ರಾಜ್ಯ ಸರ್ಕಾರದಿಂದ ಬಂಡವಾಳಶಾಹಿಗಳ ಪರವಾದ ಬಜೆಟ್ ಮಂಡನೆ: ವೆಂಕಟಗಿರಿಯಯ್ಯ

| Published : Mar 13 2025, 12:47 AM IST

ರಾಜ್ಯ ಸರ್ಕಾರದಿಂದ ಬಂಡವಾಳಶಾಹಿಗಳ ಪರವಾದ ಬಜೆಟ್ ಮಂಡನೆ: ವೆಂಕಟಗಿರಿಯಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಉತ್ಪಾದನಾ ವೆಚ್ಚ ಕಡಿಮೆ ತೋರಿಸಿ ಮಂಡಿಸಿದ್ದು, ೪ ಲಕ್ಷ ಕೋಟಿಯಲ್ಲಿ ೧೧೬ ಸಾವಿರ ಕೋಟಿ ಸಾಲ ಮಾಡಿ ಮಂಡಿಸಲಾಗಿದ್ದು, ಇದೊಂದು ವಿತ್ತೀಯ ಬಜೆಟ್ ಕೊರತೆಯ ಬಜೆಟ್ಟಾಗಿದೆ. ರಾಜ್ಯ ಎಸ್ಸಿ/ಎಸ್ಟಿ ಉಪಯೋಜನೆಯ ಕಾಯ್ದೆಯನ್ವಯ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಕಾಯ್ದೆಯಡಿ ಅನುದಾನ ಮೀಸಲಿಟ್ಟಿರುವುದು ಅವೈಜ್ಞಾನಿವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಡವಾಳಶಾಹಿಗಳ ಪರವಾದ ಬಜೆಟ್ ಮಂಡಿಸುವ ಮೂಲಕ ಸಂವಿಧಾನ, ಶೋಷಿತ ವರ್ಗದವರ ವಿರೋಧಿ ಬಜೆಟ್ ನೀಡಿದ್ದಾರೆ ಎಂದು ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆರೋಪಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಜೆಟ್ ಸಂವಿಧಾನದ ಅನುಚ್ಛೇದ ೩೮,೩೯ನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಪ್ರಗತಿ ವಿರೋಧಿತನವನ್ನು ಬಿಂಬಿಸುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಉತ್ಪಾದನಾ ವೆಚ್ಚ ಕಡಿಮೆ ತೋರಿಸಿ ಮಂಡಿಸಿದ್ದು, ೪ ಲಕ್ಷ ಕೋಟಿಯಲ್ಲಿ ೧೧೬ ಸಾವಿರ ಕೋಟಿ ಸಾಲ ಮಾಡಿ ಮಂಡಿಸಲಾಗಿದ್ದು, ಇದೊಂದು ವಿತ್ತೀಯ ಬಜೆಟ್ ಕೊರತೆಯ ಬಜೆಟ್ಟಾಗಿದೆ ಎಂದು ಹೇಳಿದರು.

ರಾಜ್ಯ ಎಸ್ಸಿ/ಎಸ್ಟಿ ಉಪಯೋಜನೆಯ ಕಾಯ್ದೆಯನ್ವಯ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಕಾಯ್ದೆಯಡಿ ಅನುದಾನ ಮೀಸಲಿಟ್ಟಿರುವುದು ಅವೈಜ್ಞಾನಿವಾಗಿದೆ. ಎಸ್ಸಿ/ಎಸ್ಟಿ ಜಾತಿ ಜನಸಂಖ್ಯೆಯನ್ನು ಅಂತಿಮವಾಗಿ ಪಡೆಯದೇ ೨೦೨೧ರಲ್ಲಿ ಪಡೆದ ಜಾತಿ ಜನಸಂಖ್ಯೆಗನುಗುಣವಾಗಿ ಅನುದಾನ ಮೀಸಲಿಟ್ಟು ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅನುದಾನವನ್ನು ೪೨ ಸಾವಿರ ಕೋಟಿ ರು. ಮೀಸಲಿಟ್ಟಿದ್ದು, ಅದರಲ್ಲಿ ೧೦೦ ಕೂಟಿಯೂ ಸಹ ಸಮುದಾಯವನ್ನು ಸೇರಿವುದಿಲ್ಲ ಎಂಬುದು ೧೦ ವರ್ಷದ ಇತಿಹಾಸ ಹೇಳುತ್ತಿದ್ದು, ತಾವು ನೀಡಿದ ಗ್ಯಾರೆಂಟಿ ಹಾಗೂ ಇತರೆ ಯೋಜನೆಗಳಿಗೆ ಸದರಿ ಹಣವನ್ನು ಬಳಕೆ ಮಾಡುತ್ತಾರೆ ಎಂದು ದೂರಿದರು.

ರಾಜ್ಯ ಸರ್ಕಾರ ಬಹುಜನರ ಪಾಲು ನೀಡದ ಬಹುಜನ ವಿರೋ ನಡವಳಿಕೆಯನ್ನು ಬಿಡದೇ ಹೋದರೆ ಮುಂದಿನ ದಿನಗಳಲ್ಲಿ ಕದಸಂಸ ರಾಜ್ಯ ಮಂತ್ರಿಗಳಿಗೆ ಕಂಡಲ್ಲಿ ಘೇರಾವ್ ಹಾಕುವ ಕೆಲಸ ಮಾಡಲಾಗುವುದು ಎಂದು ಎಚ್ಚರಿಸಿದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಒತ್ತಾಯ:

ಅಷ್ಟಲ್ಲದೆ ಜಿಲ್ಲೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹೋಬಳಿ ಕೇಂದ್ರಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಕೆರೆಗಳ ಹೂಳೆತ್ತಿಸಿ ತುಂಬುದು, ಮೈಷುಗರ್ ಮೇಲ್ದರ್ಜೆಗೆ ಒಂದೇ ಕಂತಿನಲ್ಲಿ ಅನುದಾನ ಘೋಷಣೆ, ಟನ್ ಕಬ್ಬಿಗೆ ೫ ಸಾವಿರ ರು. ನಿಗದಿ ಸೇರಿದಂತೆ ಜಿಲ್ಲಾ ಸಂಬಂಧ ಬೇಡಿಕೆಗಳನ್ನು ಈಡೇರಿಸಲು ಸ್ಪಂದಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ ಎಂದು ಕಿಡಿ ಕಾರಿದರು.

ಗೋಷ್ಠಿಯಲ್ಲಿ ಮೈಸೂರು ವಿಭಾಗೀಯ ಸಂಚಾಲಕ ಅನಿಲ್‌ಕುಮಾರ್, ಜಿಲ್ಲಾಧ್ಯಕ್ಷ ಬಿ.ಆನಂದ್, ವೈ.ಸುರೇಶ್ ಕುಮಾರ್, ಮೀನಾಕ್ಷಿ ಕೃಷ್ಣ, ರಾಜು, ತಮ್ಮಯ್ಯ, ರಂಗಸ್ವಾಮಿ ಇದ್ದರು.