ರಾಜ್ಯ ಸರ್ಕಾರವು ಭೀಕ್ಷೆ ರೂಪದಲ್ಲಿ ರೈತರಿಗೆ ಬರ ಪರಿಹಾರ ನೀಡಿದೆ ಎಂದು ಕಲಬುರಗಿಯಲ್ಲಿ ಬಿಜೆಪಿ ಮುಖಂಡ, ಎಂಎಲ್‌ಸಿ ಎನ್. ರವಿಕುಮಾರ್ಸ ರ್ಕಾರದ ವಿರುದ್ಧ ಕಿಡಿ ಕಾರಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ ರಾಜ್ಯ ಸರ್ಕಾರವು ಭೀಕ್ಷೆ ರೂಪದಲ್ಲಿ ರೈತರಿಗೆ ಬರ ಪರಿಹಾರ ನೀಡಿದೆ ಎಂದು ಕಲಬುರಗಿಯಲ್ಲಿ ಬಿಜೆಪಿ ಮುಖಂಡ, ಎಂಎಲ್‌ಸಿ ಎನ್. ರವಿಕುಮಾರ್ಸ ರ್ಕಾರದ ವಿರುದ್ಧ ಕಿಡಿ ಕಾರಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಎಕರೆಗೆ ಒಬ್ಬ ರೈತ 15 ರಿಂದ 50 ಸಾವಿರ ಖರ್ಚು ಮಾಡಿದ್ದಾನೆ. ಆದರೆ ಕೊಟ್ಟಿದ್ದೆಷ್ಟು? ಈ ಸರ್ಕಾರಕ್ಕೆ ನಾಚಿಕೆಯಾಗಬೇಕು. ಮಳೆ ಇಲ್ಲ, ಬೆಳೆ ಸಂಪೂರ್ಣ ಹಾಳಾಗಿದೆ. ಜಾನುವಾರುಗಳಿಗೆ ಬದುಕಿಸಿಕೊಳ್ಳುವುದು ಹೇಗೆ ಅಂತ ರೈತ ಚಿಂತೆಯಲ್ಲಿದ್ದಾನೆ. ಆದ್ರೆ ಈ ಸರ್ಕಾರದ ಪ್ರತಿಯೊಬ್ಬ ರೈತರಿಗೆ ಘೋಷಣೆ ಮಾಡಿದ್ದು ಕೇವಲ 2,500 ರೂಪಾಯಿ ಮಾತ್ರ. ಸರ್ಕಾರದ್ದು ರೈತ ವಿರೋಧಿ ಧೋರಣೆ ಎಂದು ಟೀಕಿಸಿದರು.

ರೈತರಿಗೆ ಬಿಕ್ಷೆ ಕೊಟ್ಟ ಹಾಗೇ ಈ ರೀತಿ ಕನಿಷ್ಠ ಹಣ ಕೊಡಲು ಅವರಿಗೆ ನಾಚಿಕೆ ಆಗಬೇಕು. ರೈತ ವಿದ್ಯಾರ್ಥಿಗಳಿಗೆ 10 ರಿಂದ 15 ಸಾವಿರ ಸ್ಕಾಲರ್ಶಿಪ್ ಕೊಡುವುದನ್ನೂ ಸಹ ನಿಲ್ಲಿಸಿದ್ದಾರೆ. ನಮ್ಮ ಸರ್ಕಾರವಿದ್ದಾಗ ಈ ಯೋಜನೆಯಿಂದ ರೈತರ ಮಕ್ಕಳಿಗೆ ಸಾಕಷ್ಟು ಅನುಕೂಲ ಆಗುತ್ತಿತ್ತು. ಈ ಎಲ್ಲಾ ವಿಚಾರಗಳನ್ನು ಚುನಾವಣೆಗೆ ತೆಗೆದುಕೊಂಡು ಹೋಗುತ್ತೇವೆ ಎಂದು ರವಿ ಕುಮಾರ್‌ ಹೇಳಿದರು.ಎಸ್‌ಐಆರ್ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡ್ತಿದೆ. ಹಿಂದೆ ಇದೇ ಕಾಂಗ್ರೆಸ್ ಪಾರ್ಟಿ ದೇಶದಲ್ಲಿ 12 ಬಾರಿ ಎಸ್‌ಐಆರ್ ಮಾಡಿದೆ. ಈ ವಿಚಾರ ಇದೇ ಜಿಲ್ಲೆಯ ಎಐಸಿಸಿ ಅಧ್ಯಕ್ಷರಿಗೆ ಗೊತ್ತಿಲ್ಲವೇ? ಮತದಾರರ ಹೆಸರು ಎರಡು ಕಡೆ ಇದ್ರೆ ಒಂದು ರದ್ದಾಗಬೇಕಾ ಬೇಡ್ವಾ? ಮತದಾರರ ಪಟ್ಟಿ ಶುದ್ಧೀಕರಣ ಆಗಬೇಕಾ ಬೇಡ್ವಾ? ಮತದಾರರ ಹೆಸರುಗಳನ್ನ ಡಿಲಿಟ್ ಮಾಡಲಾಗುತ್ತಿದೆ ಎನ್ನುವ ಕಾಂಗ್ರೆಸ್ ಆರೋಪ ಶುದ್ಧ ಸುಳ್ಳು ಎಂದರು.ಎರಡುಮೂರು ಕಡೆ ವೋಟ್ ಹಾಕುವವರಿಂದಲೇ ಕಾಂಗ್ರೆಸ್ ಹಿಂದಿನ ಚುನಾವಣೆ ಗೆದ್ದಿರುವುದು. ಹಾಗಾಗಿ ಅವರ ದೊಡ್ಡಮಟ್ಟದ ವೋಟ್ ಬ್ಯಾಂಕ್ ಕೈ ತಪ್ಪಿ ಹೋಗುವ ಆತಂಕ ಕಾಂಗ್ರೆಸ್ ನಾಯಕರಿಗೆ ಕಾಡುತ್ತಿದೆ. ಅದಕ್ಕಾಗಿ ದೇಶದ್ಯಾಂತ ಈ ಬಗ್ಗೆ ಗೊಂದಲ ಸೃಷ್ಟಿಸಿ ವಿವಾದ ಎಬ್ಬಿಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಹೆಸರೋ ಅಥವಾ ಇನ್ಯಾರೋ ಖಾದರ್ ಎನ್ನುವವರ ಹೆಸರೋ ಎರಡು ಕಡೆ ಇದ್ದರೆ ಪರಿಷ್ಜರಣೆ ಮಾಡಬಾರದಾ ? ಇದೆಲ್ಲವೂ ಪರಿಷ್ಕರಣೆ ಆಗಬೇಕು. ಇವಿಎಂ ಮೂಲಕವೇ ಮತದಾನ ನಡೆಯಬೇಕು ಎಂದು ಎನ್ ರವಿಕುಮಾರ ಆಗ್ರಹಿಸಿದರು.