ಡಂಬಳ: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಗ್ರಾಮೀಣ ರಸ್ತೆ ಅಭಿವೃದ್ಧಿ, ಶಿಕ್ಷಣ ಮೂಲ ಸೌಕರ್ಯ ಸುಧಾರಣೆಗೆ ರಾಜ್ಯ ಸರ್ಕಾರ ಒತ್ತು ನೀಡಿದೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.

ಡಂಬಳ ಹೋಬಳಿಯ ಜಂತ್ಲಿ ಶಿರೂರ ಗ್ರಾಮದಲ್ಲಿ 2024- 25ನೇ ಸಾಲಿನ ಮಳೆ ಪರಿಹಾರ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಪ್ರತಿ ಗ್ರಾಮದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆಗೆ ಸೂಕ್ತ ವಾತಾವರಣ ನಿರ್ಮಾಣಕ್ಕಾಗಿ ಸರ್ಕಾರಿ ಶಾಲೆಗಳ ನವೀಕರಣ, ಸ್ಮಾರ್ಟ್ ತರಗತಿ ಕೊಠಡಿಗಳ ಸ್ಥಾಪನೆ ಮಾಡಲಾಗುತ್ತಿದೆ ಎಂದರು.

ಈಗಾಗಲೆ ಕಂದಾಯ ಇಲಾಖೆಯಲ್ಲಿ ಹಲವು ದಶಕಗಳಿಂದ ಇತ್ಯರ್ಥವಾಗದೇ ಬಾಕಿ ಉಳಿದಿದ್ದ ದರಕಾಸ್ತು ಪೋಡಿ, ಪೌತಿ ಖಾತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು ರೈತರು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ರಾಜ್ಯ ಬಜೆಟ್ ನಂತರ ಜನರು ದೃಢೀಕೃತ ಪಹಣಿ, ಸ್ಕೆಚ್ ಕಾಪಿ, ಇಸಿ, ಎಂಆರ್ ಹಾಗೂ ಆಕಾರ್‌ಬಂದ್ ದಾಖಲೆಗಳನ್ನು ಆನಲೈನ್ ಮೂಲಕವೇ ಪಡೆಯುವ ಏಕವ್ಯವಸ್ಥೆ ತ್ವರಿತವಾಗಿ ಬರಲಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಮಾತನಾಡಿ, ಪೇಠಾಲೂರ ಸರ್ಕಾರಿ ಹಿರಿಯ ಮಾದರಿ ಕೇಂದ್ರ ಶಾಲೆಯ ನವೀಕರಣದಿಂದ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಸಿಗಲಿದೆ. ತಾಲೂಕಿನ ಎಲ್ಲ ಶಾಲೆಗಳ ದುರಸ್ತಿ ಮತ್ತು ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ಮತ್ತು ಈ ಭಾಗದ ಶಾಸಕ ಜಿ.ಎಸ್. ಪಾಟೀಲ ಅವರು ಒತ್ತು ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವೀರಯ್ಯ ಸೋಮನಕಟ್ಟಿಮಠ, ಇಒ ವಿಶ್ವನಾಥ ಹೊಸಮನಿ, ಮುಂಡರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ, ಮುಖಂಡರಾದ ಅಬ್ದುಲ ಕಲಕೇರಿ, ಹಾಲಪ್ಪ‌ ಕಬ್ಬೇರಳ್ಳಿ,‌ ಎಸ್ಡಿಎಂಸಿ ಅಧ್ಯಕ್ಷ ಅಶೋಕ ಕಬ್ಬೇರಳ್ಳಿ, ಯಲ್ಲಪ್ಪ ಕರಮುಡಿ, ಭೀಮರಡ್ಡಿ ಪಾಟೀಲ, ಹೇಮಣ್ಣ ಪೂಜಾರ, ರವಿ ದೊಡ್ಡಮನಿ, ಪುಲಕೇಶಗೌಡ, ಭುವನೇಶ್ವರಿ ಕಲ್ಲಕುಟಿಗರ, ಶರಣಪ್ಪ‌ ಶಿರುಂದ, ಬಸವರಡ್ಡಿ ಬಂಡಿಹಾಳ, ಬಶೀರ ಹಾರೂಗೇರಿ, ಬಸವರಾಜ ಶಿರೋಳ, ಹನುಮಂತಪ್ಪ ಹೊಸಮನಿ, ಶಿಕ್ಷಕ , ವಿಶ್ವನಾಥ ಪಾಟೀಲ, ಪ್ರಥಮದರ್ಜೆ ಗುತ್ತಿಗೆದಾರ ಪಾಲಕ್ಷಿಗೌಡ ಪಾಟೀಲ, ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಪಿಡಬ್ಲ್ಯುಡಿ ಅಧಿಕಾರಿ ನಾಗೇಂದ್ರ ಪಟ್ಟಣಶೆಟ್ಟರ ಇತರರು ಇದ್ದರು. ಎಂ.ಎಂ. ಬಂಡಿ ನಿರೂಪಿಸಿ, ವಂದಿಸಿದರು.