ಸಾರಾಂಶ
ದೊಡ್ಡೂರ ಗ್ರಾಪಂ ನೂತನ ಕಟ್ಟಡಕ್ಕೆ ನರೇಗಾ ಯೋಜನೆಯಡಿಯಲ್ಲಿ ಸುಮಾರು ₹20 ಲಕ್ಷ ಮೀಸಡಲಾಗಿದೆ. ದೊಡ್ಡೂರ ಗ್ರಾಪಂ ನೂತನ ಕಟ್ಟಡವು ಸುಸಜ್ಜಿತ ಹಾಗೂ ಗುಣಮಟ್ಟದ ಕಾಮಗಾರಿಯಾಗುವಂತೆ ನೋಡಿಕೊಳ್ಳುವ ಕಾರ್ಯ ಆಡಳಿತ ಮಂಡಳಿ ಮಾಡಬೇಕು
ಲಕ್ಷ್ಮೇಶ್ವರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡುತ್ತಿಲ್ಲ,ಇದರಿಂದ ಗೊತ್ತಾಗುತ್ತದೆ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು. ಬುಧವಾರ ಸಮೀಪದ ದೊಡ್ಡೂರ ಗ್ರಾಪಂನ ನೂತನ ಕಟ್ಟಡದ ಭೂಮಿ ಪೂಜೆ ಕಾಮಗಾರಿಗಳಿಗೆ ಸಸಿ ನೀರು ಉಣಿಸುವ ಮೂಲಕ ನೆರವೇರಿಸಿ ಮಾತನಾಡಿದರು.
ದೊಡ್ಡೂರ ಗ್ರಾಪಂ ನೂತನ ಕಟ್ಟಡಕ್ಕೆ ನರೇಗಾ ಯೋಜನೆಯಡಿಯಲ್ಲಿ ಸುಮಾರು ₹20 ಲಕ್ಷ ಮೀಸಡಲಾಗಿದೆ. ದೊಡ್ಡೂರ ಗ್ರಾಪಂ ನೂತನ ಕಟ್ಟಡವು ಸುಸಜ್ಜಿತ ಹಾಗೂ ಗುಣಮಟ್ಟದ ಕಾಮಗಾರಿಯಾಗುವಂತೆ ನೋಡಿಕೊಳ್ಳುವ ಕಾರ್ಯ ಆಡಳಿತ ಮಂಡಳಿ ಮಾಡಬೇಕು.ಅಲ್ಲದೆ ದೊಡ್ಡೂರ ಗ್ರಾಪಂ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳ ಶಾಲೆಗಳಲ್ಲಿ ಬಿಸಿಯೂಟದ ಅಡುಗೆ ಕೋಣೆ ನಿರ್ಮಿಸಲು ಹಾಗೂ ವಿವಿಧ ಕಾಮಗಾರಿಗಳಿಗೆ ಇಂದು ಭೂಮಿ ಪೂಜೆ ನೆರವೇರಿಸಿದ್ದು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡುವ ಮೂಲಕ ಸರ್ಕಾರದ ಹಣ ಸದುಪಯೋಗವಾಗುವಂತೆ ನೋಡಿಕೊಳ್ಳಬೇಕು, ದೊಡ್ಡೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಸೇತುವೆ ಶಿಥಿಲಗೊಂಡಿದ್ದು, ಶಿಥಿಗೊಂಡ ಸೇತುವೆ ನಿರ್ಮಾಣಕ್ಕೆ ಈಗಾಗಲೆ ಸರ್ವೇ ಕಾರ್ಯ ನಡೆಸಲಾಗಿದ್ದು, ಶೀಘ್ರದಲ್ಲಿ ಸೇತುವೆ ಕಾಮಗಾರಿ ಆರಂಭಿಸುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು, ದೊಡ್ಡೂರ-ಬೆಳ್ಳಟ್ಟಿ ರಸ್ತೆ ನಿರ್ಮಾಣಕ್ಕೆ ₹ 10 ಕೋಟಿ ವೆಚ್ಚದ ಯೋಜನೆ ತಯಾರಿಸಲಾಗಿದ್ದು ಆ ಕಾಮಗಾರಿಗೆ ಶೀಘ್ರದಲ್ಲಿ ಭೂಮಿ ಪೂಜೆ ನೆರವೇರಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದ ಅವರು, ರಾಜ್ಯದಲ್ಲಿ ವಿವಿಧ ಕಾಮಗಾರಿ ಮಾಡಿರುವ ಗುತ್ತಿಗೆದಾರರಿಗೆ ನೀಡಲು ಹಣವಿಲ್ಲದೆ ಸರ್ಕಾರ ದಿವಾಳಿಯಾಗಿದೆ.ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ ಎಂದು ಹೇಳಿದರು.ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು, ಮಾಜಿ ಶಾಸಕ ರಾಮಣ್ಣ ಲಮಾಣಿ, ತಹಸೀಲ್ದಾರ್ ವಾಸುದೇವ ಸ್ವಾಮಿ, ತಾಪಂ ಇಓ ಕೃಷ್ಣಪ್ಪ ಧರ್ಮರ, ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಈಳಗೇರ, ಉಪಾಧ್ಯಕ್ಷೆ ಸುಶೀಲವ್ವ ಲಮಾಣಿ, ಗ್ರಾಪಂ ಸದಸ್ಯರಾದ ಫಕ್ಕೀರಗೌಡ ಭರಮಗೌಡರ, ನೀಲವ್ವ ಕಟಗಿ, ನಿಂಗಪ್ಪ ಬಂಕಾಪೂರ, ಜಯಮ್ಮ ಮಣ್ಣಮ್ಮನವರರ, ದೇವಕ್ಕ ತೋಟದ, ಸಾಕವ್ವ ಲಮಾಣಿ, ಇಂದ್ರವ್ವ ಲಮಾಣಿ, ಮಹಾಂತೇಶ ಲಮಾಣಿ, ಮಧುಮಾಲತಿ, ಈಳಗೇರ, ಮಹಾಂತೇಶ ಲಮಾಣಿ, ಲಕ್ಷ್ಮೀ ಅಂಗಡಿ, ಬಿ.ಎಸ್.ಈಳಗೇರ. ಅಮರಪ್ಪ ಗುಡಗುಂಟಿ, ಟೋಪಣ್ಣ ಲಮಾಣಿ, ಪುಂಡಲೀಕ ಲಮಾಣಿ ಇದ್ದರು.
ಈ ವೇಳೆ ಪಿಡಿಓ ಶಿವಾನಂದ ಮಾಳವಾಡ ಸ್ವಾಗತಿಸಿದರು. ಮುಖ್ಯೋಪಾಧ್ಯಾಯರು ನಿರ್ವಹಿಸಿದರು. ರಾಮಯ್ಯ ಗುರುವಿನ ವಂದಿಸಿದರು.