ಬೇಕಿತ್ತು
ಬೆಂಗಳೂರು ಹೊರವಲಯ ಸೇರಿದಂತೆ ರಾಜ್ಯದ ವಿವಿಧೆಡೆ ಸ್ಥಾಪನೆಯಾಗುವ ಕೈಗಾರಿಕಾ ಪಾರ್ಕ್‌ಗಳ ಸಮೀಪದಲ್ಲಿ ವಸತಿ ಯೋಜನೆಗಳನ್ನು ಸ್ಥಾಪಿಸುವ ಬೇಡಿಕೆಗೆ ಮನ್ನಣೆ ಸಿಗದಿರುವುದು ನಿರಾಶೆ ಮೂಡಿಸಿದೆ.
ಪ್ರಗತಿಯಲ್ಲಿರುವ 3 ಲಕ್ಷ ಮನೆ ಪೂರ್ಣಗೊಳಿಸುವುದು ಮತ್ತು ಹೊಸದಾಗಿ 3 ಲಕ್ಷ ಮನೆ ನಿರ್ಮಾಣ ಕ್ರಮ ಸ್ವಾಗತಾರ್ಹ. ಅದರ ಜೊತೆಗೆ ಕೈಗಾರಿಕೆಗಳ ಸಮೀಪದಲ್ಲೇ ವಸತಿ ಯೋಜನೆಗಳು ಬೇಕಿತ್ತು.
ಇದರಿಂದ ಕಾರ್ಮಿಕರು ದೂರದ ಪ್ರಯಾಣ ತಪ್ಪುತ್ತದೆ. ವಾಹನಗಳ ದಟ್ಟಣೆ, ಕಾರ್ಮಿಕರ ಓಡಾಟ ಕಡಿಮೆಯಾಗಿ ನಗರ ಪ್ರದೇಶಗಳ ಮೇಲೆ ಒತ್ತಡ ಕಡಿಮೆಯಾಗುತ್ತಿತ್ತು. - ಎಂ.ಜಿ.ಬಾಲಕೃಷ್ಣ. ಉಪಾಧ್ಯಕ್ಷ, ಎಫ್‌ಕೆಸಿಸಿಐ
;Resize=(690,390))
;Resize=(128,128))
;Resize=(128,128))
;Resize=(128,128))