ಕೊಪ್ಪಕನ್ನಡ ಜಾನಪದ ಪರಿಷತ್ತು ಬೆಂಗಳೂರು, ಜಿಲ್ಲಾ ಘಟಕ ಚಿಕ್ಕಮಗಳೂರು, ತಾಲೂಕು ಘಟಕ ಕೊಪ್ಪ, ಕೊಪ್ಪ ತಾಲೂಕು ಮಹಿಳಾ ಘಟಕದಿಂದ ರಾಷ್ಟ್ರಮಟ್ಟದ ಥ್ರೋ ಬಾಲ್ ಕ್ರೀಡೆಯಲ್ಲಿ ವಿಜೇತರಾಗಿ ಸಾಧನೆ ಮೆರೆದಿರುವ ಕೊಪ್ಪ ತಾಲೂಕಿನ ಕ್ರೀಡಾ ಪ್ರತಿಭೆ ವಿಘ್ನೇಶ್ ಬಿ.ಸಿ ಇವರನ್ನು ಬಾಳಗಡಿಯಲ್ಲಿ ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಕೊಪ್ಪ

ಕನ್ನಡ ಜಾನಪದ ಪರಿಷತ್ತು ಬೆಂಗಳೂರು, ಜಿಲ್ಲಾ ಘಟಕ ಚಿಕ್ಕಮಗಳೂರು, ತಾಲೂಕು ಘಟಕ ಕೊಪ್ಪ, ಕೊಪ್ಪ ತಾಲೂಕು ಮಹಿಳಾ ಘಟಕದಿಂದ ರಾಷ್ಟ್ರಮಟ್ಟದ ಥ್ರೋ ಬಾಲ್ ಕ್ರೀಡೆಯಲ್ಲಿ ವಿಜೇತರಾಗಿ ಸಾಧನೆ ಮೆರೆದಿರುವ ಕೊಪ್ಪ ತಾಲೂಕಿನ ಕ್ರೀಡಾ ಪ್ರತಿಭೆ ವಿಘ್ನೇಶ್ ಬಿ.ಸಿ ಇವರನ್ನು ಬಾಳಗಡಿಯಲ್ಲಿ ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು. ಕೊಪ್ಪ ತಾಲೂಕು ಜಯಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಳಗುಂಡಿ ಗ್ರಾಮದ ಚಂದ್ರಶೇಖರ್ ವಸಂತಿ ದಂಪತಿ ಸುಪುತ್ರ ವಿಘ್ನೇಶ್ ಬಿ.ಸಿ. ಪ್ರಾಥಮಿಕ ಶಿಕ್ಷಣವನ್ನು ಜಯಪುರದ ಪಾಂಚಜನ್ಯ ವಿದ್ಯಾಸಂಸ್ಥೆಯಲ್ಲಿ ಮುಗಿಸಿ ಪ್ರೌಡಶಾಲಾ ಶಿಕ್ಷಣವನ್ನು ಬಿಜಿಎಸ್ ಶಾಲೆಯಲ್ಲಿ, ಶೃಂಗೇರಿ ಪದವಿಪೂರ್ವ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ(ವಿಜ್ಞಾನ)ವ್ಯಾಸಂಗ ಮಾಡುತ್ತಿದ್ದಾರೆ.ಪ್ರಾಥಮಿಕ ವಿದ್ಯಾಭ್ಯಾಸ ಹಂತದಲ್ಲಿಯೇ ಥ್ರೋಬಾಲ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಶಿಕ್ಷಣ ಇಲಾಖೆಯಿಂದ ನಡೆಸುವ ತಾಲೂಕು, ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಮಂಡ್ಯದಲ್ಲಿ ನಡೆದ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ಯಲ್ಲಿ ಆಯ್ಕೆಯಾಗಿ ಇದೇ ಡಿಸೆಂಬರ್ ೦೫ ರಿಂದ ೦೭ ರವರೆಗೆ ಮಹಾರಾಷ್ಟ್ರದಲ್ಲಿ ನಡೆದ ರಾಷ್ಟ್ರಿಯ ಥ್ರೋಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕರ್ನಾಟಕ ತಂಡ ಜಯಗಳಿಸಲು ಪ್ರಮುಖ ಆಗಿರುತ್ತಾರೆ.ಸನ್ಮಾನ ಸಂದರ್ಭದಲ್ಲಿ ವಿಘ್ನೇಶ್ ಬಿ.ಸಿ. ನ ತಂದೆ ತಾಯಿ, ಕನ್ನಡ ಜಾನಪದ ಪರಿಷತ್ತು ಚಿಕ್ಕಮಗಳೂರು ಜಿಲ್ಲಾ ಘಟಕ, ಅಧ್ಯಕ್ಷರು ಓಣಿತೋಟ ರತ್ನಾಕರ್, ಕೊಪ್ಪ ತಾಲೂಕು ಘಟಕ ಅಧ್ಯಕ್ಷರು ಹೇಮಂತ್ ಶೆಟ್ಟಿ, ಕೊಪ್ಪ ಮಹಿಳಾ ಘಟಕ ಅಧ್ಯಕ್ಷೆ ಮೈತ್ರಾ ಗಣೇಶ್, ಪಪಂ. ನಾಮನಿರ್ದೇಶಿತ ಸದಸ್ಯರಾದ ಸುಮ ಪರ್ವತೇಗೌಡ, ಸಂದೇಶ್, ಕಾಂಗ್ರೆಸ್ ವಕ್ತಾರ ಸಂತೋಷ್ ಕುಲಾಸೋ ಮುಂತಾದವರಿದ್ದರು.